Advertisement
ಇದು ತಾಲೂ ಕಿನ ಹಂಪಾಪುರ ರಸ್ತೆ ಬಳಿ ಕಂಡು ಬರುವ ದೃಶ್ಯ. ಹಂಪಾಪುರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾ ಲಯ ಕಾರ್ಯನಿರ್ವಹಿಸುತ್ತಿದೆ. ಗ್ರಾಪಂ ನಿಂದ ಕೆಲವೇ ಮೀಟರ್‌ಗಳ ದೂರದ ಮೈಸೂರು- ಮಾನಂದವಾಡಿ ಮಾರ್ಗದ ರಾಜ್ಯ ಹೆದ್ದಾರಿ ಬದಿ ಮೂಟೆಗಳಲ್ಲಿ ಕಸದ ರಾಶಿ ಸುರಿಯಲಾಗಿದೆ. ಪ್ರತಿದಿನ ಕೇರಳದಿಂದ ಮತ್ತು ಎಚ್.ಡಿ.ಕೋಟೆ ತಾಲೂಕಿನಿಂದ ಸಾವಿರಾರು ವಾಹನಗಳು ಹೆದ್ದಾರಿ ಮಾರ್ಗವಾಗಿ ಮೈಸೂರು ತಲುಪುತ್ತಿವೆ.
Related Articles
Advertisement
ಇಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸಿ ಈ ಜಾಗದಲ್ಲಿ ಕಸ ಹಾಕು ವವರ ವಿರುದ್ಧ ದಂಡ ವಿಧಿಸುವುದು, ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಶುಚಿತ್ವ ಕಾಪಾಡಿಕೊಳ್ಳ ಬಹುದು. ಆದರೆ, ಗ್ರಾಮ ಪಂಚಾಯ್ತಿ ಇದ್ಯಾವುದನ್ನೂ ಮಾಡದೇ ಮೌನಕ್ಕೆ ಶರಣಾಗಿದೆ.
ಇನ್ನಾದರೂ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಕಸದ ರಾಶಿಯನ್ನು ತೆರವುಗೊಳಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಕ್ರಮವಹಿಸಬೇಕು ಎಂದು ಸಾರ್ವನಿಕರು ಆಗ್ರಹಿಸಿದ್ದಾರೆ.
“ ರಸ್ತೆ ಮಾರ್ಗದಲ್ಲಿ ಕಸದ ರಾಶಿ ಬಿದ್ದಿರುವ ವಿಚಾರವಾಗಿ ಸಂಬಂಧಪಟ್ಟ ಹಂಪಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಕಸ ತೆರವುಗೊಳಿಸಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು.” – ಜೆರಾಲ್ಡ್ ರಾಜೇಶ್, ತಾಪಂ ಇಒ
“ ಹಂಪಾಪುರ ರಸ್ತೆ ಬದಿ ಕಸ ಬಿಸಾಡಿರುವುದು ತಿಳಿದಿಲ್ಲ. ಈ ಹಿಂದೆ ಕೇರಳದಿಂದದ ಕಸ ತಂದು ಹಂಪಾಪುರದಲ್ಲಿ ಎಸೆಯುವಾಗ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ರಾತ್ರಿ ವೇಳೆ ಯಾರಾದರೂ ಹೊರಗಿನಿಂದ ಕಸ ತಂದು ಎಸೆದಿರುವ ಸಾಧ್ಯತೆ ಇದೆ. ಕೂಡಲೇ ಸ್ಥಳ ಪರಿಶೀಲಿಸಿ ಕಸ ತೆರವುಗೊಳಿಸಲಾಗುವುದು.” – ಸೌಮ್ಯ, ಪಿಡಿಒ ಹಂಪಾಪುರ ಗ್ರಾಪಂ
– ಎಚ್.ಬಿ.ಬಸವರಾಜು