Advertisement
ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕು ಪಂಚಾಯತ್, ಕೃಷಿ, ಇಲಾಖೆ, ಪಶುಸಂಗೋಪನೆ ಇಲಾಖೆ, ತಾಲೂಕು ಕಚೇರಿ, ಬ್ಯಾಂಕ್, ಸೇರಿದಂತೆ ವಿವಿಧೆ ಇಲಾಖೆಗಳು ಸಿಗುತ್ತವೆ. ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಸರಿಯಾದ ಸಂಚಾರದ ವ್ಯವಸ್ಥೆಯಿಲ್ಲದೆ ಎಲ್ಲೆಂದರಲ್ಲೆ ಖಾಸಗಿ ವಾಹನಗಳನ್ನು ಇಲಾಖೆ ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳು ಕಿರಿ-ಕಿರಿ ಅನುಭವಿಸುವಂತಾಗಿದೆ. ಇದಲ್ಲದೆ ಹಲವು ಬಾರಿ ಅಪಘಾತಗಳು ನಡೆದು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.
ಪಾಲನೆಯಾಗದ ಸಂಚಾರಿ ನಿಯಮ: ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಚಾರಿ ಪೊಲೀಸರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ರಸ್ತೆಯಲ್ಲಿ ರಸ್ತೆ ಸಾರಿಗೆ ಇಲಾಖೆಯ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
Related Articles
Advertisement
ಆದ್ದರಿಂದ ದ್ವಿಚಕ್ರವಾಹನಗಳಿಗೆ ದ್ವಿಮುಖ ಮತ್ತು ಏಕ ಮುಖ ರಸ್ತೆ ಸಂಚಾರದ ನಿಯಮಗಳನ್ನು ಜಾರಿಗೆ ತಂದರೆ ಟ್ರಾಫಿಕ್ ಸಮಸ್ಯೆ ಸುಧಾರಿಸಲಿದೆ ಎನ್ನುವುದು ಪ್ರಜ್ಞಾವಂತರ ಆಶಯವಾಗಿದೆ.
ಮುಖ್ಯ ರಸ್ತೆಗಳು ಕಿರಿದಾಗಿದ್ದು, ಪ್ರತ್ಯೇಕವಾಗಿ ಎರಡು ವಾಹನಗಳು ಸಂಚಾರಿಸುವುದು ಕಷ್ಟಸಾಧ್ಯವಾಗಿದೆ. ಊರುಬಾಗಿಲ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗಿರುತ್ತದೆ. ಶಾಲಾ ಸಮಯದಲ್ಲಿ ಮಕ್ಕಳು ಟ್ರಾಫಿಕ್‌ನಿಂದ ಸಮಸ್ಯೆ ಅನುಭವಿಸುವಂತಾಗಿದೆ. ಎನ್‌ಎಚ್13 ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಮಿತಿಯಿಲ್ಲದೆ ನಿಲ್ಲಿಸಲಾಗುತ್ತದೆ. ಇದರಿಂದ ಪಾದಾಚಾರಿಗಳು ಮೃತಪಟ್ಟಿರುವ ಘಟನೆಗಳು ಸಹ ನಡೆದಿದೆ, ತಕ್ಷಣ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.ಎ.ಸಿ. ಚಂದ್ರು, ತಾಲೂಕು ಅಹಿಂದ ಅಧ್ಯಕ್ಷ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶಿವರಾತ್ರಿ ಹಬ್ಬದ ನಂತರ ಟ್ರಾಫಿಕ್ ಸಮಸ್ಯೆ ಇರುವ ರಸ್ತೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ವಾಹನ ಚಾಲಕರು ತಮ್ಮ ವಾಹನಗಳನ್ನು ಹೇಗೆ ಪಾರ್ಕಿಂಗ್ ಮಾಡಬೇಕು ಎಂಬುದನ್ನು
ಜಾಗೃತಿ ಮೂಡಿಸಲಾಗುವುದು.
ಶಿವರುದ್ರಪ್ಪ ಮೇಟಿ, ಪಿಎಸ್‌ಐ, ಚನ್ನಗಿರಿ ಸಿ.ಎಸ್. ಶಶೀಂದ್ರ