Advertisement

CBI ಕ್ರಮಕ್ಕೆ ಹೈಕೋರ್ಟ್‌ ಗರಂ

10:12 PM Jul 13, 2023 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಅಕ್ರಮ ಆಸ್ತಿಗಳ ಮಾಹಿತಿಗಳನ್ನು ತೆರೆದ ಕೋರ್ಟ್‌ನಲ್ಲಿ ಬಹಿರಂಗಪಡಿಸಲು ಮುಂದಾದ ಸಿಬಿಐ ಕ್ರಮಕ್ಕೆ ಹೈಕೋರ್ಟ್‌ ಗರಂ ಆದ ಪ್ರಸಂಗ ನಡೆಯಿತು.

Advertisement

ಆದಾಯಕ್ಕೂ ಹೆಚ್ಚು ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದ ಎಫ್ಐಆರ್‌ ರದ್ದುಪಡಿಸುವಂತೆ ಡಿಕೆಶಿ ಸಲ್ಲಿಸಿದ್ದ ಅರ್ಜಿ ನ್ಯಾ.ಕೆ.ನಟರಾಜನ್‌ ಅವರ ಏಕಸದಸ್ಯಪೀಠ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಬಿಐ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು.

ವಿಚಾರಣೆ ವೇಳೆ ಹಾಜರಾಗಿದ್ದ ಸಿಬಿಐ ವಕೀಲ ಪ್ರಸನ್ನ ಕುಮಾರ್‌ ಅವರು ಡಿಕೆಶಿ ಎಷ್ಟೆಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂಬುದರ ಬಗ್ಗೆ ಕೋರ್ಟ್‌ನಲ್ಲಿ ಮಾಹಿತಿ ನೀಡಲು ಮುಂದಾದರು. ಅದರೆ, ನ್ಯಾ. ನಟರಾಜನ್‌ ಅವರು ಈ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಮಾಹಿತಿ ನೀಡಿರುವಾಗ ಇದು ರಹಸ್ಯ ಅಲ್ಲವೇ ಎಂದು ಪ್ರಶ್ನಿಸಿದರು.
ಆ ಬಳಿಕ ದಾಖಲೆ ಪರಿಶಿಲನೆ ಹೊರತಾಗಿ 596 ದಾಖಲೆ ಸಂಗ್ರಹ ಮಾಡಿದ್ದೇವೆ. 84 ಜನ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ವಿವರಿಸಿದರು. 2013 ರಿಂದ 2018ರ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತ ಡಿಕೆಶಿ ಹೆಚ್ಚಿನ ಆದಾಯ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಸಿಬಿಐ 2020 ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next