Advertisement
ಮಲ್ಪೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪೆರ್ಡೂರು ಭಾಗದಲ್ಲಿ ದೇವಸ್ಥಾನಕ್ಕೆ ತಾಗಿಕೊಂಡು ಹಾದು ಹೋಗುವ ನೀಲನಕ್ಷೆ ತಯಾರಾಗಿದೆ. ಇದನ್ನುಸ್ಥಳೀಯರಾದ ರಂಜಿತ್ ಪ್ರಭು ಕೋರ್ಟ್‌ನಲ್ಲಿ ಪ್ರಶ್ನಿಸಿ, ದೇಗುಲಕ್ಕೆ ಧಕ್ಕೆ ಯಾಗುವುದನ್ನು ತಡೆ ಯುವಂತೆ ಮನವಿ ಮಾಡಿದ್ದರು. ಪ್ರಸ್ತುತ ದೇವಸ್ಥಾನದ ಆಡಳಿತ ಮಂಡಳಿಯೂ ನ್ಯಾಯಾ ಲಯದ ಮೆಟ್ಟಿಲೇರಿದೆ. ನಕ್ಷೆ ಪ್ರಕಾರ ಹೆದ್ದಾರಿಯು ದೇವಾಲಯದ ರಥಬೀದಿ, ನಾಗವನ ಇರುವ ಜಾಗದಲ್ಲೇ ಹಾದು ಹೋಗಲಿದೆ.
ಇದರಿಂದ ದೇವಾಲಯವು ಮೂಲ ಸ್ವರೂಪವನ್ನು ಕಳೆದುಕೊಳ್ಳಲಿದೆ ಹಾಗೂ ವಾಸ್ತುವಿಗೆ ಧಕ್ಕೆ ಅಗಲಿದೆ. ಆದ್ದರಿಂದ ಪರ್ಯಾಯ ಸಾಧ್ಯತೆ ಬಗ್ಗೆ ಪರಿಶೀಲಿಸಲು ಸಲಹೆ ನೀಡುವಂತೆ ನ್ಯಾಯವಾದಿ ಕೇತನ್ ಕುಮಾರ್ ಬಂಗೇರ ಅವರು ದೇಗುಲದ ಪರವಾಗಿ ಮನವಿ ಮಾಡಿದ್ದರು.
ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನ ಗಳನ್ನು ರಕ್ಷಿಸಬೇಕಿದೆ. ಈ ಭಾಗದಲ್ಲಿ ಪರ್ಯಾಯ ಮಾರ್ಗದ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು. ಬೆಂಗಳೂರಿನ ಕೋರ್ಟ್ ಪಕ್ಕದ ಕಟ್ಟಡ ನೆಲಸಮಕ್ಕೆ ವಿರೋಧ ಇದೆ. ದೇವಸ್ಥಾನಕ್ಕೆ ಧಕ್ಕೆ ಅಗುವುದನ್ನು ತಡೆಯಲು ಸಾಧ್ಯ ವಿಲ್ಲವೇ ಎಂದು ಪ್ರಶ್ನಿಸಿದೆ. ರಸ್ತೆ ಅಗಲ ಗೊಳಿಸುವುದು ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಾಗ ದೇವಾಲಯ ಸಹಿತ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗ ಗಳನ್ನು ಬಳಸಬಹುದು ಎಂದರು. ಬದಲಿ ಮಾರ್ಗ
ಪೆರ್ಡೂರು ಮೇಲ್ಪೇಟೆಯಿಂದ ದೇವಸ್ಥಾನಕ್ಕೆ ಸಂಬಂಧಪಟ್ಟ ಖಾಲಿ ಜಾಗದ ಮೂಲಕ ಹಾದು ಬಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪರ್ಯಾಯ ಮಾರ್ಗವನ್ನು ಬಳಸಬಹು ದು ಎಂದು ಸ್ಥಳೀಯರು ಹೆದ್ದಾರಿ ಇಲಾಖೆಗೆ ತಿಳಿಸಿದ್ದಾರೆ. ಇಲ್ಲೂ ದೇವಸ್ಥಾನದ ಶೇ. 80ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಆದರೆ ದೇಗು ಲದ ವಾಸ್ತುವಿಗೆ ಹಾನಿಯಾಗದು. ಇಲಾಖೆಯ ನಕ್ಷೆ ಪ್ರಕಾರ ಕಾಮಗಾರಿ ನಡೆದರೆ ಹಲವು ಅಂಗಡಿ, ಮನೆಗಳು, ರಾಮ ಮಂದಿರ, ನಾಗಬನಕ್ಕೂ ಧಕ್ಕೆಯಾಗುವುದಲ್ಲದೆ, ದೇವಸ್ಥಾನದ ವಾಸ್ತು ಭಿನ್ನವಾಗಲಿದೆ.
Related Articles
Advertisement
ದೇವಸ್ಥಾನದ ವಾಸ್ತು ಉಳಿಸಲು ಕೈಜೋಡಿಸಿ“ಪೆರ್ಡೂರು ದೇವಸ್ಥಾನದ ವಾಸ್ತು ಮತ್ತು ಮೂಲ ಸ್ವರೂಪವನ್ನು ಉಳಿಸಲು ಭಕ್ತರು ಹಾಗೂ ಗ್ರಾಮಸ್ಥರೆಲ್ಲರೂ ಕೈಜೋಡಿಸ ಬೇಕಿದೆ. ಹೈಕೋರ್ಟ್‌ನ ನ್ಯಾಯಾಧೀಶರೂ ದೇವಸ್ಥಾನದ ಪರ ಅಭಿಪ್ರಾಯ ವ್ಯಕ್ತಪಡಿಸಿರುವುದು ಶ್ಲಾಘನೀಯ.” – ರಂಜಿತ್ ಪ್ರಭು, ಸ್ಥಳೀಯರು – ಹೆಬ್ರಿ ಉದಯ ಕುಮಾರ್ ಶೆಟ್ಟಿ