Advertisement

ಉಡುಪಿ: ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ :ವೇಳಾಪಟ್ಟಿ ಪ್ರಕಟ

07:52 PM Jan 24, 2022 | Team Udayavani |

ಉಡುಪಿ: 2020 21 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಅಂತರ್ ಘಟಕ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್‌ಗೆ ಸಂಬಂಧಿಸಿದಂತೆ , ಸಹ ಶಿಕ್ಷಕರ ಕ್ರಮಸಂಖ್ಯೆ 151 300 ರ ವರೆಗಿನ 150 ಅರ್ಜಿಗಳಿಗೆ ಜನವರಿ 25 ರಂದು, ಕ್ರ.ಸಂಖ್ಯೆ 301 500 ರ ವರೆಗಿನ 200 ಅರ್ಜಿಗಳಿಗೆ ಜನವರಿ ಜನವರಿ 27 ರಂದು, ಕ್ರ.ಸಂಖ್ಯೆ 501 ರಿಂದ 700 ರ ವರೆಗಿನ 200 ಅರ್ಜಿಗಳಿಗೆ ಜನವರಿ 28 ರಂದು ಕ್ರ.ಸಂಖ್ಯೆ 701 ರಿಂದ 900 ರ ವರೆಗಿನ 200 ಅರ್ಜಿಗಳಿಗೆ ಜನವರಿ 31 ರಂದು, ಕ್ರ.ಸಂಖ್ಯೆ 901  1164 ರ ವರೆಗಿನ 264 ಅರ್ಜಿಗಳಿಗೆ ಫೆಬ್ರವರಿ 1 ರಂದು ಬೆಳಗ್ಗೆ 10 ರಿಂದ ಹಾಗೂ ದೈಹಿಕ ಶಿಕ್ಷಕರ ಕ್ರ.ಸಂಖ್ಯೆ 1 196 ರ ವರೆಗಿನ 196 ಅರ್ಜಿಗಳಿಗೆ ಮತ್ತು ವಿಶೇಷ ಶಿಕ್ಷಕರ 1 124 ರ ವರೆಗಿನ 124 ಅರ್ಜಿಗಳಿಗೆ ಫೆಬ್ರವರಿ 2 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಅಂತರ್ ಘಟಕ ವಿಭಾಗದ ಹೊರಗಿನ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್‌ಗೆ ಸಂಬಂಧಿಸಿದಂತೆ, ಸಹಶಿಕ್ಷಕರು, ದೈ.ಶಿ.ಶಿಕ್ಷಕರು ಮತ್ತು ವಿಶೇಷ ಶಿಕ್ಷಕರಿಗೆ ಫೆಬ್ರವರಿ 3 ರಂದು ಬೆಳಗ್ಗೆ 10 ರಿಂದ ಮಣಿಪಾಲದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯು ನಡೆಯಲಿದ್ದು, ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಎಲ್ಲಾ ಶಿಕ್ಷಕರು ನಿಗಧಿಪಡಿಸಿದ ವೇಳಾಪಟ್ಟಿಯಂತೆ ಕೌನ್ಸಿಲಿಂಗ್‌ಗೆ ಹಾಜರಾಗಬಹುದಾಗಿದೆ.

Advertisement

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next