Advertisement

ಧಾರವಾಡ ಹೈಕೋರ್ಟ್ ಪೀಠ ಲೋಕ‌ ಅದಾಲತ್: 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ

05:01 PM Aug 13, 2022 | Team Udayavani |

ಧಾರವಾಡ : ಇಲ್ಲಿ‌ನ ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 183 ಪ್ರಕರಣಗಳನ್ನು 5,77,12,376 ರೂ.ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು .

Advertisement

ಹಿರಿಯ ನ್ಯಾಯಮೂರ್ತಿಗಳಾದ ಎಸ್ .ಜಿ.ಪಂಡಿತ್ ಅವರ ಮಾರ್ಗದರ್ಶನದಲ್ಲಿ , ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ , ರವಿ ವಿ . ಹೊಸಮನಿ ಮತ್ತು ಅನಂತ ರಾಮನಾಥ ಹೆಗಡೆ ಹಾಗೂ ಲೋಕ ಅದಾಲತ್‌ನ ಸದಸ್ಯರುಗಳಾದ ಎಲ್ . ಟಿ . ಮಂಟಗಣಿ, ಎಸ್. ಎಸ್. ಬಾವಾಖಾನ, ಎಮ್. ಟಿ. ಬಂಗಿ ಮತ್ತು ಎಮ್. ಸಿ . ಹುಕ್ಕೇರಿ ಅವರನ್ನೊಳಗೊಂಡ 4 ಪೀಠಗಳಲ್ಲಿ ವ್ಯಾಜ್ಯಗಳ ರಾಜಿ ಸಂಧಾನ ನಡೆದವು.

ಇದನ್ನೂ ಓದಿ:ಹರ್ ಘರ್ ತಿರಂಗಾ: ಗುಡಿಸಲು,ಜಮೀನಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ

ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಹಾಗೂ ವಕೀಲರಾದ ಎಮ್. ಸಿ. ಹುಕ್ಕೇರಿ ಅವರ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ – ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿದ್ದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next