Advertisement

ಹಿಜಾಬ್-ಕೇಸರಿ ಶಾಲು ಸಂಘರ್ಷ: ಗಂಗಾವತಿಯಲ್ಲಿ ಪೋಲಿಸರಿಂದ ರೂಟ್ ಮಾರ್ಚ್

02:39 PM Feb 13, 2022 | Team Udayavani |

ಗಂಗಾವತಿ: ರಾಜ್ಯದಲ್ಲಿ ಕೆಲವು ದಿನಗಳಿಂದ ಗೊಂದಲಕ್ಕೆ ಕಾರಣವಾಗಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿಷಯದಲ್ಲಿ ಗಂಗಾವತಿಯಲ್ಲಿ ಯಾವುದೇ ಗಲಭೆ ಗೊಂದಲ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿ ಭಾನುವಾರ ಪೊಲೀಸ್ ರೂಟ್ ಮಾರ್ಚ್ ನಡೆಸಲಾಯಿತು .

Advertisement

ಪೊಲೀಸ್ ಮಾರ್ಚ್ ಗೆ ಚಾಲನೆ ನೀಡಿದ ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ ಮಾತನಾಡಿ , ಹಿಜಾಬ್ ಮತ್ತು ಕೇಸರಿ ಶಾಲಿನ ವಿಷಯ ಈಗ ಹೈಕೋರ್ಟ್ ನಲ್ಲಿದ್ದು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಗರದಲ್ಲಿರುವ  ಶಾಲೆ ಕಾಲೇಜುಗಳಿಗೆ ಈಗಾಗಲೇ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಸೋಮವಾರದಿಂದ ಶಾಲೆಗಳು ಆರಂಭವಾಗುವುದರಿಂದ ಯಾವುದೇ ಗೊಂದಲ ಮೂಡದಂತೆ ನಗರದಲ್ಲಿ ಪೊಲೀಸ್ ಮಾರ್ಚ್ ನಡೆಸಿ ಜನರಿಗೆ ಆತ್ಮ ಸ್ಥೈರ್ಯವನ್ನು ತುಂಬಲಾಗುತ್ತಿದೆ ಎಂದರು.

ಯಾವುದೇ ಕಾರಣಕ್ಕೂ ಜನರು ಧೈರ್ಯಗೆಡಬಾರದು ಜತೆಗೆ ವಿದ್ಯಾರ್ಥಿಗಳು ಎಂದಿನಂತೆ ವಿದ್ಯಾಭ್ಯಾಸ ಮಾಡಲು ಶಾಲೆಗಳಿಗೆ ಬರಬೇಕು ಸರ್ಕಾರದ ಸೂಚನೆಯಂತೆ ಯಾವುದೇ ಬಣ್ಣದ ಕರವಸ್ತ್ರ ಅಥವಾ ಶಾಲುಗಳನ್ನು ಹಾಕಿಕೊಂಡು ಬರದೆ ಶಾಲೆಗೆ ಸಂಬಂಧಪಟ್ಟ ಪಠ್ಯಪುಸ್ತಕಗಳು ಮಾತ್ರ ತೆಗೆದುಕೊಂಡು ಬರಬೇಕು. ಜೊತೆಗೆ ಪ್ರತಿ ಶಾಲಾ ಕಾಲೇಜುಗಳ ಮುಂದೆ ಪೊಲೀಸ್ ಕಾವಲು ಹಾಕಲಾಗಿದೆ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ಹಿಜಾಬ್ ಮತ್ತು ಕೇಸರಿ ಶಾಲು ಕುರಿತು ಕೋಮು ಪ್ರಚೋದನಾತ್ಮಕ ಹೇಳಿಕೆ ಅಥವಾ ಸ್ಟೇಟಸ್ ಗಳನ್ನು ಹಾಕಿದರೆ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಆದ್ದರಿಂದ ಪ್ರತಿಯೊಬ್ಬರು ನಗರದಲ್ಲಿ ಶಾಂತಿ ಶಿಸ್ತು ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದರು.

ಪೊಲೀಸ್ ಅಧಿಕಾರಿಗಳಾದ ವೆಂಕಟಸ್ವಾಮಿ, ನಿಂಗಪ್ಪ, ಉದಯರವಿ, ಸುವಾರ್ತಾ ಸೇರಿದಂತೆ ಅನೇಕರು ಪೊಲೀಸ್ ರೂಟ್  ಮಾರ್ಚ್ ನಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next