Advertisement

ಪರಿಹಾರ ಅರ್ಜಿ: ಕಾರ್ಮಿಕ ನ್ಯಾಯಾಲಯಕ್ಕೆ ಅಧಿಕಾರವಿಲ್ಲ

01:02 AM May 11, 2022 | Team Udayavani |

ಬೆಂಗಳೂರು: ನೌಕರರು ಪರಿಹಾರ ಕೋರುವ ಅರ್ಜಿಗಳನ್ನು ಕಾರ್ಮಿಕ ಕೋರ್ಟ್‌ನಲ್ಲಿ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಕೆ.ಎಸ್‌. ಮುದ್ಗಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೆಲಸದ ವೇಳೆ ಉದ್ಯೋಗಿ ಗಾಯಗೊಂಡರೆ ಆತ ಸೂಕ್ತ ಪರಿಹಾರಕ್ಕೆ ನೌಕರರ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕೇ ಹೊರತು ಕಾರ್ಮಿಕ ಕೋರ್ಟ್‌ನಲ್ಲಿ ಅಲ್ಲ ಎಂದು ಆದೇಶಿಸಿದೆ.

ನೌಕರರ ಪರಿಹಾರ ಕಾಯ್ದೆಯಡಿ ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವ ಯಾವುದೇ ಅಧಿಕಾರ ಕಾರ್ಮಿಕ ನ್ಯಾಯಾಲಯಕ್ಕೆ ಇಲ್ಲ. ಸಿಬಂದಿ ಅಥವಾ ನೌಕರನಿಗೆ ಅಂಗಾಗಗಳ ಗಾಯ ಅಥವಾ ಊನ ಆದರೆ ಅಂತಹ ವೇಳೆ ಕಾರ್ಮಿಕ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬಹುದು.

ಆದ್ದರಿಂದ 1923ರ ಕಾಯ್ದೆಯಂತೆ ಉದ್ಯೋಗಿ ಆಯುಕ್ತರ ಮುಂದೆ ಪರಿಹಾರದ ಮನವಿ ಸಲ್ಲಿಸಬೇಕು, ಅವರು ಅದನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next