Advertisement

Sandalwood: ಥ್ರಿಲ್‌ ನೀಡಲಿದೆ ಹೈಡ್‌ ಆ್ಯಂಡ್‌ ಸೀಕ್‌

10:55 AM Mar 13, 2024 | Team Udayavani |

“ನನಗೆ ಮಿಸ್ಟರಿ ಸಬ್ಜೆಕ್ಟ್ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಮೊದಲ ಬಾರಿಗೆ “ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾದ ಸಬ್ಜೆಕ್ಟ್ ಮತ್ತು ನನ್ನ ಕ್ಯಾರೆಕ್ಟರ್‌ ಕೇಳಿದಾಗ ತುಂಬ ಇಷ್ಟವಾಯಿತು. ಹಾಗಾಗಿ ತುಂಬ ಖುಷಿಯಿಂದ ಒಪ್ಪಿಕೊಂಡು ಈ ಸಿನಿಮಾ ಮಾಡಿದೆ. ಆರಂಭದಲ್ಲಿ ಡೈರೆಕ್ಟರ್‌ ನನಗೆ ಯಾವ ರೀತಿ ಇಂಪ್ರಸ್‌ ಆಗುವಂತೆ ಕಥೆ ಹೇಳಿದ್ದರೋ, ಅದೇ ರೀತಿ ಇಂಪ್ರಸ್‌ ಆಗುವಂತೆ ಸಿನಿಮಾ ಕೂಡ ಸ್ಕ್ರೀನ್‌ ಮೇಲೆ ಬಂದಿದೆ ಎಂಬ ವಿಶ್ವಾಸವಿದೆ’ ಇದು ನಟಿ ಧನ್ಯಾ ರಾಮಕುಮಾರ್‌ ಮಾತು.

Advertisement

ಅಂದಹಾಗೆ, ಧನ್ಯಾ ರಾಮಕುಮಾರ್‌ ಇಂಥದ್ದೊಂದು ವಿಶ್ವಾಸದ ಮಾತುಗಳನ್ನಾಡಿರುವುದು ಈ ವಾರ ತೆರೆಗೆ ಬರುತ್ತಿರುವ “ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾದ ಬಗ್ಗೆ.

ಹೌದು, ವರನಟ ಡಾ. ರಾಜುಕುಮಾರ್‌ ಕುಟುಂಬದ ಕುಡಿ ಧನ್ಯಾ ರಾಮಕುಮಾರ್‌ ನಾಯಕಿಯಾಗಿ ಅಭಿನಯಿಸಿರುವ, ಅನೂಪ್‌ ರೇವಣ್ಣ ನಾಯಕನಾಗಿರುವ ಸಸ್ಪೆನ್ಸ್‌-ಥ್ರಿಲ್ಲರ್‌ “ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.

ಈಗಾಗಲೇ ತನ್ನ ಟೈಟಲ್‌, ಕಂಟೆಂಟ್‌, ಟ್ರೇಲರ್‌ ಮತ್ತು ಹಾಡುಗಳ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿರುವ “ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾದ ಬಗ್ಗೆ ಧನ್ಯಾ ರಾಮಕುಮಾರ್‌ ಒಂದಷ್ಟು ನಿರೀಕ್ಷೆಯ ಮಾತನಾಡಿದ್ದಾರೆ.

“ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್‌ ತುಂಬ ಚೆನ್ನಾಗಿದೆ. ಇದರಲ್ಲಿ ಹಾಸಿನಿ ಎಂಬ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಶ್ರೀಮಂತ ಕುಟುಂಬದ ಹುಡುಗಿ, ಅಪ್ಪ-ಅಮ್ಮನ ಮುದ್ದಿನ ಮಗಳು ಒಂದು ದಿನ ಇದ್ದಕ್ಕಿದ್ದಂತೆ ಕಿಡ್ನ್ಯಾಪ್‌ ಆಗುತ್ತಾಳೆ. ಆಗ ಅವಳ ಮನಸ್ಥಿತಿ ಹೇಗಿರುತ್ತದೆ. ಅವಳು ಹೇಗೆಲ್ಲ ರಿಯಾಕ್ಟ್ ಮಾಡುತ್ತಾಳೆ ಎನ್ನುವುದರ ಸುತ್ತ ನನ್ನ ಕ್ಯಾರೆಕ್ಟರ್‌ ಸಾಗುತ್ತದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿ ಕೊಡು ತ್ತಾರೆ ಧನ್ಯಾ.

Advertisement

“ಈ ಸಿನಿಮಾದ ಲ್ಲೊಂದು ಟ್ರಾವೆಲಿಂಗ್‌ ಇದೆ. ಬೆಂಗ ಳೂರು, ಮಾಗಡಿ ಇಂದ ಶುರುವಾಗುವ ಸಿನಿಮಾ ಚಿಕ್ಕಮಗ ಳೂರು ಸುತ್ತಮುತ್ತ ಹೋಗಿ ಮತ್ತೆ ಮಾಗಡಿಗೆ ಬಂದು ನಿಲ್ಲುತ್ತದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next