Advertisement
ಕಲಬುರಗಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ-150 ಕಾಮಗಾರಿ ಗುಣಮಟ್ಟದಿಂದ ನಡೆದಿದ್ದರೂ, ರಸ್ತೆಯ ಸುತ್ತಮುತ್ತಡಿವೈಡರ್, ಡ್ರೆ„ನೇಜ್, ಪಾದಚಾರಿ ಮಾರ್ಗ ಸಂಪೂರ್ಣ ಕಳಪೆ ಮಟ್ಟದಿಂದ ನಡೆದಿವೆ. ಕಳಪೆ ಮಟ್ಟದ ಕಾಮಗಾರಿ
ನಡೆಯುತ್ತಿರುವ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಇಲ್ಲಿನ ಜನರು ಓಡಾಡುವಂತೆ ಆಗಿದೆ. ಕಲಬುರಗಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಇದೇ ಮಾರ್ಗದ ಮೂಲಕ ಹೋಗುತ್ತದೆ. ಅಲ್ಲದೇ ರಸ್ತೆ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿದು ಈ ಭಾಗದ ಜನರು ಸಂತೋಷಪಟ್ಟಿದ್ದರು. ಕಲಬುರಗಿಯಿಂದ ಭಂಕೂರ ವೃತ್ತದ ವರೆಗಿನ ಕಾಮಗಾರಿಯನ್ನು ಮಹಾರಾಷ್ಟ್ರ ಮೂಲಕ ಗುತ್ತಿಗೆದಾರರು ಉತ್ತಮವಾಗಿ ಮಾಡಿದ್ದರು. ನಂತರ ಭಂಕೂರ ವೃತ್ತದಿಂದ ಮುಂದಿನ ಗುತ್ತಿಗೆಯನ್ನು ಬೀದರ್‌ನ ಕೊಟ್ರಕಿ ಪ್ರೈವೇಟ್ ಕಂಪನಿಗೆ ನೀಡಿದ ಬಳಿಕ ರಸ್ತೆ ಕಾಮಗಾರಿ ಉತ್ತಮವಾಗಿದ್ದರೂ, ರಸ್ತೆಯ ಮಧ್ಯದ ಡಿವೈಡರ್, ರಸ್ತೆಯ
ಎರಡು ಕಡೆಯ ಅಂಚಿನ ಕರ್ವ್ ಹಾಗೂ ಡ್ರೈನೇಜ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಅನೇಕ ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ನಾಗಪ್ಪ ಅವರಿಗೆ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
Related Articles
Advertisement
ಅದಕ್ಕಾಗಿಯೇ ಜಿಇ ಕಾರ್ಖಾನೆಯವರು ಸುಮಾರು 50 ವರ್ಷಗಳಿಂದ ಕಂಪನಿ ಸುತ್ತಮುತ್ತ ಬಿಸಾಡಿದ ಮರಳನ್ನುಗುತ್ತಿಗೆದಾರರು ಬಳಸಿದ್ದಾರೆ. ಇದರಿಂದ ಡಿವೈಡರ್‌ಗಳು ಮುರಿದು ಬಿದ್ದಿವೆ. ಅದಕ್ಕೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ. ಅಂದಾಜು ಪಟ್ಟಿ ಪ್ರಕಾರವೂ ಕಾಮಗಾರಿ ನಡೆಯುತ್ತಿಲ್ಲ. ಪಾದಚಾರಿ ಮಾರ್ಗವೂ ಕಳಪೆ: ಭಂಕೂರ ವೃತ್ತದಿಂದ ವಾಡಿ ವೃತ್ತದ ಜೆಪಿ ಸಿಮೆಂಟ್ ಕಾರ್ಖಾನೆ ವರೆಗಿನ ಪಾದಾಚಾರಿ ಮಾರ್ಗಕ್ಕೆ ಬಳಸಿದ ಬ್ಲಾಕ್‌ಗಳು ಕಳಪೆ ಮಟ್ಟದ್ದಾಗಿವೆ.
ಹಾಸಿದ ಬ್ಲಾಕ್‌ಗಳು ಒಂದು ಕಡೆ ಎತ್ತರ, ಇನ್ನೊಂದು ಕಡೆ ತಗ್ಗು ಆಗಿದೆ. ಮಳೆ ಬಂದಾಗ ರಸ್ತೆಯಿಂದ ನೀರು ಪಾದಾಚಾರಿ ಮಾರ್ಗವಾಗಿ ಪೈಪ್ ಮುಖಾಂತರ ಡ್ರೈನೇಜ್‌ಗೆ ಹೋಗಬೇಕು. ಆದರೆ ಬಹುತೇಕ ಕಡೆ ಪಾದಚಾರಿ ಮಾರ್ಗದ ಕೆಳಗಡೆ ಪೈಪ್ ಹಾಕದೇ ಕಾಮಗಾರಿ ಕೈಗೊಂಡಿದ್ದಾರೆ. ಪಾದಚಾರಿ ಮಾರ್ಗದ ವಾಟರ್ ಲೆವೆಲ್ ಕಾಪಾಡಿಕೊಂಡಿಲ್ಲ. ಅಲ್ಲದೇ ಮಧ್ಯದ ಡಿವೈಡರ್‌ಗಳಲ್ಲಿ ಹುಲ್ಲುಹಾಸಿಗೆ ಹಾಗೂ ಸಣ್ಣ ಸಸಿಗಳನ್ನು ನೆಡಲು ಉತ್ತಮ ಮಣ್ಣು ತುಂಬಬೇಕು.
