ನಗರದಲ್ಲಿ ಪಾದಚಾರಿ ಮಾರ್ಗಹಾಗೂ ರಾಜಕಾಲುವೆಗಳ ಮೇಲಿರುವಟ್ರಾನ್ಸ್ಫಾರ್ಮರ್ ತೆರವಿಗೆ ಆದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ವಿ.ಜಿ. ಅತ್ರಿ ಸಲ್ಲಿಸಿರುವ ಸಾರ್ವಜನಿಕಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿಎ.ಎಸ್.ಓಕಾನೇತೃತ್ವದವಿಭಾಗೀಯ ನ್ಯಾಯಪೀಠ ಗುರುವಾರವಿಚಾರಣೆ ನಡೆಸಿತು.
ಈ ವೇಳೆ ಬೆಸ್ಕಾಂ ಪರ ವಕೀಲರು ವಾದಮಂಡಿಸಿ ಸಮನ್ವಯ ಸಮಿತಿ ಕಳೆದಜು.17ರಂದು ಸಭೆ ನಡೆಸಿದೆ, ಆದರೆಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳತಂಡ ಜಂಟಿ ಪರಿಶೀಲನೆ ನಡೆಸಿಸಲ್ಲಿಸಿರುವ ವರದಿ ಲಭ್ಯವಾಗದ ಕಾರಣಯಾವುದೇ ನಿರ್ಧಾರ ಕೈಗೊಂಡಿಲ್ಲ.ಪಾಲಿಕೆ ಪರ್ಯಾಯ ಜಾಗವನ್ನುಸೂಚಿಸಿದರೆ ಬೆಸ್ಕಾಂ ಟ್ರಾನ್ಸ್ಫಾರ್ಮರ್ಗಳನ್ನು ತೆರವುಗೊಳಿಸಲಿದೆ ಎಂದರು.
Advertisement
ಅದಕ್ಕೆ, ಪಾಲಿಕೆ ಪರ ವಕೀಲರು, ಜಂಟಿಸಮೀಕ್ಷೆಯಲ್ಲಿ ಪಾದಚಾರಿ ಮಾರ್ಗದಮೇಲಿನ ಟ್ರಾನ್ಸ್ಫಾರ್ಮರ್ಗಳನ್ನುಗುರುತಿಸಲಾಗಿದೆ. ಬೆಸ್ಕಾಂ ಅವುಗಳನ್ನುಅಳವಡಿಸುವಾಗ ಪಾಲಿಕೆಯ ಅನುಮತಿಪಡೆದಿಲ್ಲ. ಹಾಗಾಗಿ ಪಾಲಿಕೆ ಯಾವುದೇನಿರ್ಧಾರಕೈಗೊಂಡಿಲ್ಲ ಎಂದರು.ಆಗ ನ್ಯಾಯಪೀಠ “”ಪಾಲಿಕೆ ಹಾಗೂಬೆಸ್ಕಾಂ ಅಧಿಕಾರಿಗಳು ಕಚೇರಿಯಿಂದಹೊರಬಂದು ಬೀದಿಯಲ್ಲಿ ನಿಂತರೆ ಸಾಕುಪಾದಚಾರಿ ಮಾರ್ಗದ ಮೇಲಿನ ಟ್ರಾನ್Õಫಾರ್ಮರ್ಗಳು ಗೋಚರಿಸುತ್ತವೆ, ಅವುಸಾರ್ವಜನಿಕರಿಗೆ ಅಪಾಯಕಾರಿಯಾಗಿಪರಿಣಮಿಸಿವೆ”ಎಂದು ಹೇಳಿತು.