Advertisement

ಎಚ್‌ಡಿಕೆ ಬಂಧನಕ್ಕೆ  ಬಲವಾದ ಸಾಕ್ಷ್ಯ ಕೇಳಿದ ಹೈಕೋರ್ಟ್‌

03:45 AM Jun 29, 2017 | Team Udayavani |

ಬೆಂಗಳೂರು: ಜಂತಕಲ್‌ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರ ಸ್ವಾಮಿಯನ್ನು ಬಂಧಿಸಿಯೇ ವಿಚಾರಣೆಗೊಳ ಪಡಿಸಲು ಪುಷ್ಠಿàಕರಿಸುವಂತಹ ಬಲವಾದ ಅಂಶಗಳ ಪಟ್ಟಿ ನೀಡುವಂತೆ ವಿಶೇಷ ತನಿಖಾ
ತಂಡ(ಎಸ್‌ಐಟಿ)ಕ್ಕೆ ತಾಕೀತು ಮಾಡಿರುವ ಹೈಕೋರ್ಟ್‌, ಕುಮಾರ ಸ್ವಾಮಿ ಮಧ್ಯಂತರ ನಿರೀಕ್ಷಣಾ ಜಾಮೀನು ಅವಧಿಯನ್ನು ಜುಲೈ ಕೊನೆಯ ವಾರದವರೆಗೆ ವಿಸ್ತರಿಸಿದೆ.

Advertisement

ನಿರೀಕ್ಷಣಾ ಜಾಮೀನು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸದಸ್ಯ ಪೀಠಕ್ಕೆ, ಜಂತಕಲ್‌ ಪ್ರಕರಣದ ಕೇಸ್‌ ಡೈರಿಯನ್ನು ಎಸ್‌ಐಟಿ ಪರ ವಿಶೇಷ ಅಭಿಯೋಜಕ ಪಿ. ಗೋವಿಂದನ್‌ ಸಲ್ಲಿಸಿ ವಾದ ಮಂಡಿಸಿದರು.

ಈ ಪ್ರಕರಣ ವೈಟ್‌ ಕಾಲರ್‌ ಅಕ್ರಮದಂತೆ ನಡೆದಿದೆ. ಜೊತೆಗೆ ಆರ್ಥಿಕ ಅಪರಾಧವಾಗಿಯೂ ಪರಿಗಣನೆಗೆ ಬರಲಿದೆ. ಹೀಗಾಗಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದರು.ಇದಕ್ಕೆ ಆಕ್ಷೇಪ
ವ್ಯಕ್ತಪಡಿಸಿದ ಕುಮಾರಸ್ವಾಮಿ ಪರ ವಕೀಲ ಹಸ್ಮತ್‌ ಪಾಷಾ, ಒಂದು ವೇಳೆ ಈ ಪ್ರಕರಣದಲ್ಲಿ ಅರ್ಜಿದಾರರ ಬಂಧನವಾದರೇ ಅವರ ಪಕ್ಷಕ್ಕೆ ಹಾಗೂ ವ್ಯಕ್ತಿಗತವಾಗಿ ಬಹುದೊಡ್ಡ ನಷ್ಟವಾಗಲಿದೆ. ಅದನ್ನು ತುಂಬಿಕೊಡಲು ಯಾರಿದಂದಲೂ ಸಾಧ್ಯವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದರು.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಜಂತಕಲ… ಕಂಪೆನಿಗೆ ಪರವಾನಗಿ ಕೊಡಿಸಿದ ಆರೋಪ ಸಂಬಂಧವೇ ಈ ಹಿಂದೆ ದಾಖಲಿಸಿದ್ದ ಪ್ರಕರಣಗಳ ತನಿಖೆಯನ್ನು ಆಳವಾಗಿ ನಡೆಸದೇ, ಹೊಸ ಎಫ್ಐಆರ್‌ ಏಕೆ ಪಟ್ಟಿ ಮಾಡಿಕೊಡಿ ಎಂದು ಎಸ್‌ಐಟಿ ಪರ ವಕೀಲರಿಗೆ ಸೂಚಿಸಿತು. ಇದಕ್ಕೆ ಉತ್ತರಿಸಿದ ಎಸ್‌ಐಟಿ ಪರ ವಕೀಲರು, ಜುಲೈ ಕೊನೆಯ ವಾರದಲ್ಲಿ ಸ್ಪಷ್ಟನೆ ಪಡೆದು ತಿಳಿಸಲಾಗುವುದು ಎಂದು  ಕಾಲಾವಕಾಶ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next