ಗುತ್ತಿಗೆದಾರರು ಕಲ್ಲಿನ ಗಣಿಗಳ ತ್ಯಾಜ್ಯ ಕಲ್ಲುಗಳನ್ನು ತಂದು ತುಂಬಿದ್ದಾರೆ. ಜನರಿಂದ ವಿರೋಧ ವ್ಯಕ್ತವಾದಾಗ
ದೊಡ್ಡ ಕಲ್ಲುಗಳನ್ನು ಒಳಗೆ ಹಾಕಿ ಮೇಲೆ ಎರಡು ಇಂಚು ಹಾಳು ಮಣ್ಣು ಹಾಕಿದ್ದಾರೆ. ಈ ಬಗ್ಗೆ ದೂರು ನೀಡಿದರೂ
ಜೆಇ, ಎಇಇ ಗುತ್ತಿಗೆದಾರರ ಪರವಾಗಿ ಮಾತನಾಡುತ್ತಿದ್ದಾರೆ. ಕೂಡಲೇ ಜನಪ್ರತಿನಿಧಿಗಳು, ಮೇಲಾಧಿ ಕಾರಿಗಳು ಈ ಬಗ್ಗೆ ಗಮನಹರಿಸಿ ಗುತ್ತಿಗೆದಾರ ಹಾಗೂ ಎಇಇ, ಜೆಇ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದಾ ಗುತ್ತಿಗೆದಾರ ಅಧಿಕಾರಿಗಳ ಮೂಗಿಗೆ ತುಪ್ಪ ಸವರಿದ್ದಾನೆ. ಆದ್ದರಿಂದಲೇ ಇಷ್ಟೊಂದು ಮಟ್ಟದಲ್ಲಿ ಕಳಪೆ ಕಾಮಗಾರಿ ನಡೆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇಲ್ಲಿನ ಡ್ರೈನೇಜ್‌ಗೆ ಒಂದು ಬಾರಿಯೂ ಕ್ಯೂರಿಂಗ್ ಮಾಡಿಲ್ಲ. ಇದು ಸಾರ್ವಜನಿಕರ ಆರೋಪವಾಗಿದ್ದರೂ, ಎಇಇ ನಾಗಪ್ಪ ಮಾತ್ರ ಗುತ್ತಿಗೆದಾರರ ಪರವಾಗಿ ಮಾತನಾಡುತ್ತಾರೆ.
ರಾಮಕುಮಾರ ಸಿಂ, ದಸಂಸ ಮುಖಂಡ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಹಾಗೂ ಇತರ ಮುಖಂಡರು ರಾಷ್ಟ್ರೀಯ ಹೆದ್ದಾರಿ ನಮ್ಮ ಕೊಡುಗೆ ಎಂದು ಉದ್ದುದ ಭಾಷಣ ಬಿಗಿದಿದ್ದಾರೆ. ಆದರೆ ಇಲ್ಲಿನ ಡಿವೈಡರ್, ಡ್ರೆ„ನೇಜ್,
ಪಾದಚಾರಿ ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿರುವುದು ನಿಮ್ಮ ಕೊಡುಗೆ ತಾನೇ. ಈ ಕುರಿತಂತೆ ಕ್ರಮ ಕೈಗೊಳ್ಳುವುದಿಲ್ಲವೇ? ನಿಂಗಣ್ಣ ಜಂಬಗಿ, ಎಐಡಿವೈಒ, ಜಿಲ್ಲಾ ಕಾರ್ಯದರ್ಶಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಆದರೆ ಇಲ್ಲಿನ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಗುತ್ತಿಗೆದಾರನ ಜೆಇ ಸ್ಥಳೀಯ ಪ್ರದೇಶದವನಾಗಿದ್ದು, ಈ ರೀತಿಯ ಕಳಪೆ ಕಾಮಗಾರಿ ಮಾಡುತ್ತಿದ್ದಾನೆ. ಅವನು ಮಾಡಿದ್ದೇ ಕೆಲಸ ಎನ್ನುವಂತಾಗಿದೆ. ಇದಕ್ಕೆಲ್ಲ ಗುತ್ತಿಗೆದಾರನ ಜೆಇ, ಎಇಇ ಕಾರಣ.
ನಾಗಣ್ಣ ರಾಂಪುರೆ, ಬಸವರಾಜ ಬಿರಾದಾರ ಬಿಜೆಪಿ ಮುಖಂಡರು ಕಾಮಗಾರಿ ಕಳಪೆ ಆಗುತ್ತಿದೆ ಎಂದು ಆರಂಭದಲ್ಲೇ ಹೇಳಬೇಕಿತ್ತು. ಇನ್ನು ಕಾಮಗಾರಿ ಸಂಪೂರ್ಣವಾಗಿಲ್ಲ. ಗುತ್ತಿಗೆದಾರನ ಜೆಇ ಸಿದ್ದು ಎನ್ನುವನಿಂದಲೇ ಇಷ್ಟೆಲ್ಲ ದೂರುಗಳು ಬರುತ್ತಿವೆ. ಈ ಕುರಿತಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಕಾಮಗಾರಿ ಸರಿಯಾಗಿ ಮಾಡುವಂತೆ ತಾಕೀತು ಮಾಡಲಾಗುವುದು.
ನಾಗಪ್ಪ, ಎಇಇ , ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮಲ್ಲಿನಾಥ ಜಿ.ಪಾಟೀಲ