Advertisement

ಅಮೆರಿಕ ವಿದ್ಯಾರ್ಥಿಗಳೊಂದಿಗೆ ಮಾತಾಡಲು ಉನ್ನತ ಶಿಕ್ಷಣ ಸಚಿವರ ಪರದಾಟ!

01:58 PM Jun 23, 2018 | |

 ಬೆಂಗಳೂರು: ಖಾತೆ ಬದಲಾವಣೆಗೆ ಎಲ್ಲಾ ಕಸರತ್ತು ಮಾಡಿ ಕೊನೆಗೆ ಒಲ್ಲದ ಮನಸ್ಸಿನಲ್ಲಿ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿದ್ದ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ ವಿಧಾನಸೌಧಕ್ಕೆ ಆಗಮಿಸಿದ್ದ ಅಮೆರಿಕ ವಿದ್ಯಾರ್ಥಿಗಳೊಂದಿಗೆ ಮಾಡತನಾಡಲು ಪರದಾಡಿದ ಘಟನೆ ನಡೆದಿದ್ದು, ಟೀಕಾಕಾರರಿಗೆ ಟೀಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ. 

Advertisement

ಅಮೆರಿಕದಿಂದ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಿಯೋಗ ವಿಧಾನಸೌಧಕ್ಕೆ ಭೇಟಿ ನೀಡಿ ಸಚಿವರೊಂದಿಗೆ ಮಾತುಕತೆ ನಡೆಸಿದರು. ಕೇವಲ 8 ನೇ ತರಗತಿ ಮಾತ್ರ ಕಲಿತಿರುವ ಜಿಟಿಡಿ ಅವರು ಇಂಗ್ಲೀಷ್‌ನಲ್ಲಿ  ಮಾತನಾಡಲು ಸಾಧ್ಯವಾಗಲ್ಲಿಲ್ಲವಾದರೂ ಕೆಲ ಪದಗಳನ್ನು ಮಾತನಾಡಿದರು. 

ಭೇಟಿ ವೇಳೆ ಬೆಂಗಳರೂರು ಉತ್ತರ ವಿವಿ ಕುಲಪತಿ ಕೆಂಪರಾಜು ಅವರಿದ್ದು ಸಚಿವರು ಮತ್ತು ವಿದ್ಯಾರ್ಥಿಗಳ ವಿಚಾರವನ್ನು ವಿನಿಮಯ ಮಾಡಿಕೊಂಡರು. 

ಬೆಂಗಳೂರು ಮತ್ತು ರಾಜ್ಯದ ವಿವಿಗಳಿಗೆ ತೆರಳಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡುವುದಾಗಿ ಸಚಿವರು ವಿದ್ಯಾರ್ಥಿಗಳ ನಿಯೋಗಕ್ಕೆ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next