Advertisement

ಅಧಿಕ ಸಂಖ್ಯೆ ಬಸ್‌ ರಸ್ತೆಗೆ

01:59 PM Apr 19, 2021 | Team Udayavani |

ಬೆಂಗಳೂರು: ಆರನೇ ವೇತನ ಆಯೋಗದವರದಿ ಜಾರಿಗೆ ಒತ್ತಾಯಿಸಿ ಸಾರಿಗೆಸಂಸ್ಥೆಯ ನೌಕರರು ಸೋಮವಾರ “ಜೈಲುಭರೋ’ ಚಳವಳಿಗೆ ಮುಂದಾಗಿದ್ದು,ಮುಷ್ಕರದ ಬೆನ್ನಲ್ಲೆ ಭಾನುವಾರ 1406ಬಿಎಂಟಿಸಿ ಬಸ್‌ಗಳು ಸಂಚಾರಮಾಡಿದವು.ಶನಿವಾರ ನಗರದ ವಿವಿಧಡೆಗೆ1,140ಬಸ್‌ಗಳು ಸಂಚರಿಸಿದ್ದವು.

Advertisement

ಇದಕ್ಕೆಹೋಲಿಕೆ ಮಾಡಿದಾಗ ಭಾನುವಾರ ಹೆಚ್ಚಿನಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳುರಸ್ತೆಗಿಳಿದಿವೆ. ಸೋಮವಾರ ಈ ಸಂಖ್ಯೆದ್ವಿಗುಣಗೊಳ್ಳುವ ನಿರೀಕ್ಷೆಯಿದೆ.ಜಿಗಣಿ, ಅನೇಕಲ್‌, ಎಲೆಕ್ಟ್ರಾನಿಕ್‌ ಸಿಟಿ,ದೊಡ್ಡಬಳ್ಳಾಪುರ, ಆವಲಹಳ್ಳಿ,ಹನುಮಂತನಗರ, ಬಿಡಿಎ ಪಾರ್ಕ್‌,ಯಲಹಂಕ, ಬನಶಂಕರಿ, ಕೆ.ಆರ್‌.ಮಾರುಕಟ್ಟೆ , ಕೆ.ಆರ್‌.ಪುರ,ಚಂದ್ರಾಲೇಔಟ್‌, ವಿಜಯನಗರ,ಮೈಸೂರು ರಸ್ತೆ, ಕೆಂಗೇರಿ, ಮಲತ್ತಹಳ್ಳಿ,ಅಂಬೇಡ್ಕರ್‌ ಕಾಲೇಜು, ಸುಜಾತ ಕೊಟ್ಟಿಗೆಪಾಳ್ಯ, ಸ್ಯಾಟಲೆಟ್‌ ಬಸ್‌ ನಿಲ್ದಾಣಸೇರಿದಂತೆ ಮತ್ತಿತರರ ಕಡೆಗಳಿಗೆ ಬಿಎಂಟಿಸಿಬಸ್‌ಗಳು ಪ್ರಯಾಣಿಕರನ್ನು ಹೊತ್ತುಸಾಗಿದವು.

ಮಲ್ಲೇಶ್ವರ, ಯಶವಂತಪುರ,ವಿದ್ಯಾರಣ್ಯಪುರ,ಹೆಬ್ಟಾಳ, ಆರ್‌ಟಿನಗರ,ಶಿವಾಜಿನಗರ, ಹೆಗಡೆ ನಗರ ಸೇರಿದಂತೆಮತ್ತಿತರ ಮಾರ್ಗಗಳಿಗೆ ಮೆಜೆಸ್ಟಿಕ್‌ನಿಂದಅಧಿಕ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳುಸಂಚರಿಸಿದವು.

ಶಿವಾಜಿನಗರ ಬಸ್‌ ನಿಲ್ದಾಣದಲ್ಲಿ ಕಳೆ:ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿಜನರಿಲ್ಲದೆ ಬಣಗುಡುತ್ತಿದ್ದ ಶಿವಾಜಿನಗರಬಸ್‌ನಿಲ್ದಾಣದಲ್ಲಿ ಭಾನುವಾರ ಬಸ್‌ಸಂಚಾರದಿಂದಾಗಿ ಕಳೆ ಕಂಡು ಬಂತು.

ಈಜಿಪುರ, ಶಾಂತಿನಗರ, ಜಯನಗರ,ಕುವೆಂಪುನಗರ, ಕುಮಾರಸ್ವಾಮಿ ಲೇಔಟ್‌,ಕಾರ್ಪೊರೇಷನ್‌, ಆರ್‌.ಟಿ.ನಗರ, ಹೆಬ್ಟಾಳ,ಬನಶಂಕರಿ, ವಿಧಾನಸೌಧ, ಕೆಂಪೇಗೌಡಬಸ್‌ ನಿಲ್ದಾಣ ಸೇರಿದಂತೆ ಇನ್ನಿತರಮಾರ್ಗದಲ್ಲಿ ಬಸ್‌ಗಳು ಸಾಗಿದವು.ಈ ವೇಳೆ ಮಾತನಾಡಿದ ಕೆ.ಆರ್‌.ಪುರದನಿವಾಸಿ ಮುನಿರಾಜು, ಖಾಸಗಿ ಬಸ್‌ಗಳಸಿಬ್ಬಂದಿಯ ದುಪ್ಪಟ್ಟು ದರ ವಸೂಲಿಯಿಂದಜನರು ರೋಸಿ ಹೋಗಿದ್ದಾರೆ. ಬಿಎಂಟಿಸಿಸಂಚಾರ ಕೊಂಚ ನೆಮ್ಮದಿ ತಂದಿದೆಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next