Advertisement

Kaup: ಉರುಳಿ ಬಿದ್ದ ಬೃಹತ್ ಗಾತ್ರ ಮರ; ಹೆದ್ದಾರಿ ಸಂಚಾರ ಅಸ್ತವ್ಯಸ್ತ

02:08 PM Jul 25, 2023 | Team Udayavani |

ಕಾಪು: ಬೃಹತ್ ಗಾತ್ರ ಮರವೊಂದು ಉರುಳಿ ಬಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತಿರ್ಥ ಶಾಲೆಯ ಬಳಿ ಜು.25ರ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಭಾರೀ ಗಾಳಿ‌ ಮಳೆಗೆ ಮರ ಬುಡಸಮೇತ ಉರುಳಿ ಬಿದ್ದಿದ್ದು, ಮೂರು ವಿದ್ಯುತ್ ಕಂಬಗಳು ತುಂಡಾಗಿದ್ದು, ಎರಡು ಕಂಬಗಳು ವಾಲಿ ನಿಂತಿವೆ. ಲಕ್ಷಾಂತರ ರೂಪಾಯಿ ಸೊತ್ತು‌ ನಷ್ಟ ಅಂದಾಜಿಸಲಾಗಿದೆ.

ಬಿರುಸಿನ ಮಳೆಯ ನಡುವೆಯೂ ಮೆಸ್ಕಾಂ ಸಿಬ್ಬಂದಿಗಳು, ಅರಣ್ಯ ಇಲಾಖಾ ಸಿಬ್ಬಂದಿಗಳು, ಕಾಪು ಪೊಲೀಸರು ಹಾಗೂ ಸ್ಥಳೀಯರು ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next