Advertisement
ಅಕ್ಕಲಕೋಟ ತಾಲೂಕಿನ ದುಧನಿ ನಗರದ ಭೀಮನಗರ ಕನ್ನಡ ಶಾಲೆ ಬೆಳ್ಳಿ ಹಬ್ಬ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.ಚಂದ್ರಶೇಖರ ಕಟ್ಟಿಮನಿ ಮಾತನಾಡಿ, ಸರಕಾರಿ ಮಾಧ್ಯಮದ ಶಾಲೆಗಳು ಮಾತ್ರ ಸಮಾಜದಲ್ಲಿ ಸಮಾನತೆ ತರಬಹುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡ ಉಳಿಸಿಕೊಂಡು ಬಂದಿರುವುದು ಬಹಳ ಸಂತೋಷ ತಂದಿದೆ. ಗಡಿಭಾಗದ ಶಾಲೆ ಪ್ರಗತಿ ಹಾಗೂ ಕನ್ನಡ ಅಭಿಮಾನವನ್ನು ಕೊಂಡಾಡಿದರು.
Related Articles
Advertisement
ಪೊಲೀಸ್ ಉಪ ನೀರಿಕ್ಷಕ ಬಾಳಾಸಾಹೇಬ ನರವಟೆ, ಉತ್ತಮರಾವ್ ಗಾಯಕವಾಡ, ಬಸವರಾಜ ಹೌದೆ, ಲಿಂಗರಾಜ ಹೌದೆಯವರು ಪ್ರತಿಮೆ ಪೂಜೆ ನೆರವೇರಿಸಿದರು. ಗುರುಶಾಂತ ಮಗಿ ಬೆಳ್ಳಿ ಹಬ್ಬಕ್ಕೆ ಚಾಲನೆ ನೀಡಿದರು.ರಾಮಾ ಗದ್ಧಿ, ವಾಗೇಶ ಪಾಟೀಲ, ಬಸವರಾಜ ಕೌಲಗಿ, ಜಹಾಂಗೀರ ಖೆ„ರಾಟ, ಚಾಂದಸಾಬ ನಾಕೇದಾರ, ಪ್ರಕಾಶ ಗಾಯಕವಾಡ, ಇರಫಾನ ಡಫೆದಾರ, ಮಸ್ತಾನ ಮಕಾನದಾರ, ವಿಜಯಕುಮಾರ ಲೊಡ್ಡೆನವರು, ಗುರುಶಾಂತ ಗಾಯಕವಾಡ, ಚಂದ್ರಕಾಂತ ದೊಡಮನಿ, ಪ್ರಕಾಶ ಜಮಾದಾರ, ನಾಗಪ್ಪಾ ಲೊಡ್ಡೆನವರು, ಡಾ| ಸುಭಾಷ್ ಕೋಳೆಕರ, ಎಸ್.ಕೆ. ಬಿರಾದಾರ, ರಾಜಶೇಖರ ಉಮರಾಣಿಕರ, ಅಶೋಕ ಕಬಾಡೆ, ಗುರುಶಾಂತ ಪರಮಶೆಟ್ಟಿ, ರಾವೂಫ್ ನಿಂಬಾಳ, ಧರ್ಮಾ ಸಿಂಗೆ ಪಾಲ್ಗೊಂಡಿದ್ದರು. ಕಾರ್ಯಕ್ರಮ ಯಶಸ್ವಿಗಾಗಿ ಶಾಲೆ ಮುಖ್ಯಗುರು ಗೌತಮ ಕಾಂಬಳೆ, ಮಲಿಕಜಾನ್ ಶೇಖ್, ಶಾಂತಮಲ್ಲಯ್ಯ ಸ್ವಾಮಿ, ಶರಣಪ್ಪ ಮೆತ್ರೆ, ಮಲ್ಲಪ್ಪ ಕಾಂಬಳೆ, ಸಾವಿತ್ರಿ ಡೊಂಗರಾಜೆ, ಕಲಾವತಿ ಅರಸಗೊಂಡ, ವಿಜಯ ಗಾಯಕವಾಡ ಹಾಗೂ ವಿಶ್ವನಾಥ ರೇವೂರ ಜೊತೆಗೆ ಶಾಲೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಎಲ್ಲ ಸದಸ್ಯರು, ವಿವಿಧ ಸಂಘಟನೆಗಳು ಯುವಕರು ಶ್ರಮಿಸಿದರು. ಮುಖ್ಯಗುರು ಗೌತಮ ಕಾಂಬಳೆ ಸ್ವಾಗತಿಸಿದರು. ಶಾಂತಮಲ್ಲಯ್ಯ ಸ್ವಾಮಿ ನಿರೂಪಿಸಿದರು.