Advertisement

ಜಿಲ್ಲೆಯಲ್ಲಿ ಹೆರಿಗೆ ಸಂದರ್ಭ ಸಾವು ಲಕ್ಷಕ್ಕೆ 37 ಮಾತ್ರ

04:57 PM Feb 17, 2017 | Team Udayavani |

ಕನಕಪುರ: ಅಪೌಷ್ಟಿಕತೆ, ರಕ್ತಹೀನತೆ ಸೇರಿದಂತೆ ಇತರೆ ಕಾರಣಗಳಿಂದ ರಾಮನಗರ ಜಿಲ್ಲೆಯಲ್ಲಿ ಹೆರಿಗೆಯ ಸಮಯದಲ್ಲಿ ತಾಯಿ ಮತ್ತು ಮಕ್ಕಳ ಸಾವು ಲಕ್ಷ ಜನಸಂಖ್ಯೆಗೆ 37 ಸಂಭವಿಸಿವೆ. ಕನಕಪುರದಲ್ಲಿ ಒಂದು ವರ್ಷದಿಂದ ಎರಡು ಪ್ರಕರಣಗಳು ಕಂಡುಬಂದಿವೆ. ಗರ್ಭಿಣಿಯರು ಸಕಾಲಕ್ಕೆ ವೈದ್ಯರ ಸಲಹೆ ಸೂಚನೆ ಪಡೆಯದಿರುವುದೂ ಒಂದು ಕಾರಣ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಕುಮಾರ್‌ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಯಿ ಮತ್ತು ಮಕ್ಕಳ ಜನನ ಮತ್ತು ಮರಣದ ಕುರಿತು ತಾಪಂ ಸದಸ್ಯೆಯೊಬ್ಬರು ಕೇಳಿದ ಪ್ರಶ್ನೆಗೆ ಡಾ. ಕುಮಾರ್‌ ಉತ್ತರಿಸಿದರು. ಕನಕಪುರ ತಾಲೂಕಿನಲ್ಲಿ ಈ ರೀತಿಯ ಎರಡು ಸಾವುಗಳು ಉಂಟಾಗಿವೆ ಎಂದರು.

ತಾಪಂ ಸದಸ್ಯ ಧನಂಜಯ ಮಾತನಾಡಿ, ಸಾತನೂರು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಹಾಗೂ ಸ್ವತ್ಛತೆಯ ಕೊರತೆ ಇದೆ ಎಂದರು.ಸದಸ್ಯ ಕೊಳ್ಳಿಗನಹಳ್ಳಿ ರಾಮು, ಸೀತಾಲಕ್ಷಿ, ಚಂದ್ರಶೇಖರ್‌ ಮಾತನಾಡಿ, ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ನಕಲಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಆದರೆ, ಇವರ ರಕ್ಷಣೆಗೆ ಜನರೇ ನಿಲ್ಲುತ್ತಾರೆ. ಮುಂದಿನ ದಿನಗಳಲ್ಲಿ ಬೇರೆ ಮಾರ್ಗದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಾ.ಕುಮಾರ್‌ ಭರವಸೆ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಲಕ್ಷ್ಮೀ ಮಾತನಾಡಿ, ತಾಲೂಕಿನಲ್ಲಿ ಕಂಡುಬಂದಿರುವ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು ಒದಗಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಜಿಲ್ಲೆಯ ನೋಡಲ್‌ ಅಧಿಕಾರಿಗಳು ಸಹ ತಾಲೂಕಿಗೆ ಭೇಟಿ ನೀಡಿ ಪರೀಶಿಲಿಸಿ ವರದಿ ನೀಡುತ್ತಿದ್ದಾರೆ. ಆದರೆ ತಾಲೂಕು ಅಧಿಕಾರಿಗಳು ಗ್ರಾಮಗಳತ್ತ ಬರುತ್ತಿಲ್ಲ. ಮುಂದಿನ 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ತಿಳಿಸಿದರು.

