Advertisement

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

12:42 PM Oct 26, 2021 | Team Udayavani |

ಬೆಂಗಳೂರು: ಸಾರ್ವಜನಿಕರಿಗೆ ಮೂಲಸೌಕರ್ಯ ಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ. ಅದಕ್ಕಾಗಿ ಸಾಲ ಮಾಡಿ ಅಥವಾ ಕಳ್ಳತನ ಮಾಡಿ ಹಣಕಾಸು ಹೊಂದಿಸುತ್ತಿರೋ ಅದು ನಿಮಗೆ ಬಿಟ್ಟಿ ವಿಚಾರ ಎಂದು ಬಿಬಿಎಂಪಿಗೆ ಹೈಕೋರ್ಟ್‌ ಕಿವಿ ಹಿಂಡಿದೆ.

Advertisement

ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್  ಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿಪಡಿಸಲು ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಶ್ವತ್ಥನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರಶ್ನಿಸಲಾದ ಪ್ರದೇಶದಲ್ಲಿ ರಸ್ತೆ ನಿರ್ಮಾಣಹಾಗೂ ಅದರ ನಿರ್ವಹಣೆಗೆ ಕಾಲಮಿತಿ ಕಾರ್ಯಕ್ರಮಹಾಕಿಕೊಳ್ಳಿ ಎಂದು ಬಿಬಿಎಂಪಿಗೆ ಸೂಚಿಸಿತು. ಅದಕ್ಕೆಬಿಬಿಎಂಪಿ ಪರ ವಕೀಲರು ಪ್ರತಿಕ್ತಿಯಿಸಿ, ಕಾಲಮಿತಿಹಾಕಿಕೊಳ್ಳುವುದು ಕಷ್ಟ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಹಣ ಸರ್ಕಾರ ನೀಡಬೇಕು. ಸರ್ಕಾರದಿಂದ ಹಣ ಬಂದಂತೆ ಹಂತ-ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕಾಲಮಿತಿಯ ಬದಲು ಹಂತ-ಹಂತವಾಗಿ ಎಂದು ನಿರ್ದೇಶನ ನೀಡಿದರೆ ಅನುಕೂಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಣಕಾಸಿನ ಲಭ್ಯತೆ ಅಧರಿಸಿ ಹಂತ-ಹಂತವಾಗಿ ಕೆಲಸ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಹಣ ಹೊಂದಿಸಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ. ಇದರಲ್ಲಿ ಕೋರ್ಟ್‌ ನಿರ್ದೇಶನ ನೀಡುವುದಿಲ್ಲ. “”ಸಾಲ ಮಾಡುತ್ತೀರೋ, ಕಳ್ಳತನಮಾಡುತ್ತೀರೋ ಗೊತ್ತಿಲ್ಲ. ಜನರಿಗೆ ಮೂಲ ಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯ. ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಶೀಘ್ರ ಆರಂಭಿಸಿ’ ಎಂದು ತಾಕೀತು ಮಾಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next