Advertisement
ಅಕ್ರಮ ಜಾಹೀರಾತುಗಳ ಹಾವಳಿ ತಡೆಯಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು, ಭಾಷಾಂತರಕಾರರ ಅಲಭ್ಯತೆಯಿಂದ ಕನ್ನಡದಲ್ಲಿನ ಬೈಲಾ ಅನ್ನು ಗೆಜೆಟ್ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಕೋರಿದರು.
Related Articles
Advertisement
***
ಪ್ರಿಯ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಬೆಂಗಳೂರು: 2018ರ ವಿಧಾನಸಭಾ ಚುನಾವಣೆ ವೇಳೆ ಗೋವಿಂದರಾಜನಗರ ಕ್ಷೇತ್ರದ 271ಮತಗಟ್ಟೆ ವಿವಿಪ್ಯಾಟ್‌ಗಳ ಮತ ಎಣಿಕೆಗೆ ನಿರ್ದೇಶನ ನೀಡಬೇಕೆಂದು ಕೋರಿ ಪರಾಜಿತ ಅಭ್ಯರ್ಥಿ ಪ್ರಿಯ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಕುರಿತು ಪ್ರಿಯ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಚುನಾವಣಾಧಿಕಾರಿ ತಮ್ಮ ವಿವೇಚನಾಧಿಕಾರ ಬಳಸಿಯೇ ಅರ್ಜಿದಾರರ ಮನವಿ ತಿರಸ್ಕರಿಸಿದ್ದಾರೆ. ಹೀಗಾಗಿ, ಅವರ ಆದೇಶ ರದ್ದುಗೊಳಿಸಲಾಗದು ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅರ್ಜಿದಾರರ ಕೋರಿಕೆಯಂತೆ ವಿಧಾನಸಭಾ ಕ್ಷೇತ್ರದ 271 ಮತಗಟ್ಟೆಗಳಲ್ಲಿನ ವಿವಿಪ್ಯಾಟ್‌ಗಳ ಎಣಿಕೆಗೆ ಆದೇಶ ನೀಡಲಾಗದು ಎಂದೂ ನ್ಯಾಯಪೀಠ ಹೇಳಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಗೋವಿಂದರಾಜನಗರ ಕ್ಷೇತ್ರದ ಮತ ಎಣಿಕೆ ಮೇ 15ರಂದು ನಡೆದಿತ್ತು. ಅದೇ ದಿನ ಮತ ಎಣಿಕೆ ಮುಕ್ತಾಯದ ಬಳಿಕ ಪ್ರಿಯಾಕೃಷ್ಣ ಸುಮಾರು 24 ಮತಗಟ್ಟೆಗಳ ವಿದ್ಯುನ್ಮಾನ ಮತ ಯಂತ್ರ ತಿರುಚಲಾಗಿದೆ. ಮತಗಳ ಜೊತೆಗೆ ವಿವಿ ಪ್ಯಾಟ್‌ನ ವೋಟರ್ ಸ್ಲಿಪ್‌ಗಳನ್ನೂ ಎಣಿಕೆ ಮಾಡಬೇಕು ಎಂದು ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಬಗ್ಗೆ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಪ್ರಿಯಾಕೃಷ್ಣ ಅವರ ಅರ್ಜಿ ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಪ್ರಿಯ ಕೃಷ್ಣ, ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರು ದೂರಿರುವ 24 ಮತಗಟ್ಟೆಗಳಲ್ಲಿ 15,001 ಮತ ಚಲಾವಣೆ ಆಗಿವೆ. ಆ ಪೈಕಿ ಅರ್ಜಿದಾರರು 5,615 ಮತ ಪಡೆದುಕೊಂಡಿದ್ದಾರೆ. ಉಳಿದ 9,386 ಮತ ಉಳಿದ ಅಭ್ಯರ್ಥಿ, ನೋಟಾಗೆ ಬಿದ್ದಿವೆ. ಈ ಮತಗಳ ಪ್ರಮಾಣ ಅರ್ಜಿದಾರರ ಸೋಲಿನ ಅಂತರದ ಮತಗಳಾದ 11,354 ಮತಗಳಿಗೂ ಕಡಿಮೆ ಇದೆ. ಹೀಗಾಗಿ 24 ಮತಗಟ್ಟೆಗಳ ವಿವಿ ಪ್ಯಾಟ್ ಚೀಟಿಗಳ ಎಣಿಕೆಗೆ ಅರ್ಥವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.