Advertisement
ಜಿಲ್ಲೆಯಲ್ಲಿ 11 ಕಡೆ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, 60 ಕಡೆಗಳಲ್ಲಿ ಪಿಕೆಟಿಂಗ್ ಪಾಯಿಂಟ್‌ಗಳನ್ನು ತೆರೆಯ ಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ.ಹೆಜಮಾಡಿ, ಸಾಸ್ತಾನ, ಶಿರೂರು ಟೋಲ್‌ಗೇಟ್‌ಗಳಲ್ಲಿ ತಪಾಸಣೆ ಮಾಡ ಲಾಗುತ್ತಿದೆ. ಉಳಿದಂತೆ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿಯೂ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಇಂಟೆಲಿಜೆನ್ಸ್ ಸಿಬಂದಿ ವಿಶೇಷ ನಿಗಾ ವಹಿಸಿದ್ದರು. ಮುತಾಲಿಕ್ ಅವರ ಪ್ರತಿಕ್ಷಣದ ಚಲನವಲನಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಅವರು ಶ್ರೀಕೃಷ್ಣ ದರ್ಶನ ಪಡೆದು ಪರ್ಯಾಯ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು.
Related Articles
ಶುಕ್ರವಾರ ಸಂಜೆಯಿಂದ ಎಸ್‌ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ, ಎಲ್ಲ ವಲಯದ ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು, ಎಸ್‌ಐಗಳು – ಸಿಬಂದಿ ನೇತೃತ್ವದಲ್ಲಿ ವಾಹನಗಳ ತಪಾಸಣೆ ಮಾಡಲಾಯಿತು. ಉದ್ಯಾವರ, ಹೂಡೆ, ಕಂಡ್ಲೂರು ಭಾಗಗಳಿಗೆ ಎಸ್‌ಪಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ಸಕಲ ಮುನ್ನೆಚ್ಚರಿಕೆಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 60 ಕಡೆ ವಿಶೇಷ ಡ್ರೈವ್ ಮೂಲಕ ತಪಾಸಣೆ ಮಾಡಲಾಗಿದೆ. ಅಗತ್ಯ ಕಂಡು ಬಂದರೆ ಮುಂದು ವರಿಸಲಾಗುವುದು. ಇದುವರೆಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
-ಎನ್. ವಿಷ್ಣುವರ್ಧನ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