Advertisement

ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್‌; ತಪಾಸಣೆ

01:00 AM Jul 30, 2022 | Team Udayavani |

ಉಡುಪಿ: ದ. ಕ. ಜಿಲ್ಲೆಯಲ್ಲಿ ನಿರಂತರ ಕೊಲೆ ಪ್ರಕರಣ ಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪ್ರಸ್ತುತ ಘಟನೆ ಹಾಗೂ ವಾರಾಂತ್ಯ ಕಾರಣದಿಂದಾಗಿ ಶುಕ್ರವಾರ ಸಂಜೆ 4ರಿಂದ 8ರ ವರೆಗೆ ವಿಶೇಷ ಡ್ರೈವ್‌ ಮಾಡಲಾಯಿತು.

Advertisement

ಜಿಲ್ಲೆಯಲ್ಲಿ 11 ಕಡೆ ಚೆಕ್‌ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದ್ದು, 60 ಕಡೆಗಳಲ್ಲಿ ಪಿಕೆಟಿಂಗ್‌ ಪಾಯಿಂಟ್‌ಗಳನ್ನು ತೆರೆಯ ಲಾಗಿದ್ದು, ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ.
ಹೆಜಮಾಡಿ, ಸಾಸ್ತಾನ, ಶಿರೂರು ಟೋಲ್‌ಗೇಟ್‌ಗಳಲ್ಲಿ ತಪಾಸಣೆ ಮಾಡ ಲಾಗುತ್ತಿದೆ. ಉಳಿದಂತೆ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿಯೂ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪೊಲೀಸ್‌ ಮೀಸಲು ಪಡೆ ಸಹಿತ ರಾತ್ರಿ ಅವಧಿಯಲ್ಲಿ ಎಲ್ಲ ಠಾಣೆಗಳಲ್ಲಿಯೂ ಹೆಚ್ಚುವರಿ ಸಿಬಂದಿ ಇರುವಂತೆ ಸೂಚನೆ ನೀಡಲಾಗಿದೆ. ನೈಟ್‌ ರೌಂಡ್ಸ್‌ಗಳನ್ನು ಹೆಚ್ಚುವರಿಯಾಗಿ ಮಾಡುವಂತೆಯೂ ಆದೇಶಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

ಇಂಟೆಲಿಜೆನ್ಸ್‌ ಚುರುಕು
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಇಂಟೆಲಿಜೆನ್ಸ್‌ ಸಿಬಂದಿ ವಿಶೇಷ ನಿಗಾ ವಹಿಸಿದ್ದರು. ಮುತಾಲಿಕ್‌ ಅವರ ಪ್ರತಿಕ್ಷಣದ ಚಲನವಲನಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಅವರು ಶ್ರೀಕೃಷ್ಣ ದರ್ಶನ ಪಡೆದು ಪರ್ಯಾಯ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು.

ಅಧಿಕಾರಿಗಳಿಂದ ತಪಾಸಣೆ
ಶುಕ್ರವಾರ ಸಂಜೆಯಿಂದ ಎಸ್‌ಪಿ ಎನ್‌. ವಿಷ್ಣುವರ್ಧನ್‌, ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ, ಎಲ್ಲ ವಲಯದ ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು, ಎಸ್‌ಐಗಳು – ಸಿಬಂದಿ ನೇತೃತ್ವದಲ್ಲಿ ವಾಹನಗಳ ತಪಾಸಣೆ ಮಾಡಲಾಯಿತು. ಉದ್ಯಾವರ, ಹೂಡೆ, ಕಂಡ್ಲೂರು ಭಾಗಗಳಿಗೆ ಎಸ್‌ಪಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಸಕಲ ಮುನ್ನೆಚ್ಚರಿಕೆ
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 60 ಕಡೆ ವಿಶೇಷ ಡ್ರೈವ್‌ ಮೂಲಕ ತಪಾಸಣೆ ಮಾಡಲಾಗಿದೆ. ಅಗತ್ಯ ಕಂಡು ಬಂದರೆ ಮುಂದು ವರಿಸಲಾಗುವುದು. ಇದುವರೆಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
-ಎನ್‌. ವಿಷ್ಣುವರ್ಧನ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next