Advertisement

ಹಿಜಾಬ್‌ ಪಟ್ಟು ಸಡಿಲಿಸಿದ ವಿದ್ಯಾರ್ಥಿನಿಯರು; ಬಹುತೇಕ ಹೆತ್ತವರಿಗೆ ಮಾಹಿತಿಯೇ ಇರಲಿಲ್ಲ!

01:35 AM Jun 09, 2022 | Team Udayavani |

ಉಪ್ಪಿನಂಗಡಿ: ಹೈಕೋರ್ಟ್‌ ಆದೇಶ, ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂ ಸಿ ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸಲು ಯತ್ನಿಸುತ್ತಿದ್ದ 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಬಳಿಕ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿವರ್ತನೆಯ ನಡೆ ಗೋಚರಿಸಿದ್ದು, ಬುಧವಾರ 46 ವಿದ್ಯಾರ್ಥಿನಿಯರು ಹಿಜಾಬ್‌ ಬೇಡಿಕೆ ಬದಿಗಿಟ್ಟು ತರಗತಿಗೆ ಹಾಜರಾಗಿದ್ದಾರೆ.

Advertisement

ಸೋಮವಾರ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಅಮಾನತಾಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಮಂಗಳವಾರ ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದ ಘಟನೆಯ ಬೆನ್ನಲ್ಲೇ ಎಲ್ಲ ವಿದ್ಯಾರ್ಥಿನಿಯರ ಹೆತ್ತವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು. ಬಹುತೇಕ ಹೆತ್ತವರು ತಮ್ಮ ಮಕ್ಕಳು ಹಿಜಾಬ್‌ ಹೋರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯೇ ಇಲ್ಲವೆಂದು ತಿಳಿಸಿದ್ದರು.

ಅಮಾನತಾಗಿದ್ದ 6 ಮಂದಿ ಹಾಜರು
ಒಂದು ವಾರದ ಮೊದಲು ಅಮಾನತಾಗಿದ್ದ ಎಲ್ಲ 6 ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ಆಗಮಿಸಿ ಸಮವಸ್ತ್ರ ನಿಯಮಾವಳಿಯನ್ನು ಪಾಲಿಸು ವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ತರಗತಿಗೆ ಹಾಜರಾಗಿದ್ದಾರೆ. ಬುಧವಾರ ಹಿಜಾಬ್‌ ಪ್ರತಿಭಟನೆಯಿಂದ ದೂರ ಸರಿದು ಮೊದಲ ಅವಧಿಯಲ್ಲಿ 35 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದರೆ, ಸಹಜ ಸ್ಥಿತಿಯ ಮಾಹಿತಿ ಪಡೆದು ಹಿಜಾಬ್‌ ಪ್ರತಿಭಟನೆಗಳು ಪ್ರಾರಂಭವಾದ ದಿನದಿಂದ
ವಿವಾದದಿಂದ ದೂರವಾಗಿ ಅಂತರ ಕಾಯ್ದುಕೊಂಡ 11 ಮಂದಿ ವಿದ್ಯಾರ್ಥಿನಿ ಯರು ಬಳಿಕದ ಅವಧಿಯ ತರಗತಿಗೆ ಹಾಜರಾಗಿದ್ದಾರೆ. ಇದರಿಂದಾಗಿ ಒಟ್ಟು 101 ಮುಸ್ಲಿಮ್‌ ವಿದ್ಯಾರ್ಥಿನಿಯರನ್ನು ಹೊಂದಿರುವ ಕಾಲೇಜಿನಲ್ಲಿ ಬುಧವಾರ ಸಮವಸ್ತ್ರ ನಿಯಮ ಪಾಲನೆಯೊಂದಿಗೆ ತರಗತಿ ಪ್ರವೇಶಿಸಿದ ವಿದ್ಯಾರ್ಥಿನಿಯರ ಸಂಖ್ಯೆ 46 ಆಗಿದೆ.

ಸುಖಾಂತ್ಯದ ನಿರೀಕ್ಷೆ
ವಿವಾದದಿಂದ ಅಂತರ ಕಾಯ್ದುಕೊಂಡು ಗೈರು ಹಾಜರಾಗುತ್ತಿರುವ ಉಳಿದ ವಿದ್ಯಾರ್ಥಿ ನಿಯರು ಗುರುವಾರದಿಂದ ಕಾಲೇಜಿಗೆ ಆಗಮಿಸುವ ಭರವಸೆಯನ್ನು ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next