Advertisement
ಇಂಗ್ಲೆಂಡ್ ನ ರಾಷ್ಟ್ರೀಯ ಅಪರಾಧ ದಳದ ಮಾಹಿತಿ ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ಕರಾಚಿಯ ಡಿಎಚ್ ಎ ಏರಿಯಾದ ಬಂಗಲೆಯೊಂದಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಬೆಂಟ್ಲಿ ಮುಲ್ಸಾನ್ನೆ ಸೆಡಾನ್ ಕಾರು ಪತ್ತೆಯಾಗಿದೆ.
Related Articles
Advertisement
ದಾಳಿಯ ವೇಳೆಗೆ ಮನೆಯ ಮಾಲಕ ಕಾರಿನ ಬಗ್ಗೆ ಸರಿಯಾದ ದಾಖಲೆ ಪತ್ರಗಳನ್ನು ಒದಗಿಸಲು ವಿಫಲನಾಗಿದ್ದ. ಮನೆ ಮಾಲಿಕ ಮತ್ತು ಆತನಿಗೆ ಕಾರನ್ನು ಮಾರಿದ್ದ ಬ್ರೋಕರ್ ನನ್ನು ಕೂಡಾ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇಡೀ ದಂಧೆಯಲ್ಲಿ ಭಾಗಿಯಾಗಿರುವವರು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಿಕೊಂಡು ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಕಸ್ಟಮ್ಸ್ ಅಧಿಕಾರಿಗಳ ಎಫ್ಐಆರ್ ಪ್ರಕಾರ, ಕಾರನ್ನು ಕಳ್ಳತನದ ಮೂಲಕ ಸಾಗಾಟ ಮಾಡಿದ ಕಾರಣ ಸುಮಾರು 300 ಮಿಲಿಯನ್ ಪಾಕಿಸ್ಥಾನಿ ರೂಪಾಯಿ ತೆರಿಗೆಯಿಂದ ಆರೋಪಿ ತಪ್ಪಿಸಿಕೊಂಡಿದ್ದ. ಇಡೀ ಘಟನೆಯ ಮಾಸ್ಟರ್ ಮೈಂಡ್ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.