ರಾಜಕೀಯ ನೇತಾರರು ಎಂದಾಕ್ಷಣ ಮೊದಲು ನೆನಪಾಗುವುದು ಅವರು ತೊಡುವ ಖಾದಿ ಬಟ್ಟೆಗಳು. ಅದರಲ್ಲೂ ಇತ್ತೀಚೆಗೆ ಖಾದಿ ಕ್ರೇಜ್ ತುಸು ಜಾಸ್ತಿಯೇ ಆಗಿದೆ. ಅಂತೆಯೇ ಈ ಚುನಾವಣ ಸೀಸನ್‌ನಲ್ಲಿ ಖಾದಿ ಬಟ್ಟೆಗಳಿಗೆ ಭರ್ಜರಿ ಬೇಡಿಕೆ ಬಂದಿದೆಯಂತೆ. 2019ರ ಮಾರ್ಚ್‌ಗೆ ಅಂತ್ಯವಾದ ವಿತ್ತ ವರ್ಷದಲ್ಲಿ ಖಾದಿ ಬಟ್ಟೆಗಳ ಮಾರಾಟ ಪ್ರಮಾಣ ಶೇ.29ರಷ್ಟು ಏರಿಕೆ ಕಂಡಿದ್ದು, ದಾಖಲೆಯ 3,215 ಕೋಟಿ ರೂ.ಗಳ ಮೊತ್ತ ಸಂಗ್ರಹವಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮುಖ್ಯಸ್ಥ ವಿನಯ್ ಕುಮಾರ್ ಸಕ್ಸೇನಾ ಅವರೇ ತಿಳಿಸಿದ್ದಾರೆ.
Advertisement
2014-15ರ ಬಳಿಕ, ಅಂದರೆ ಕಳೆದ 5 ವರ್ಷಗಳಲ್ಲಿ ಖಾದಿ ಉದ್ದಿಮೆಯು 4 ಪಟ್ಟು ಹೆಚ್ಚು ಪ್ರಗತಿ ದಾಖಲಿಸಿದೆ. ದಿಲ್ಲಿ ಎನ್‌ಸಿಆರ್, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಖಾದಿಗೆ ಹೆಚ್ಚಿನ ಬೇಡಿಕೆಯಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.