ಬೆಂಗಳೂರು: ಕಟ್ಟಡ ನಿರ್ಮಾಣ ವೇಳೆ ಅವಘಡ ಸಂಭವಿಸಿ ಕಾರ್ಮಿಕ ಮೃತಪಟ್ಟರೆ, ಅದಕ್ಕೆ ಕಟ್ಟಡ ವಿನ್ಯಾಸ ಮಾಡಿರುವ ವಾಸ್ತುಶಿಲ್ಪಿ (ಆರ್ಕಿಟೆಕ್ಟ್) ಇಂಜಿನಿಯರ್ ಹೊಣೆ ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಸಂಬಂಧ ತಮ್ಮ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ನಗರದ ವಾಸ್ತುಶಿಲ್ಪ ಎಂಜಿನಿಯರ್ ವಿ.ವಿಶ್ವಾಸ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ತನ್ನ ಆದೇಶದಲ್ಲಿ ಈ ರೀತಿ ಹೇಳಿದೆ.
ನಗರದ ನಂದಿನಿ ಲೇಔಟ್‌ನಲ್ಲಿ ನಿವಾಸಿ ಚಂದ್ರಶೇಖರ್ ಎಂಬುವರಿಗೆ ವಿಶ್ವಾಸ್ ಮನೆಯ ಕಟ್ಟಡದ ವಿನ್ಯಾಸ ಮಾಡಿಕೊಟ್ಟಿದ್ದರು. ಅದರಂತೆ ಚಂದ್ರಶೇಖರ್ ಗುತ್ತಿಗೆದಾರರಿಗೆ ನಿರ್ಮಾಣ ಕಾಮಗಾರಿ ವಹಿಸಿದ್ದರು. 2020ರ ಅ.10ರಂದು ಮುಖೇಶ್ ಎಂಬ ಕಾರ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿದ್ದರು.
ಗೃಹ ಪ್ರವೇಶದ ವೇಳೆ ವಿಶ್ವಾಸ್ ಅವರಿಗೆ ಈ ವಿಷಯ ತಿಳಿದಿತ್ತು. ಈ ಸಂಬಂಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ವಿಶ್ವಾಸ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಟ್ಟಡದ ಮಾಲೀಕ ಚಂದ್ರಶೇಖರ್ ಅವರನ್ನು ಬಿಟ್ಟು ವಿಶ್ವಾಸ್ ವಿರುದ್ಧ ವಿಚಾರಣಾಯಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ವಿಶ್ವಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 2020ರ ಅ.10ರಂದು ದುರುದೃಷ್ಟವಶಾತ್ ಆಗಿ ನಡೆದ ಘಟನೆಯಿಂದ ಓರ್ವ ಕಾರ್ಮಿಕನ ಸಾವು ಸಂಭವಿಸಿದೆ.
ಮೃತನು ವಸತಿ ನಿವೇಶನದ ಮಾಲೀಕರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಟ್ಟಿದ್ದ ಗುತ್ತಿಗೆದಾರನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ. ಅರ್ಜಿದಾರ ವಿಶ್ವಾಸ್ ಆಗಾಗ್ಗೆ ನಿವೇಶನಕ್ಕೆ ಭೇಟಿ ನೀಡುತ್ತಿದ್ದರಷ್ಟೆ. ಮನೆಯ ಕಟ್ಟಡದ ವಿನ್ಯಾಸ ಮಾಡಿ ಮನೆ ಮಾಲೀಕರಿಗೆ ನೀಡಿದ್ದಾರೆ. ಅವರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗಾರನಿಗೆ ವಹಿಸಿದ್ದರು.
Related Articles
ಗುತ್ತಿಗೆದಾರನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದಾನೆ. ಗುತ್ತಿಗೆದಾನ ಅಧೀನದಲ್ಲಿ ಕೆಲಸಮಾಡುವ ಕಾರ್ಮಿಕ ಮೃತಪಟ್ಟರೆ, ಅದಕ್ಕೆ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸಕ ಮಾಡಿಕೊಟ್ಟ ವಾಸ್ತುಶಿಲ್ಪ ಎಂಜಿನಿಯರ್ ಯಾವುದೇ ರೀತಿಯಲ್ಲೂ ಹೊಣೆಯಾಗುವುದಿಲ್ಲ. ಘಟನೆಯಲ್ಲಿ ಅರ್ಜಿದಾರರ ನಿರ್ಲಕ್ಷ್ಯ ಕಂಡುಬರುವುದಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ನಂದಿನಿಲೇಔಟ್ ಠಾಣಾ ಪೊಲೀಸರು ದಾಖಲಿಸಿದ್ದ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.