ಬದಿಯಡ್ಕ: ಬದಿಯಡ್ಕ ಲೋಕೋಪ ಯೋಗಿ ಕಾರ್ಯಾಲಯದ ಎದುರು ಕಳೆದ 22 ದಿನಗಳಿಂದ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಮಲೆನಾಡಿನ ರಸ್ತೆಗಳ ದುರವಸ್ಥೆಗೆ ಸರಕಾರ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಪರಿಹಾರ ಲಭಿಸಿದ್ದು, ಶುಕ್ರವಾರ ತಿರುವನಂತಪುರದಲ್ಲಿ ಮಂಡಿಸಲ್ಪಟ್ಟ ರಾಜ್ಯ ಮುಂಗಡ ಪತ್ರದಲ್ಲಿ ನಿಧಿ ಮೀಸಲಿರಿಸಲಾಗಿದೆ.
ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ ಡಾಮರೀಕ ರಣಕ್ಕೆ 29 ಕೋಟಿ ರೂ. ಹಾಗು ಸೆಕ್ರಂಪಾರೆ- ಅರ್ಲಡ್ಕ-ಪುಂಡೂರು-ನಾರಂಪಾಡಿ-ಏತಡ್ಕ ಸಂಪರ್ಕ ರಸ್ತೆಗೆ 25 ಕೋಟಿ ರೂ.ಗಳ ನಿಧಿ ಘೋಷಿಸಿ ಮುಂಗಡಪತ್ರದಲ್ಲಿ ಮೀಸಲಿರಿಸಲಾಗಿದೆ.
ಜನಪರ ಹೋರಾಟ ಸಮಿತಿಯ ಪ್ರತಿಭಟನೆ ಸರಕಾರದ ಕಣ್ಣು ತೆರೆಸುವಲ್ಲಿ ಸಫಲವಾಗಿರುವ ಬಗ್ಗೆ ಹೋರಾಟ ಸಮಿತಿಯ ಅಧ್ಯಕ್ಷ ಮಾಹಿನ್ ಕೇಳ್ಳೋಟ್ ಪತ್ರಿಕೆಗೆ ಈ ಬಗ್ಗೆ ಮಾಹಿತಿ ನೀಡಿ ಹರ್ಷ ವ್ಯಕ್ತಪಡಿಸಿದರು. ಹೋರಾಟ ಸಮಿತಿಯ ಪ್ರತಿಭ ಟನಾ ಸ್ಥಳದಲ್ಲಿ ಶುಕ್ರವಾರ ಸಂಜೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಲಾಯಿತು. ಮಾಹಿನ್ ಕೇಳ್ಳೋಟ್, ಎಸ್.ಎನ್. ಮಯ್ಯ, ಕುಂಜಾರು ಮೊಹಮ್ಮದ್ ಹಾಜಿ, ಬಾಲಕೃಷ್ಣ ಶೆಟ್ಟಿ, ಅವಿನಾಶ್ ರೈ, ಚಂದ್ರನ್, ಮುಸಾ ಬಿ. ಚೆರ್ಕಳ, ಶ್ಯಾಮ್ ಪ್ರಸಾದ್ ಮಾನ್ಯ, ಆಶ್ರಫ್, ನೌಶಾದ್, ನವೀನ್ ಮೀಡಿಯಾ ಕ್ಲಾಸಿಕಲ್ಸ್, ಅಬ್ದುಲ್ಲ ಚಾಳಕ್ಕಾರ, ಶಂಕರ ಹಾಗೂ ಮಹಿಳೆಯರು ಮಕ್ಕಳು ಪಾಲ್ಗೊಂಡರು. ಪಿ.ಕೆ. ಗೋಪಾಲಕೃಷ್ಣ ಭಟ್ ಹಾಗು ವ್ಯಾಪಾರಿ ನೇತಾರ ಕುಂಜಾರು ಮುಹಮ್ಮದ್ ಹಾಜಿ ಮುಷ್ಕರದಲ್ಲಿ ಪಾಲ್ಗೊಂಡವರನ್ನು ಅಭಿನಂದಿಸಿದರು.
ಕಿನ್ಪಡ್ ಬೋರ್ಡ್ ರಚನೆ: ಕೇರಳ ಸರಕಾರವು ಇದೇ ಮೊದಲ ಬಾರಿಗೆ ರಸ್ತೆ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿಗೆ ನೂತನ ವ್ಯವಸ್ಥೆಗೆ ರೂಪು ನೀಡಿದ್ದು, ಕಿನ್ಪಡ್ ಬೋರ್ಡ್ (ಕೇರಳ ಇನಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್ ಬೋರ್ಡ್) ಮೂಲಕ ನಿಧಿಗಳನ್ನು ವಿನಿಯೋಗಿಸುವ, ನಿಧಿ ಹೆಚ್ಚಿಸುವ ಮೊದ ಲಾದ ಹಕ್ಕನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ರಸ್ತೆಗೆ ಮೀಸಲಿರಿಸಲಾದ ನಿಧಿ ಸಾಕಾಗದಿದ್ದಲ್ಲಿ ಈ ಬೋರ್ಡ್ ಮೂಲಕ ಹೆಚ್ಚಿನ ನಿಧಿ ಪಡೆಯಲು ಸಾಧ್ಯವಿದೆ ಎಂದು ಶುಕ್ರವಾರ ರಾಜ್ಯ ಸರಕಾರ ತಿಳಿಸಿರುವುದು ಭರವಸೆ ಮೂಡಿಸಿದೆ.