Advertisement
ನಿಯಮ ಮೀರಿ ಹಿಜಾಬ್ ಧರಿಸಿ ಕೊಂಡು ಬಂದ ವಿದ್ಯಾರ್ಥಿನಿಯರಿಂದ ಸೃಷ್ಟಿಯಾದ ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ವಿವಾದ ಸೃಷ್ಟಿಯಾದ ಅನಂತರ ರಾಜ್ಯ ಸರಕಾರ ಕೂಡ ಸಮವಸ್ತ್ರಕ್ಕೆ ಸಂಬಂಧಿಸಿದ ನಿಯಮವನ್ನು ಜಾರಿಗೆ ಮಾಡಿದೆ. ಜೂನ್ 15ರ ವರೆಗೂ ದಾಖಲಾತಿ ನಡೆಯಲಿದೆ. ಆದರೆ ಈಗಾಗಲೇ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
Related Articles
Advertisement
ಯಾರನ್ನೂ ನಿರಾಕರಿಸುವಂತಿಲ್ಲ :
ಸರಕಾರಿ ಕಾಲೇಜಾಗಿದ್ದರಿಂದ ಪ್ರವೇಶ ಬಯಸಿ ಯಾರೇ ಬಂದರೂ ನಿರಾಕರಿಸುವಂತಿಲ್ಲ. ಕಳೆದ ವರ್ಷ ಅಂತಿಮವಾಗಿ 340 ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ಅವಕಾಶ ನೀಡಲಾಗಿತ್ತು. ಮೆರಿಟ್ ಆಧಾರದಲ್ಲಿ ಸರಕಾರದ ನಿಯಮದಂತೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಂದ ಮುಚ್ಚಳಿಕೆ :
ಎಲ್ಲ ವಿದ್ಯಾರ್ಥಿಗಳು ಮತ್ತು ಪಾಲಕರಿಂದ, “ಯಾವುದೇ ಕಾರಣಕ್ಕೂ ನಿಯಮ ಮೀರಿ ವರ್ತಿಸುವುದಿಲ್ಲ ಹಾಗೂ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ’ ಎಂದು ಮುಚ್ಚಳಿಕೆ ಪಡೆದುಕೊಳ್ಳಲಾಗುತ್ತಿದೆ.
ನಮ್ಮ ಕಾಲೇಜು ಸೇರಲು ವಿದ್ಯಾರ್ಥಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 350ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವ ಬಗ್ಗೆ ದಾಖಲಾತಿಯ ಸಂದರ್ಭದಲ್ಲೇ ಸೂಚನೆ ನೀಡುತ್ತಿದ್ದೇವೆ.– ರುದ್ರೇಗೌಡ, ಪ್ರಾಂಶುಪಾಲ, ಬಾಲಕಿಯರ ಪಿಯು ಕಾಲೇಜು