Advertisement

ಪ್ರಸ್ತಾವನೆಯಲ್ಲೇ ಹೆದ್ದಾರಿ ರಿಪೇರಿ!

04:14 PM Jan 06, 2021 | Team Udayavani |

ಮಸ್ಕಿ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷ ಕಳೆದಿದೆ. ಆದರೆ ಇಲ್ಲಿನ ರಸ್ತೆಯಸ್ಥಿತಿಯೇ ಬದಲಾಗಿಲ್ಲ!.

Advertisement

ಮಸ್ಕಿ ಹೃದಯ ಭಾಗದಲ್ಲಿ ಹಾದುಹೋಗುವ ಮಸ್ಕಿ-ಲಿಂಗಸುಗೂರು(ಬೀದರ-ಶ್ರೀರಂಗಪಟ್ಟಣ) ಹೆದ್ದಾರಿ ಸ್ಥಿತಿಇದು. ಈ ಹಿಂದೆ ರಾಜ್ಯ ಹೆದ್ದಾರಿಯಾಗಿದ್ದಇಲ್ಲಿನ ರಸ್ತೆಯನ್ನು ರಾಷ್ಟ್ರೀಯಹೆದ್ದಾರಿಯಾಗಿ ಘೋಷಿಸಲಾಗಿದೆ. ಸುಧಾರಣೆ ನಿರ್ವಹಣೆ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗ ಹುನಗುಂದ ವ್ಯಾಪ್ತಿಗೆ ಸೇರಿಸಲಾಗಿದೆ.

ಆದರೆ ಘೋಷಣೆಗಷ್ಟೇ ಸೀಮಿತವಾದಇಲ್ಲಿನ ರಸ್ತೆ ಸುಧಾರಣೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ. ಈ ಹಿಂದೆ ಹಾಕಿದ್ದಡಾಂಬರ್‌ ಎಲ್ಲೆಂದರಲ್ಲಿ ಕಿತ್ತು ಹೋಗಿದ್ದುರಸ್ತೆ ಸಂಪೂರ್ಣ ತೋಪೆದ್ದಿದೆ. ನಿತ್ಯ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರುಮಾತ್ರ ತಗ್ಗು-ಗುಂಡಿಯಲ್ಲಿ ಎದ್ದು-ಬಿದ್ದು ಸಾಗುವಂತಾಗಿದೆ.

ಅಗಲೀಕರಣವೂ ಇಲ್ಲ: ಎನ್‌ ಎಚ್‌-150 (ಎ) ಘೋಷಣೆಯಾದ ರಸ್ತೆಯಲ್ಲಿನ ಮಸ್ಕಿ-ಸಿಂಧನೂರುವರೆಗಿನ ರಸ್ತೆ ಮಾತ್ರ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ವಿಸ್ತೀರ್ಣವಾಗಿದ್ದು, ಈಗರಿ ಕಾಪೆìಟಿಂಗ್‌ ಮಾಡುವ ಮೂಲಕ ಸುಧಾರಣೆ ಮಾಡಲಾಗುತ್ತಿದೆ. ಆದರೆ ಮಸ್ಕಿ-ಲಿಂಗಸುಗೂರು ರಸ್ತೆ ಮಾತ್ರಇದ್ದ ಸ್ಥಿತಿಯಲ್ಲೇ ಕೈ ಬಿಟ್ಟಿರುವುದುಪ್ರಯಾಣಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಹಾಳಾದ ರಸ್ತೆ ಬಿಟ್ಟು, ಈ ರಸ್ತೆ ಏಕೆ ಮಾಡುತ್ತಿದ್ದಾರೆ? ಎನ್ನುವುದೇ ಈಗ ಗೊಂದಲ. ಮುದಬಾಳ್‌ ಕ್ರಾಸ್‌ -ಲಿಂಗಸುಗೂರುವರೆಗಿನ 25 ಕಿ.ಮರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲದೇಈ ರಸ್ತೆ ಇನ್ನು ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಅಗಲೀಕರಣವಾಗಿಲ್ಲ.ಸದ್ಯ 5.5 ಮೀಟರ್‌ ಅಗಲವಿದ್ದು, 10 ಮೀ.ಗೆ ವಿಸ್ತೀರ್ಣ ಹೆಚ್ಚಿಸಬೇಕಿದೆ. ಇರುವ ರಸ್ತೆಯಲ್ಲಿ ನಿತ್ಯ ಲಕ್ಷಾಂತರ ವಾಹನ ಓಡಾಡುತ್ತವೆ. ಭಾರಿ ವಾಹನಗಳ ಓಡಾಟದಿಂದಾಗಿ ಸಂಪೂರ್ಣಹಾಳಾಗಿ ಹೋಗಿದೆ. ಹೀಗಾಗಿ ಈ ರಸ್ತೆ ಸಂಪೂರ್ಣ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ. ಇದಕ್ಕಾಗಿ 180 ಕೋಟಿ ರೂ. ಅನುದಾನ ಬೇಡಿಕೆ ಇಟ್ಟು ಪ್ರಸ್ತಾವನೆಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆಯಾದರೆ ರಸ್ತೆ ಸಂಪೂರ್ಣ ರಿಪೇರಿ ಮಾಡಿ ಎನ್‌ಎಚ್‌ ರೂಪ ನೀಡಲಾಗುತ್ತದೆ ಎನ್ನುತ್ತಾರೆ ಇಂಜಿನಿಯರ್‌ ವಿಜಯ್‌ಕುಮಾರ್‌.

