ಏನೇನು ಭತ್ತ, ಗೇರು, ಮಾವು, ಬಾಳೆ, ಕಾಳು ಮೆಣಸು, ತರಕಾರಿ ವಯಸ್ಸು: 84
ಕೃಷಿ ಪ್ರದೇಶ: 9 ಎಕ್ರೆ
Advertisement
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತ್ವದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
Related Articles
ಗೇರು ಹಣ್ಣಿನಿಂದ ಜ್ಯೂಸ್, ಪಲ್ಪ್, ಸಿರಾಫ್, ಜಾಮ್ ಮತ್ತು ಹಲ್ವ ತಯಾರಿಸಿ ಮಾರಾಟ ಮಾಡುತ್ತಾರೆ. ಪುತ್ರ ಕೆನ್ಯೂಟ್ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ, ಕಾಸರಗೋಡು ಜಿಲ್ಲೆಗಳಿಗೆ ಮಾರುಕಟ್ಟೆ ವಿಸ್ತರಿಸಿದ್ದಾರೆ.
Advertisement
ಕೃಷಿಗೆ ಮಕ್ಕಳ ಸಹಕಾರವಲೇರಿಯನ್ ಅವರ ಮಕ್ಕಳಾದ ಕೆನ್ಯೂಟ್, ಕ್ಲಾರೆಟ್, ಡೋನೆಟ್ ಈ ಮೂವರು ತಂದೆಯ ಕೃಷಿಯಲ್ಲಿ ಕೈ ಜೋಡಿಸುತ್ತಾರೆ. ಕಿರಿಯ ಮಗ ಕ್ಲಾರೆಟ್ ಅವರು ದುಬಾೖನಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಇವರು ಭತ್ತದ ನಾಟಿ, ಕಟಾವು ಇಂತಹ ಸಂದರ್ಭಗಳಲ್ಲಿ ಕೆಲಸಕ್ಕೆ ರಜೆ ಹಾಕಿ ಊರಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಇವರು ಕೃಷಿಯಿಂದಾಗಿ ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ. ಇವರು ಯಾವುದೇ ಸಾಲವನ್ನು ಮಾಡಿಲ್ಲ. ಹಾಗೇಯೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಾಗ ಕೃಷಿಯಲ್ಲಿ ಯಶಸ್ವಿಯಾಗಹಬಹುದು ಎಂಬುದು ಇವರ ಅಭಿಪ್ರಾಯ. ಬಾಲ್ಯದ ದಿನಗಳಿಂದಲೂ ವಲೇರಿಯನ್ ಅವರು ಕೃಷಿಕರಾಗಿ ದುಡಿದು ತನ್ನ ಹೆಚ್ಚಿನ ಸಮಯವನ್ನು ಕಳೆದವರು. ಸಾಮಾಜಿಕವಾಗಿ ಸಹಕಾರ ಸಂಘ ಮತ್ತು ಚರ್ಚ್‌ನ ಆಡಳಿತ ವ್ಯವಸ್ಥೆಯಲ್ಲಿ ತನ್ನ ಸೇವೆಯನ್ನು ಮಾಡಿದ್ದಾರೆ. ಇವರ ಎಂಟು ಮಂದಿ ಮಕ್ಕಳಲ್ಲಿ ಮೂವರು ಗಂಡು ಮಕ್ಕಳ ಕೃಷಿಯ ಮೇಲಿನ ಆಸಕ್ತಿ ಇತರ ಯುವಕರಿಗೆ ಪ್ರೇರಣೆಯಾಗಿದೆ. ಪ್ರಶಸ್ತಿ ಪುರಸ್ಕಾರಗಳು
2008ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ. 2019ರಲ್ಲಿ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ವಲೇರಿಯನ್ ಅವರು ಕೃಷಿಯ ಜತೆಗೆ ಪಶುಸಂಗೋಪನೆಗೆ ಮುಂದಾಗಿದ್ದು ಇವರ ಮನೆಯಲ್ಲಿ ದೇಶಿಯ ತಳಿಯ 7 ದನಗಳಿಂದ ದಿನಕ್ಕೆ ಸುಮಾರು 30ರಿಂದ 50 ಲೀ. ಹಾಲನ್ನು ಪಡೆಯುತ್ತಿದ್ದಾರೆ. ಜಾನುವಾರು ಸಾಕಣೆಗೆ ಇವರ ಮಾದರಿಗೆ ಸರಕಾರದಿಂದ 8 ಬಾರಿ ವಿವಿಧ ಪ್ರಶಸ್ತಿಗಳು ಕೂಡ ಅರಸಿಬಂದಿವೆ. ಕೃಷಿಯಲ್ಲಿ ಕೀಟ ಬಾಧೆಯಂತಹ ಸಮಸ್ಯೆ ಬಂದಾಗ ಮಾತ್ರ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುತ್ತಾರೆ. ಇಲ್ಲದಿದ್ದರೆ ಇವರು ಸಾವಯವ ಗೊಬ್ಬರದಿಂದಲೇ ಕೃಷಿ ಮಾಡುತ್ತಾರೆ. ಯಂತ್ರಗಳ ಯುಗ ಇದಾಗಿರುವುದರಿಂದ ಗದ್ದೆ ಕೆಲಸಕ್ಕೆ ಕೋಣಗಳನ್ನು ಬಳಕೆ ಮಾಡುವುದು ಸ್ವಲ್ಪ ಕಡಿಮೆಯಾಗಿದೆ. ಕೃಷಿಯ ಕೆಲಸಗಳಿಗೆ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ವಲೇರಿಯನ್.
ಮೊಬೈಲ್ ಸಂಖ್ಯೆ: 9449209179 ಸರಕಾರ ಸವಲತ್ತುಗಳನ್ನು ಪಡೆಯಿರಿ
ಈ ಹಿಂದೆ ಕೃಷಿ ಬದುಕು ಕಷ್ಟಕರವಾಗಿದ್ದರೂ ಕೂಡ ಎಲ್ಲರೂ ಕೃಷಿಗೆ ಒತ್ತು ನೀಡುತ್ತಿದ್ದರು. ಆದರೆ ಇಂದು ಎಲ್ಲರೂ ಉದ್ಯೋಗ ಅರಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ. ಕೃಷಿಕರ ಸಂಖ್ಯೆ ಸ್ವಲ್ಪ ವಿರಳವಾಗುತ್ತಿದೆ. ಹಾಗಾಗಿ ಕೃಷಿ ಕಡೆ ಮುಖ ಮಾಡಬೇಕಿದೆ. ಸರಕಾರದ ಸವಲತ್ತುಗಳನ್ನು ಸದುಪಯೋಗಡಿಸಿಕೊಳ್ಳಬೇಕಿದೆ. ಕೃಷಿಯಲ್ಲಿ ಶ್ರಮ ವಹಿಸಿ ದುಡಿದರೆ ಯಶಸ್ಸು ನಮ್ಮದಾಗುತ್ತದೆ. ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆಯಿಂದ ಹೆಚ್ಚಿನ ಲಾಭ ಗಳಿಸಬಹುದು.
-ವಲೇರಿಯನ್ ಆರಾನ್ಹಾ , ಕೃಷಿಕರು ಎಂ. ಸರ್ವೋತ್ತಮ ಅಂಚನ್ ಮೂಲ್ಕಿ