Advertisement

ಹೈಸ್ಕೂಲ್‌ ಹುಡುಗ ವಿಜಯ ರಾಘವೇಂದ್ರ!

10:00 AM Feb 03, 2020 | Lakshmi GovindaRaj |

ವಿಜಯ ರಾಘವೇಂದ್ರ ಅಭಿನಯ “ಮಾಲ್ಗುಡಿ ಡೇಸ್‌’ ಚಿತ್ರ ನಾನಾ ಕಾರಣಗಳಿಗಾಗಿ ಕುತೂಹಲ ಕೆರಳಿಸುತ್ತಿದೆ. ಮುಖ್ಯವಾಗಿ ವಿಜಯ ರಾಘವೇಂದ್ರ ಅವರ ಗೆಟಪ್‌. ಈಗಾಗಲೇ ಬಿಡುಗಡೆಯಾಗಿರುವ ಫೋಟೋದಲ್ಲಿ ವಿಜಯ ರಾಘವೇಂದ್ರ 75 ವರ್ಷದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ವಿಶೇಷ ಮೇಕಪ್‌ ಕೂಡಾ ಅವರಿಗೆ ಮಾಡಲಾಗಿದೆ. ಇದೀಗ ಅವರ ಮತ್ತೊಂದು ಗೆಟಪ್‌ ಗಮನ ಸೆಳೆಯುತ್ತಿದೆ. ಅದು ಹೈಸ್ಕೂಲ್‌ ಹುಡುಗನ ಗೆಟಪ್‌.

Advertisement

ಹೌದು, “ಮಾಲ್ಗುಡಿ ಡೇಸ್‌’ ಚಿತ್ರದಲ್ಲಿ ವಿಜಯ ರಾಘವೇಂದ್ರ ಹೈಸ್ಕೂಲ್‌ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ 18 ಕೆ.ಜಿ. ತೂಕ ಇಳಿಸಿ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಶನಿವಾರ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ನಲ್ಲಿ ಅವರ ಗೆಟಪ್‌ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಬರುವ ಟೀನೇಜ್‌ ದೃಶ್ಯಗಳಿಗಾಗಿ ವಿಜಯ ರಾಘವೇಂದ್ರ ಹೈಸ್ಕೂಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ಈ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ಬಹುತೇಕ ಮಳೆಯಲ್ಲೇ ಚಿತ್ರೀಕರಿಸಲಾಗಿದೆ.

ಅಂದಹಾಗೆ, “ಮಾಲ್ಗುಡಿ ಡೇಸ್‌’ ಚಿತ್ರ ಫೆ.07 ರಂದು ತೆರೆಕಾಣುತ್ತಿದೆ. ತುಳು ಚಿತ್ರರಂಗದಲ್ಲಿ “ಅಪ್ಪೆ ಟೀಚರ್‌’ ಎಂಬ ಸಿನಿಮಾ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಕಿಶೋರ್‌ ಈಗ ಮೊದಲ ಬಾರಿಗೆ ಕನ್ನಡದಲ್ಲಿ “ಮಾಲ್ಗುಡಿ ಡೇಸ್‌’ ಎಂಬ ಸಿನಿಮಾ ಮಾಡಿದ್ದಾರೆ. ರತ್ನಾಕರ್‌ ಕಾಮತ್‌ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ “ಅಪ್ಪೆ ಟೀಚರ್‌’ ಚಿತ್ರವನ್ನೂ ಇವರೇ ನಿರ್ಮಿಸಿದ್ದರು. ಈಗ ಇದೇ ಜೋಡಿ ಕನ್ನಡದಲ್ಲಿ ಸಿನಿಮಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next