Advertisement

 ತಾ.ಪಂ., ಜಿ.ಪಂ.ಕ್ಷೇತ್ರ ನಿರ್ಣಯ ವಿವಾದ ಹೈಕೋರ್ಟ್‌ಗೆ

09:59 PM Sep 19, 2021 | Team Udayavani |

ಬೆಂಗಳೂರು: ತಾ.ಪಂ., ಜಿ.ಪಂ. ಚುನಾವಣ ಕ್ಷೇತ್ರಗಳನ್ನು ನಿರ್ಣಯಿಸುವ ಬಗ್ಗೆ ರಾಜ್ಯ ಚುನಾವಣ ಆಯೋಗಕ್ಕೆ ನೀಡ ಲಾಗಿದ್ದ ಅಧಿಕಾರ ವಾಪಸ್‌ ಪಡೆ ದಿರುವುದು ಹೈಕೋರ್ಟ್‌ ಮೆಟ್ಟಿ ಲೇರಿದೆ.  ಸರಕಾರದ ಕ್ರಮವನ್ನು ಪ್ರಶ್ನಿಸಿ ಧಾರವಾಡದ ಹೈಕೋರ್ಟ್‌ ಪೀಠಕ್ಕೆ 8 ಜಿಲ್ಲೆಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು,  ಸೋಮವಾರದಿಂದ ವಿಚಾರಣೆ  ಆರಂಭವಾಗಲಿದೆ. ಚುನಾವಣ ಕ್ಷೇತ್ರ ನಿರ್ಣಯಕ್ಕೆ ಆಯೋಗ ರಚಿಸಿದ್ದನ್ನೂ ಪ್ರಶ್ನಿಸಲಾಗಿದೆ.

Advertisement

ಕ್ಷೇತ್ರಗಳ ವಿಂಗಡನೆ ಮತ್ತು ಮೀಸಲಾತಿ ತನ್ನ ಅಧಿಕಾರ ಎಂದು ಸರಕಾರ ಹೇಳುತ್ತಿದ್ದರೆ, ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವ ಸಾಂವಿಧಾನಿಕ ಹೊಣೆಗಾರಿಕೆ ತನಗಿದೆ ಎಂಬುದು ಚು.ಆಯೋಗದ ವಾದ.

ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ.ಗಳ ಒಟ್ಟು ಸದಸ್ಯರ ಸಂಖ್ಯೆ ಹಾಗೂ ಕ್ಷೇತ್ರಗಳ ವಿಂಗಡನೆ ಮಾಡಲು ಪ್ರತ್ಯೇಕವಾಗಿ  “ಕರ್ನಾಟಕ ರಾಜ್ಯ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ’ ರಚಿಸಲು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ಮಸೂದೆ – 2021ಕ್ಕೆ  ರಾಜ್ಯಪಾಲರ ಅನುಮೋದನೆ ಸಿಕ್ಕಿದೆ.

ಆದರೆ, ಈಗಾಗಲೇ ರಾಜ್ಯದ ಎಲ್ಲ ಜಿ.ಪಂ. ಮತ್ತು ತಾ.ಪಂ. ಅವಧಿ ಮುಗಿದಿದೆ. ಈ ವೇಳೆಗಾಗಲೇ ಚುನಾ ವಣೆ ನಡೆಯಬೇಕಿತ್ತು.   ಕೋವಿಡ್‌ ಕಾರಣದಿಂದಾಗಿ ಚುನಾವಣ ಸಿದ್ಧತೆಗೆ ಹಿನ್ನಡೆಯಾಗಿತ್ತು. ಆದಾಗ್ಯೂ,  ಆಯೋಗ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದೆ.  ಮಾರ್ಚ್‌ನಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಜುಲೈಯಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. 2,000ಕ್ಕೂ ಹೆಚ್ಚು ಆಕ್ಷೇಪಣೆ ಬಂದಿದ್ದವು. ಅವುಗಳನ್ನು ಪರಿಶೀಲಿಸಿ  ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಬೇಕಿತ್ತು. ಕಾಯ್ದೆ ಪ್ರಕಾರ ಅಂತಿಮ ಅಧಿಸೂ ಚನೆ ಹೊರಡಿಸಿದ 45 ದಿನ ಕಳೆದು ವೇಳಾಪಟ್ಟಿ ಪ್ರಕಟಿಸಬೇಕು. ಈ ಹಂತ ದಲ್ಲಿ   ಆಯೋಗ ರಚಿನೆಯಾಗಿದೆ.

ಕ್ಷೇತ್ರಗಳ ವಿಂಗಡನೆ ಆಯೋಗ ರಚಿಸಿರುವುದು ಸರಕಾರದ ತೀರ್ಮಾನ. ಕ್ಷೇತ್ರ ವಿಂಗಡನೆ ಮತ್ತು ಮೀಸಲಾತಿ ನಿಗದಿಯನ್ನು ಯಾರೇ ಮಾಡಲಿ, ಆದರೆ ಚುನಾವಣೆಗಳು ನಿಗದಿತ ಅವಧಿ ಯೊಳಗೆ ನಡೆಯಬೇಕು ಎಂಬುದು ಆಯೋಗದ ಉದ್ದೇಶ.   ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅನಾವಶ್ಯಕ ವಾಗಿ ಚುನಾವಣೆಗಳು ವಿಳಂಬವಾಗಬಾರದು ಎಂದು ಆಯೋಗ ಬಯಸುತ್ತದೆ.– ಡಾ| ಬಿ. ಬಸವರಾಜು,  ರಾಜ್ಯ ಚುನಾವಣ ಆಯುಕ್ತ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next