Advertisement

ಅತಿವೇಗದಿಂದ ಬೈಕ್ ಚಾಲನೆ: ಹಿಂಬದಿ ಸವಾರ ಸಾವು

07:50 AM Jun 23, 2021 | Team Udayavani |

ಶಿರಸಿ: ಬೈಕ್ ಸವಾರನೋರ್ವ ಅತಿವೇಗವಾಗಿ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ಹಿಂಬದಿ ಸವಾರನ ಸಾವಿಗೆ ಕಾರಣನಾದ ಘಟನೆ ಉತ್ತರ ಕನ್ನಡದ  ಬನವಾಸಿ ಸಮೀಪದ ಹಾಡಲಗಿ ಕೆರೆ ಸಮೀಪ ನಡೆದಿದೆ.

Advertisement

ಪ್ರಭಾಕರ ಬಸವಣ್ಣೆ ನಾಯ್ಕ (54 ವರ್ಷ) ಎಂಬಾತನೇ ಸಾವೀಗೀಡಾದ ವ್ಯಕ್ತಿ. ಈತ ಗಣಪತಿ ಕನ್ನಪ್ಪ ನಾಯ್ಕ ಎಂಬಾತನ ಬೈಕ್ ಮೇಲೆ ಹೊಗುತ್ತಿರುವಾಗ ಬೈಕ್ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದಾನೆ. ಇದರಿಂದ ಹಿಂಬದಿ ಸವಾರನಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಹನುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:  ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಕೆ.ಎಚ್ ಮುನಿಯಪ್ಪ

Advertisement

Udayavani is now on Telegram. Click here to join our channel and stay updated with the latest news.

Next