Advertisement
ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ತನ್ನ ಇದೇ ನಡೆಯನ್ನು ಮುಂದುವರಿಸಿರುವ ಪ್ರಧಾನಿ ಮೋದಿ ಅವರು ಇದೀಗ ನೆರೆ ರಾಷ್ಟ್ರ ಭೂತಾನ್ ಗೆ ಎರಡು ದಿನಗಳ ಭೇಟಿ ನೀಡಿ ವಾಪಸಾಗಿದ್ದಾರೆ.
ಭೂತಾನ್ ನಲ್ಲಿ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ಲಭಿಸಿದೆ. ಮಾತ್ರವಲ್ಲದೇ ಭೂತಾನ್ ಮತ್ತು ಭಾರತ ದೇಶಗಳ ಜನರ ನಡುವಿನ ಬಾಂಧವ್ಯ ವೃದ್ಧಿಯೇ ಮೋದಿ ಅವರ ಈ ಬೇಟಿಯ ಉದ್ದೇಶವಾಗಿತ್ತು. ಅವರು ನಗುನಗುತ್ತಾ ಬಂದರು ಮತ್ತು ಸಂತೋಷದಿಂದಲೇ ಇಲ್ಲಿಂದ ಹಿಂದಿರುಗಿದರು ಎಂದು ಭೂತಾನ್ ದೇಶದ ಪ್ರದಾನ ಮಂತ್ರಿ ಡಾ. ಲೊಟೆ ಶೆರಿಂಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಭೂತಾನ್ ಭೇಟಿಯ ಅವಧಿಯಲ್ಲಿ ಏನೇನಾಯ್ತು?
ಪ್ರಧಾನಿ ಮೋದಿ ಅವರು ರಾಯಲ್ ಯೂನಿವರ್ಸಿಟಿ ಆಫ್ ಭೂತಾನ್ ನಲ್ಲಿ ವಿದ್ಯಾರ್ಥಿಗಳು ಮತ್ತು ಸಂಸತ್ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಬಹ್ಯಾಕಾಶದಂತ ನವೀನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಎರಡೂ ದೇಶಗಳೂ ಶ್ರಮಿಸಲಿವೆ ಎಂದು ಅವರು ಹೆಳಿದರು.
Related Articles
ಒಟ್ಟು ಒಂಭತ್ತು ಒಪ್ಪಂದಗಳಲ್ಲಿ ಕನಿಷ್ಠ ಏಳು ಒಪ್ಪಂದಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ ಎನ್ನುವುದು ವಿಶೇಷ. ಇನ್ನು ರೂಪೆ ಸೇವೆಗಳ ಪರಿಚಯಿಸುವಿಕೆ, ಜಲವಿದ್ಯುತ್ ಪವರ್ ಪ್ಲಾಂಟ್ ಸಹಿತ ಒಟ್ಟು ಐದು ಯೋಜನೆಗಳಿಗೆ ಭೂತಾನ್ ಪ್ರಧಾನಿ ಸಮಕ್ಷಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಇನ್ನು ಪ್ರಮುಖ ಬೆಳವಣಿಗೆಯಲ್ಲಿ ಇಸ್ರೋ ಸ್ಥಾಪಿಸಲಾಗಿರುವ ದಕ್ಷಿಣ ಏಷ್ಯಾ ಉಪಗ್ರಹಗಳಿಗಾಗಿನ ಕೇಂದ್ರವೊಂದನ್ನು ಸಹ ಉದ್ಘಾಟಿಸಲಾಯಿತು.
Advertisement
ಇನ್ನು ಭೂತಾನ್ ದೇಶದ ಅಭಿವೃದ್ಧಿ ಉದ್ದೇಶಕ್ಕಾಗಿ ಭಾರತವು ತನ್ನ ಹನ್ನೆರಡನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ 5000 ಕೋಟಿ ರೂಪಾಯಿಗಳನ್ನು ಹಿಲಾಲಯದ ತಪ್ಪಲಲ್ಲಿ ಇರುವ ಈ ದೇಶಕ್ಕೆ ನೀಡುವ ಭರವಸೆಯನ್ನು ನೀಡಿತು. ಈ ಉದ್ದೇಶದಡಿಯಲ್ಲಿ ನೀಡಲಾಗುವ ಪ್ರಥಮ ಕಂತನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.