ಬೆಂಗಳೂರು: ದ.ಕ. ಜಿಲ್ಲೆ ಬಂಟ್ವಾಳ ಭೂ ನ್ಯಾಯ ಮಂಡಳಿಯ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಮಂಡಳಿಯ ಸದಸ್ಯರು ಮದ್ಯದ ಅಮಲಿನಲ್ಲಿ ತೀರ್ಪು ಬರೆದಿದ್ದಾರೆಯೇ ಎಂದು ಕಟು ಮಾತುಗಳಲ್ಲಿ ಹೇಳಿದೆ.
ಭೂ ನ್ಯಾಯಮಂಡಳಿ 2002ರಲ್ಲಿ ನೀಡಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭ ಭೂ ನ್ಯಾಯಮಂಡಳಿ ಕಾರ್ಯವೈಖರಿಯನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಭೂ ನ್ಯಾಯಮಂಡಳಿಯ ಕಚೇರಿ ಅಕ್ಕಪಕ್ಕ ಸಾರಾಯಿ ಅಂಗಡಿ ಏನಾದರೂ ಇವೆಯೇ ಏನೊ? ಎಂದು ಮೌಖಿಕವಾಗಿ ಕಿಡಿ ಕಾರಿರುವ ನ್ಯಾಯಪೀಠ, ಭೂ ನ್ಯಾಯಮಂಡಳಿಯ ಆಗಿನ ಸದಸ್ಯರು ಏನಾದರೂ ಮದ್ಯ ಸೇವಿಸಿ ತೀರ್ಪು ಬರೆದಿ¨ªಾರೆಯೇ ಎಂದು ಕಟುಮಾತುಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
Related Articles
ಭೂ ನ್ಯಾಯ ಮಂಡಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವಾಗ ಒಂದಷ್ಟು ಕಾನೂನು ತಿಳಿವಳಿಕೆ, ಕೃಷಿ ಸುಧಾರಣ ಜ್ಞಾನ ಇದ್ದವರನ್ನು ನೇಮಕ ಮಾಡಬೇಕು. ಯಾರು ಬೇಕೊ ಅವರನ್ನು ಮಾಡಬೇಡಿ ಎಂದು ರಾಜ್ಯ ಸರಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.
ಪ್ರಕರಣವೇನು?
ಕರೋಪಾಡಿ ಗ್ರಾಮದ ಡಿ. ಮಹಮದ್ ಬ್ಯಾರಿ ಅವರು ಕರ್ನಾಟಕ ಭೂ ಸುಧಾರಣೆ ಕಾಯ್ದೆ-1974ರ ಅನುಸಾರ ಗೇಣಿದಾರರು ತಮ್ಮ ಹಕ್ಕು ಸ್ಥಾಪಿಸಲು ಕಂದಾಯ ಇಲಾಖೆ ನಮೂನೆ ಫಾರಂ-7ರಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಒಂದು ಸರ್ವೇ ನಂಬರ್ಗೆ ಅನುಭೋಗದ ಹಕ್ಕುದಾರಿಕೆ ಕೋರಲಾಗಿತ್ತಾದರೂ, ಭೂ ನ್ಯಾಯಮಂಡಳಿಯು 3 ಸರ್ವೇ ನಂಬರ್ಗಳಲ್ಲೂ ಅವರಿಗೆ ಅನುಭೋಗದಾರಿಕೆ ಇದೆಯೆಂದು ತೀರ್ಪಿನಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಕರೋಪಾಡಿಯ ಪಿ. ರತ್ನಾ ಹಾಗೂ ಇತರರು, ಬಂಟ್ವಾಳ ಭೂ ನ್ಯಾಯ ಮಂಡಳಿ 2002ರ ಅಕ್ಟೋಬರ್ 31ರಂದು ನೀಡಿರುವ ಆಕ್ಷೇಪಾರ್ಹ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.