Advertisement

ಹಿಜಾಬ್‌ ಪ್ರತಿಭಟನೆ: ಇರಾನ್‌ನಲ್ಲಿ ಹಿಂಸಾಚಾರಕ್ಕೆ 50 ಬಲಿ

10:34 PM Sep 26, 2022 | Team Udayavani |

ತೆಹ್ರಾನ್‌: ಹಿಜಾಬ್‌ ಸರಿಯಾಗಿ ಧರಿಸಿರಲಿಲ್ಲ ಎಂಬ ಕಾರಣಕ್ಕೆ ಬಂಧಿತಳಾದ 22 ವರ್ಷದ ಯುವತಿ ಮೆಹ್ಸಾ ಅಮಿನಿ, ಪೊಲೀಸರ ವಶದಲ್ಲಿ ಮೃತಪಟ್ಟ ಬೆನ್ನಲ್ಲೇ ಆರಂಭಗೊಂಡ ಉಗ್ರ ಪ್ರತಿಭಟನೆಗಳು ಈಗ ಇರಾನ್‌ ದೇಶಾದ್ಯಂತ ವ್ಯಾಪಿಸಿವೆ.

Advertisement

ಪೊಲೀಸರ ನೈತಿಕಗಿರಿ ಖಂಡಿಸಿ ಇರಾನ್‌ ಮಹಿಳೆಯರು ಅಕ್ಷರಶಃ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪ್ರಮುಖ 13 ನಗರಗಳಲ್ಲಿ ಪ್ರತಿಭಟನೆಗಳು ವ್ಯಾಪಿಸಿವೆ. ಈ ವೇಳೆ ಉಂಟಾದ ಹಿಂಸಾಚಾರದಲ್ಲಿ ಪೊಲೀಸರು ಸೇರಿ ಈವರೆಗೂ 50 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ತಮ್ಮ ಸ್ವಾತಂತ್ರ್ಯ ಮತ್ತು ಹಕ್ಕನ್ನು ಪ್ರತಿಪಾದಿಸಿ ಇರಾನ್‌ ಮಹಿಳೆಯರು ಹಿಜಾಬ್‌ ಸುಡುತ್ತಿದ್ದಾರೆ. ಪ್ರತಿಭಟನೆ ರೂಪವಾಗಿ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ. ಹಿಜಾಬ್‌ ಹಾಕದೇ ಬೀದಿಗೆ ಬರುತ್ತಿದ್ದಾರೆ. ಕೂದಲನ್ನು ಬಾವುಟದಂತೆ ಕೋಲಿಗೆ ಕಟ್ಟಿ ಪ್ರದರ್ಶಿಸುತ್ತಿದ್ದಾರೆ.

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ನೇತೃತ್ವದ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ಪ್ರತಿಭಟನೆಗಳು ಹೆಚ್ಚುತ್ತಿವೆ. ನಿಯಂತ್ರಣದ ಭಾಗವಾಗಿ ಅಲ್ಲಿನ ಸರ್ಕಾರ, ಸಾಮಾಜಿಕ ಜಾಲತಾಣಗಳನ್ನು ಬಂದ್‌ ಮಾಡಿವೆ. ಇರಾನ್‌ನಲ್ಲಿ ಆರಂಭವಾದ ಪ್ರತಿಭಟನೆ ಸಿರಿಯಾ ಸೇರಿದಂತೆ ಬೇರೆ ದೇಶಗಳಿಗೂ ಹಬ್ಬುತ್ತಿದೆ.

ಲಂಡನ್‌ನಲ್ಲಿ ಪ್ರತಿಭಟನೆ
ಇಂಗ್ಲೆಂಡ್‌ನ‌ ಲಂಡನ್‌ನಲ್ಲಿ ಇರಾನ್‌ ರಾಯಭಾರ ಕಚೇರಿಯ ಎದುರು ದೊಡ್ಡ ಸಂಖ್ಯೆಯ ಜನರು, ಮೆಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅನೇಕ ಪ್ರತಿಭಟನಾಕಾರು ಹಾಗೂ ಕನಿಷ್ಠ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇದೇ ವೇಳೆ 12 ಮಂದಿ ಪ್ರತಿಭಟನಾಕಾರರನ್ನು ಲಂಡನ್‌ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ಬಾಟಲ್‌, ಕಲ್ಲು ಸೇರಿದಂತೆ ಇತರೆ ವಸ್ತುಗಳನ್ನು ತೂರಲಾಗಿತ್ತು.

Advertisement

ಕೇರಳದಲ್ಲಿ ಹಿಜಾಬ್‌ ಬೆಂಬಲಿಸಿ ಪ್ರತಿಭಟನೆ
ಕೇರಳದ ಕಲ್ಲಿಕೋಟೆಯಲ್ಲಿ ಹಿಜಾಬ್‌ ಧರಿಸಿದ 11ನೇ ತರಗತಿಯ ಯುವತಿಗೆ ತರಗತಿ ಪ್ರವೇಶ ನಿರಾಕರಿಸಿದ ಕಾಲೇಜಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ.

ಈ ವೇಳೆ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ಹಿಜಾಬ್‌ಗ ನಿರಾಕರಿಸಿದ ಕಾಲೇಜಿನ ಮಾನ್ಯತೆಯನ್ನೇ ರದ್ದುಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next