Advertisement

ಇದೂ ಅದೇ ಸ್ಥಿತಿ: ಕೇವಲ ಮಸ್ಕಿ-ಲಿಂಗಸುಗೂರು ಮಾತ್ರವಲ್ಲ,ಇದೇ ಹೆದ್ದಾರಿಯಲ್ಲಿ ಸೇರಿದಲಿಂಗಸುಗೂರು-ತಿಂಥಿಣಿ ಬ್ರಿಡ್ಜ್ರಸ್ತೆಯದ್ದೂ ಇದೇ ಕಥೆ. ಈ ರಸ್ತೆ ಸುಧಾರಣೆಗೂ ಅನುದಾನದಅಗತ್ಯವಿದೆ. ಮಸ್ಕಿ-ತಿಂಥಿಣಿ ಬ್ರಿಡ್ಜ್ ವರೆಗೂ ಒಂದೇ ಪ್ಯಾಕೇಜ್‌ನಲ್ಲಿಒಟ್ಟು 320 ಕೋಟಿ(ಮುದಬಾಳಕ್ರಾಸ್‌-ಲಿಂಗಸುಗೂರು-180 ಕೋಟಿ,ಲಿಂಗಸುಗೂರು-ತಿಂಥಿಣಿ- 140

ಕೋಟಿ) ರೂ. ಬ್ರಿಡ್ಜ್ಗೆ ಡಿಪಿಆರ್‌ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಆದರೆ ಇದುವರೆಗೂನಯಾ ಪೈಸೆ ಬಿಡುಗಡೆಯಾಗಿಲ್ಲ. ಒಟ್ಟಿನಲ್ಲಿರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯಹೆದ್ದಾರಿಯಾಗಿ ಘೋಷಣೆಯಾದರೂ ಈಭಾಗದಲ್ಲಿ ಹಾದು ಹೋಗುವ ಇಲ್ಲಿನ ರಸ್ತಇನ್ನು ರಿಪೇರಿ ಭಾಗ್ಯ ಸಿಗದೇ ಇರುವುದು  ವಿಪರ್ಯಾಸ.

ಎಸ್‌ಎಚ್‌ನಿಂದ ಎನ್‌ ಎಚ್‌ ಆಗಿ ಘೋಷಣೆಯಾಗಿನಾಲ್ಕು ವರ್ಷ ಕಳೆದರೂ ಮಸ್ಕಿ-ಲಿಂಗಸುಗೂರು ರಸ್ತೆಇದುವರೆಗೂ ಸುಧಾರಣೆಯಾಗಿಲ್ಲ.ಸರ್ಕಾರ ಈ ಕೂಡಲೇ ಈ ರಸ್ತೆಗೆ ಅನುದಾನ ಬಿಡುಗಡೆ ಮಾಡಬೇಕು- ಕೃಷ್ಣ ಡಿ. ಚಿಗರಿ, ಪ್ರಯಾಣಿಕರು, ಮಸ್ಕಿ

ಎನ್‌ಎಚ್‌-150 (ಎ) ರಸ್ತೆಯಲ್ಲಿ ಹಾದು ಬರುವ ಮಸ್ಕಿ-ತಿಂಥಿಣಿ ಬ್ರಿಡ್ಜ್ ವರೆಗೂ ರಸ್ತೆ ಅಗಲೀಕರಣ, ಸುಧಾರಣೆಗಾಗಿ ಅಗತ್ಯ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಇನ್ನು ಅನುಮೋದನೆಸಿಕ್ಕಿಲ್ಲ. ಅನುಮೋದನೆ ದೊರೆತು ಆರ್ಥಿಕ ಅನುದಾನ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. – ವಿಜಯಕುಮಾರ್‌, ಇಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹುನಗುಂದಾ ವಿಭಾಗ

 

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next