Advertisement

ಹೆದ್ದಾರಿಗೆ ಡಾಮರು: ಕೊನೆಗೂ ಧೂಳಿನ ಸಮಸ್ಯೆಯಿಂದ ಮುಕ್ತಿ

01:35 AM Sep 26, 2018 | Karthik A |

ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಮಂಗಳವಾರ ಮತ್ತೆ ಡಾಮರು ಹಾಕುವ ಪ್ರಕ್ರಿಯೆ ನಡೆಯಿತು. ಈ ಬಗ್ಗೆ ಸಂತೋಷ್‌ ಸುವರ್ಣ ಹಾಗೂ ಇತರರು ಹೋರಾಟ ಸಮಿತಿ ಹುಟ್ಟು ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

Advertisement

ಪುರಸಭೆ ವ್ಯಾಪ್ತಿ ಆರಂಭವಾಗುವಲ್ಲಿಂದಲೇ ಹದಗೆಟ್ಟ ರಸ್ತೆ ಕುಂದಾಪುರ ನಗರಕ್ಕೆ ಬಿಳಿಧೂಳಿನ ಸ್ವಾಗತ ನೀಡುತ್ತದೆ. ಬಸ್ರೂರು ಮೂರುಕೈಯಲ್ಲಿ ಶಿವಮೊಗ್ಗಕ್ಕೆ ಹೋಗುವ ತಿರುವಿನಲ್ಲೂ ಹದಗೆಟ್ಟಿದೆ. ಸಂಗಮ್‌ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ರಸ್ತೆ-ಹೊಂಡ, ರಸ್ತೆ ಅಂಚು ತಿಳಿಯದೆ ವಾಹನ ಸವಾರರು ತ್ರಾಸ ಪಡುತ್ತಾರೆ. ಮಳೆ ಬಂದಾಗ ಇಂತಹ ದುರವಸ್ಥೆಯಾದರೆ ಬಿಸಿಲಿದ್ದಾಗ ಈ ಪ್ರದೇಶವಿಡೀ ಧೂಳುಮಯ. ನಡೆದಾಡಲೂ ಅಸಾಧ್ಯ. ಜತೆಗೆ ಅಕ್ಕಪಕ್ಕದ ಅಂಗಡಿಯವರಿಗೂ ಧೂಳು ತಿನ್ನುವ ಸಂಕಷ್ಟ. ಇದರಿಂದ ಕಾಯಿಲೆ ಭೀತಿ ಬೇರೆ. ರಾಷ್ಟ್ರೀಯ ಹೆದ್ದಾರಿಯಾದ ಕಾರಣ ವಾಹನಗಳ ಓಡಾಟ ನಿಲ್ಲುವುದೇ ಇಲ್ಲ. ಹಾಗೆ ವಾಹನ ಹೋದಾಗಲೆಲ್ಲ ಧೂಳು ಹಾರಾಡುತ್ತಿರುತ್ತದೆ.

ಈ ಬಗ್ಗೆ ಉದಯವಾಣಿ ಸೆ.13ರಂದು ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಎರಡನೇ ದಿನವೇ ನವಯುಗ ಕಂಪನಿ ಡಾಮರು ಹಾಸುವ ಕಾರ್ಯ ನಡೆಸಿತ್ತು. ಆದರೆ ಐಆರ್‌ಬಿ ಕಂಪನಿ ಡಾಮರು ಹಾಕಿರಲಿಲ್ಲ. ಆದರೆ ಪೂರ್ಣ ಡಾಮರೀಕರಣ ನಡೆದಿರಲಿಲ್ಲ. ಇದಕ್ಕಾಗಿ ಸ್ಥಳೀಯರಿಂದ ಪ್ರತಿಭಟನೆ ನಡೆಸುವ ಯೋಚನೆ ಹಾಕಿಕೊಳ್ಳಲಾಗಿತ್ತು. ಸಂತೋಷ್‌ ಸುವರ್ಣ ಹಾಗೂ ಇತರರು ಪ್ರತಿಭಟನೆ ಕುರಿತು ಕುಂದಾಪುರ ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿದರು. ಹೆದ್ದಾರಿ ಸಮಸ್ಯೆ ತನ್ನ ಗಮನಕ್ಕೂ ಬಂದಿದ್ದು ಅನೇಕರಿಗೆ ಇದರಿಂದ ಅನನುಕೂಲವಾಗುತ್ತಿದೆ ಎಂದ ಅವರು ಗುತ್ತಿಗೆದಾರ ಸಂಸ್ಥೆಯವರನ್ನು ಸಂಪರ್ಕಿಸಿದರು. ಡಿವೈಎಸ್‌ಪಿ ಅವರ ಮನವಿಗೆ ಸ್ಪಂದಿಸಿದ ಗುತ್ತಿಗೆದಾರ ಸಂಸ್ಥೆಯವರು ಡಾಮರು ಹಾಕುವ ವ್ಯವಸ್ಥೆ ಮಾಡಿದ್ದಾರೆ. ಫ್ಲೈ ಓವರ್‌ ಕುರಿತು ದೂರು ಬಂದಾಗ ಸಹಾಯಕ ಕಮಿಷನರ್‌ ಟಿ. ಭೂಬಾಲನ್‌ ಅವರು ಸ್ಪಂದಿಸಿ ನೊಟಿಸ್‌ ನೀಡಿ ಕೇಸು ದಾಖಲಿಸಿ ಮಾರ್ಚ್‌ ಒಳಗೆ ಕಾಮಗಾರಿ ಪೂರೈಸುವಂತೆ ತೀರ್ಪು ನೀಡಿದ್ದರು. ಅಂತೆಯೇ ಮಳೆಗಾಲದಲ್ಲಿ ಗುಂಡಿ ಮುಚ್ಚಲು ಸೂಚಿಸಿದ್ದರು. ಇದೀಗ ಇನ್ನೊಬ್ಬ ಅಧಿಕಾರಿಯೂ ಜನರ ಮನವಿಗೆ ಓಗೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next