Advertisement

ಮುಂದಿನ ವರ್ಷದಿಂದ ಸುರಕ್ಷೆ : ಖಾಸಗಿ ಶಾಲೆಗಳು ನಿರಾಳ

01:23 AM Dec 03, 2024 | Team Udayavani |

ಬೆಂಗಳೂರು: ಮಾನ್ಯತೆ ಪಡೆದುಕೊಳ್ಳಲು ಹಾಗೂ ಮಾನ್ಯತೆ ನವೀಕರಣ ಮಾಡಿಕೊಳ್ಳಲು ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷೆ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಸೇರಿದಂತೆ ಕೆಲವು ಷರತ್ತುಗಳ ಪಾಲನೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೆ ಕಾಲಾವಕಾಶವನ್ನು ಹೈಕೋರ್ಟ್‌ ನೀಡಿದೆ.

Advertisement

ಅಲ್ಲದೆ ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿ ಸಿರು ವುದು ಸರಕಾರಿ ಶಾಲೆಗಳಿಗೂ ಅನ್ವಯವಾಗುತ್ತದೆ. ಕಟ್ಟಡದ ಸುರಕ್ಷೆ ಮತ್ತು ಅಗ್ನಿ ಸುರಕ್ಷಾ ಕ್ರಮಗಳನ್ನು ಖಾಸಗಿ ಶಾಲೆಗಳಲ್ಲಿ ಬಯಸುವ ಸರಕಾರ, ಅದನ್ನು ತನ್ನ ಅಧೀನದಲ್ಲಿರುವ ಸರಕಾರಿ ಶಾಲೆಗಳಲ್ಲೂ ಬಯಸ ಬೇಕು. ಈ ವಿಚಾರದಲ್ಲಿ ಸರಕಾರಿ ಶಾಲೆ ಗಳಿಗೆ ವಿನಾಯಿತಿ ಸಲ್ಲದು. ಶಾಲೆಗಳಲ್ಲಿ ಕಟ್ಟಡ ಸುರಕ್ಷೆ, ಅಗ್ನಿ ಸುರಕ್ಷತೆ ಸೇರಿದಂತೆ ಉಳಿದ ಷರತ್ತುಗಳ ಪಾಲನೆ, ಕ್ರಮಗಳ ಅಳವಡಿಕೆಯಲ್ಲಿ ಸರಕಾರ ಮಾದರಿ ನಾಗರಿಕ’ನಾಗಿ ನಡೆದುಕೊಳ್ಳಬೇಕು ಎಂದೂ ಹೈಕೋರ್ಟ್‌ ಹೇಳಿದೆ.

ಶಾಲೆಗಳಿಗೆ ಮಾನ್ಯತೆ ಪಡೆದುಕೊಳ್ಳಲು ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷೆ ಹಾಗೂ ಅಗ್ನಿ ಸುರಕ್ಷೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು 2022ರ ಜೂನ್‌ 6ರಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ಯನ್ನು ಪ್ರಶ್ನಿಸಿ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾ| ಸೂರಜ್‌ ಗೋವಿಂದರಾಜ್‌ ಅವರಿದ್ದ ನ್ಯಾಯಪೀಠ ಸೋಮವಾರ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next