Advertisement

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವರದಿಗಳನ್ನು ಗ್ರಾಪಂಗಳಿಂದ ಬಿಡಿ ಬಿಡಿಯಾಗಿ ಸಲ್ಲಿಸುತ್ತಿರುವುದು ಏಕೆ? ಸಿಬ್ಬಂದಿ ಕೊರತೆ ಇದ್ದರೆ ನರೇಗಾ ಯೋಜನೆ ಅಡಿ ಇಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಈ ಕುರಿತು ಹೆಚ್ಚಿನ ಗಮನ ನೀಡಬೇಕೆಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಶಿಥಿಲ ಕಟ್ಟಡ ನೆಲಸಮ ಮಾಡಿ: ತಾಲೂಕಿನಲ್ಲಿ ಹೆಚ್ಚು ಶಿಥಿಲವಾಗಿರುವ ಅಂಗನವಾಡಿ ಕಟ್ಟಡಗಳನ್ನು ನೆಲಸಮ ಮಾಡಿ ನರೇಗಾ ಮತ್ತು ಮಹಿಳಾ ಹಾಗೂ ಮಕ್ಕಳ ಇಲಾಖೆ ಜಂಟಿಯಾಗಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಹಾಗೂ ಈಗಾಗಲೇ ಕಟ್ಟಡ ನಿರ್ಮಾಣ ಪ್ರಾರಂಭಿಸಿರುವ ಕಟ್ಟಡಗಳನ್ನು ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಇಒ ಶ್ರೀಲಕ್ಷ್ಮೀ ತಿಳಿಸಿದರು.

ಗುತ್ತಿಗೆಯಲ್ಲಿ ಅಕ್ರಮ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸcತ್ಛತೆ ಇಲ್ಲ. ಡಿ.ದರ್ಜೆ ನೌಕರರ ಗುತ್ತಿಗೆಯಲ್ಲಿ ಅಕ್ರಮ ನಡೆಯುತ್ತಿದೆ. ಟೆಂಡರ್‌ ಪ್ರಕ್ರಿಯೆ ಸರಿಯಾದ ಕ್ರಮ ಅನುಸರಿಸುತ್ತಿಲ್ಲ ಎಂದು ಸದಸ್ಯ ಧನಂಜಯ್‌ ಆರೋಪಿಸಿದರು. ಎಲ್ಲಾ ದಾಖಲೆಗಳನ್ನು ನೀಡುವಂತೆ ಕೋರಿದರು. ತಾಲೂಕು ಆರೋಗ್ಯ ಅಧಿಕಾರಿ ವಾರದೊಳಗೆ ಅಂಚೆ ಮೂಲಕ ಕಳುಹಿಸಿಕೊಡುವುದಾಗಿ ತಿಳಿಸಿದರು.

ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಸ್ಮಾರ್ಟ್‌ ಫೋನ್‌ ಕೊಳ್ಳಬೇಕು. ಇದರಿಂದ ಆಡಳಿತಾತ್ಮಕ ವಿಚಾರಗಳನ್ನು ತುರ್ತಾಗಿ ತಲುಪಿಸಲು ಸಾಧ್ಯ. ವಾಟ್ಸಾಪ್‌ ಸಂದೇಶಗಳನ್ನು ಎಲ್ಲರೂ ಗಮನಿಸಬೇಕೆಂದು ಶ್ರೀಲಕ್ಷ್ಮೀ ಮನವಿ ಮಾಡಿದರು. ತಾಪಂ ಅಧ್ಯಕ್ಷ ಶ್ರೀಕಂಠಯ್ಯ, ಉಪಾಧ್ಯಕ್ಷೆ ಮಂಜುಳಾದೇವಿ, ಲೆಕ್ಕಾಧಿಕಾರಿ ರಾಮಂದ್ರಪ್ಪ, ತಾಲೂಕು ಪಂಚಾಯಿತಿ ಸದಸ್ಯರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next