Advertisement

ಹೈಕೋರ್ಟ್‌ ಜಡ್ಜ್ ನೇಮಕ: ಅಭ್ಯರ್ಥಿಗಳ ದಾಖಲೆ ಪರಿಶೀಲನೆ

07:05 AM Sep 11, 2017 | Team Udayavani |

ಹೊಸದಿಲ್ಲಿ: ಹೈಕೋರ್ಟ್‌ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿ ನ್ಯಾಯವಾದಿಗಳು ಹಾಗೂ ಕಾನೂನು ಅಧಿಕಾರಿಗಳ ವೃತ್ತಿಜೀವನದ ಕುರಿತಾದ ಎಲ್ಲ ಮಾಹಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸರಕಾರ ಆರಂಭಿಸಿದೆ. ನ್ಯಾಯಾಂಗ ವ್ಯವಸ್ಥೆಯ ಉನ್ನತ ಹುದ್ದೆಗೇರುವವರ ಪೂರ್ವಾಪರ ಕಳಂಕರಹಿತ ಆಗಿರಬೇಕೆನ್ನುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗುತ್ತಿದೆ.

Advertisement

ಕಾನೂನು ಮತ್ತು ನ್ಯಾಯಾಂಗ ಇಲಾಖೆ ದಾಖಲೆಗಳಲ್ಲಿನ ಮಾಹಿತಿ ಪ್ರಕಾರ, ಉನ್ನತ ನ್ಯಾಯಾಂಗದ‌ ಹುದ್ದೆªಗೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿನ ಮಾಹಿತಿಗಳ ಬಗ್ಗೆ ಹಾಗೂ ಅವರ ವೃತ್ತಿಪರತೆಯ ಬಗೆಗಿನ ದಾಖಲೆಗಳೆಲ್ಲವನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. 

ನ್ಯಾಯವಾದಿಯಾದಾಗಿನ ಹಾಗೂ ತೀರ್ಪುಗಳನ್ನು ನೀಡಿರುವ ಸಂದರ್ಭದ ವಿವರ, ಕಾನೂನು ಅಧಿಕಾರಿಯಾಗಿ ಪ್ರಕರಣ ವಿಲೇವಾರಿ ಹಾಗೂ ಮುಂದೂಡಿದ ಪ್ರಕರಣಗಳ ಕುರಿತಾದ ಮಾಹಿತಿಗಳ ದಾಖಲೆಗಳೆಲ್ಲವನ್ನೂ ಮೌಲ್ಯಮಾಪನ ನಡೆಸುವುದು ಸರಕಾರದ ಉದ್ದೇಶ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next