Advertisement

HIGH blood sugar:ಅತೀಯಾದ ಮಧುಮೇಹ ಇದ್ದರೂ ಈ 6 ಆಹಾರ ಸೇವನೆಯಿಂದ ಆರೋಗ್ಯಕ್ಕೆ ಅನುಕೂಲ

04:09 PM Jan 14, 2023 | Team Udayavani |

ರಕ್ತದಲ್ಲಿರುವ ಗ್ಲುಕೋಸ್ ಅಥವಾ ಸಕ್ಕರೆ ಅಂಶವು ಹೆಚ್ಚಾದಾಗ ಡಯಾಬಿಟೀಸ್ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ. ಇದರೊಂದಿಗೆ ಇತರ ಆರೋಗ್ಯ ಸಂಬಂಧಿ ಕಾಯಿಲೆಗಳಿಗೂ ಆಹ್ವಾನ ನೀಡಿದಂತಾಗುತ್ತದೆ. ಮಧುಮೇಹ ಅಥವಾ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದರೆ ಹಲವಾರು ಅನಾರೋಗ್ಯಕ್ಕೆ ಮೂಲವಾಗುತ್ತದೆ. ಈ ನಿಟ್ಟಿನಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಡಯಾಬಿಟೀಸ್ ಅಥವಾ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಿ ಆರೋಗ್ಯ ಸಂಪೂರ್ಣ ಹದಗೆಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ತುಂಬಾ ಮುಖ್ಯವಾದದ್ದು.

Advertisement

ಇದನ್ನೂ ಓದಿ:

ಪೌಷ್ಠಿಕ್ ತಜ್ಞ ಲೋವ್ ನೀತ್ ಬಾತ್ರಾ ನೀಡಿರುವ ಮಾಹಿತಿ ಪ್ರಕಾರ, ಸಕ್ಕರೆ, ಸಂಸ್ಕರಿಸಿದ ಆಹಾರ, ಕಾರ್ಬೋಹೈಡ್ರೇಟ್ ಗಳ ಅತೀಯಾದ ಸೇವನೆ ರಕ್ತದಲ್ಲಿನ ಸಕ್ಕರೆ ಕಾಯಿಲೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ನಿರಂತರ ತಪಾಸಣೆಯಲ್ಲಿದ್ದರೆ ವೈದ್ಯರು ಅವರು ಸೇವಿಸುವ ಆಹಾರದ ಬಗ್ಗೆ ಮಾಹಿತಿ ನೀಡುವ ಮೂಲಕ ಡಯಾಬಿಟೀಸ್ ಅನ್ನು ತಡೆಯಬಹುದಾಗಿದೆ.

ಅತೀಯಾದ ಮಧುಮೇಹ ಇದ್ದರೂ ಈ 6 ಆಹಾರ ಸೇವನೆಯಿಂದ ಅನುಕೂಲ:

  • ಬಾರ್ಲಿ: ಅಪಾರ ಪ್ರಮಾಣದಲ್ಲಿ ಬೀಟಾ-ಗ್ಲುಕೋನ್ ಹೊಂದಿರುವ ಬಾರ್ಲಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಅದೇ ರೀತಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಉತ್ತಮ ಆಹಾರವಾಗಿದೆ.
  • ಓಟ್ಸ್ ಬ್ರಾನ್: ಓಟ್ಸ್ ಫೈಬರ್ ಬೀಟಾ ಗ್ಲುಕನ್ಸ್ ಅನ್ನು ಹೊಂದಿದ್ದು, ಇದು ಇನ್ಸುಲಿನ್ ಪರಿಣಾಮಗಳನ್ನು ಸಕ್ರಿಯಗೊಳಿಸಲು ಕಾರ್ಯನಿರ್ವಹಿಸುತ್ತದೆ. ಪ್ರೊಟೀನ್ ಅಂಶ ಹೆಚ್ಚಾಗಿರುವುದರಿಂದ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸಲು ಪ್ರಮುಖ ಪಾತ್ರ ವಹಿಸುತ್ತದೆ.
  • ಕೆಂಪು ಹರಿವೆ ಸೊಪ್ಪಿನ ಬೀಜ: ಕೆಂಪು ಹರಿವೆ ಸೊಪ್ಪು ಮತ್ತು ಬೀಜದಲ್ಲಿ ಇತರ ಎಲ್ಲಾ ಧಾನ್ಯಗಳಿಗಿಂತ ಹೆಚ್ಚಿನ ಪ್ರೊಟೀನ್ ಅಂಶ ಅಂಶವನ್ನೊಳಗೊಂಡಿದೆ. ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ ಎಂಬುದು ಬಾತ್ರಾ ನುಡಿಯಾಗಿದೆ.
  • ರಾಗಿ: ಸಾಸಿವೆಯನ್ನು ಹೋಲುವ ರಾಗಿ ಅತ್ಯಂತ ಪೌಷ್ಠಿಂಕಾಂಶ ಹೊಂದಿದ್ದು, ಇದು ಕೇವಲ ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಹೊಂದಿರವವರಿಗೆ ಮಾತ್ರವಲ್ಲ, ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತದೆ.
  • ಬಾಜ್ರಾ(ನವಣೆ): ಇದು ಅತ್ಯಧಿಕ ಫೈಬರ್ ಅಂಶಗಳನ್ನೊಂಡಿರುವ ಧಾನ್ಯವಾಗಿದ್ದು, ಇದು ಮಧುಮೇಹ ಇರುವವರಿಗೆ ಉಪಯುಕ್ತವಾಗಿದೆ. ಇದು ಮಲಬದ್ಧತೆ ನಿವಾರಣೆಗೂ ಸಹಾಯಕವಾಗುತ್ತದೆ. ತೂಕ ನಷ್ಟಕ್ಕೆ ನೆರವಾಗಲಿದೆ ಎಂದು ಬಾತ್ರಾ ಮಾಹಿತಿ ನೀಡಿದ್ದಾರೆ.
  • ಜೋಳ: ಜೋಳದಲ್ಲಿ ವಿಟಮಿನ್ ಕೆ1 ಸಮೃದ್ಧವಾಗಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಬಾತ್ರಾ ವಿವರಿಸಿದ್ದಾರೆ.

ಸೂಚನೆ: ಈ ಎಲ್ಲಾ ಮಾಹಿತಿಯೂ ತಜ್ಞರ ಹೇಳಿಕೆಯನ್ನು ಆಧರಿಸಿ ಲೇಖನದ್ದಾಗಿದ್ದು, ವೈದ್ಯರ ಸಲಹೆಗೆ ಇದು ಪರ್ಯಾಯವಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next