Advertisement

ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ‘ಬಿಎಸ್ 6 ಎಕ್ಸ್‌ ಪಲ್ಸ್ 200 ಟಿ’, ವಿಶೇಷತೆಗಳೇನು..?

02:19 PM Mar 14, 2021 | Team Udayavani |

ನವ ದೆಹಲಿ : ಹೀರೋ ತನ್ನ ಹೊಸ ಬೈಕ್ ಬಿ ಎಸ್ 6 ಎಕ್ಸ್‌ ಪಲ್ಸ್ 200 ಟಿ ಅನ್ನು ಮಾರ್ಚ್ 13 ರ ಶನಿವಾರದಂದು ಬಿಡುಗಡೆಗೊಳಿಸಿದೆ.

Advertisement

ದೆಹಲಿಯ ಎಕ್ಸ್ ಶೋ ರೂಂಗೆ ಕಂಪನಿಯು ಇದರ ಬೆಲೆಯನ್ನು 1,12,800 ರೂ. ನಿಗದಿಪಡಿಸಿದೆ. ಈ ಮಾದರಿಯ ಬಿ ಎಸ್ 4 ಆವೃತ್ತಿಯ ಬೆಲೆ ದೆಹಲಿಯ ಎಕ್ಸ್‌ಶೋರೂಂನಲ್ಲಿ 95,500 ರೂ. ನಿಗದಿಪಡಿಸಿದೆ. ಅಂದರೆ ಹೊಸ ಬಿ ಎಸ್ 6 ಬೈಕ್  17,300 ರೂ ಹೆಚ್ಚಳವಾಗಿದ್ದನ್ನು ಗಮನಿಸಬಹುದಾಗಿದೆ.

ಓದಿ : ಬೇಸಿಗೆಯಲ್ಲಿ ರೋಸ್ ವಾಟರ್ ಉಪಯೋಗಗಳು : ಇಲ್ಲಿದೆ ಹೆಲ್ತ್ ಟಿಪ್ಸ್

ಬಿ ಎಸ್ 6 ಎಕ್ಸ್‌ ಪಲ್ಸ್ 200 ಟಿ  ಹೊಸ ಮಾದರಿಯ ವಿನ್ಯಾಸವು ಬಿ ಎಸ್ 4 ನಂತೆಯೇ ಇದೆ. ಆದರೆ, ಬಿ ಎಸ್ 6 ಮಾಡೆಲ್ ಎಂಜಿನ್ 17.8 ಹೆಚ್‌ ಪಿ ಪವರ್ ಮತ್ತು 16.15 ಎನ್‌ ಎಂ ಟಾರ್ಕ್ ಉತ್ಪಾದಿಸಿದರೆ ಬಿಎಸ್ 4 ಮಾದರಿಯು 18.1 ಹೆಚ್‌ ಪಿ ಪವರ್ ಮತ್ತು 17.1 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು, ಬಿಎಸ್ 6 ಬೈಕ್ ಸ್ಪೋರ್ಟ್ಸ್ ರೆಡ್, ಪ್ಯಾಂಥರ್ ಬ್ಲ್ಯಾಕ್ ಮತ್ತು ಮ್ಯಾಟಿಯೊ ಶೀಲ್ಡ್ ಗೋಲ್ಡ್ ಎಂಬ ಮೂರು ಬಣ್ಣಗಳಲ್ಲಿ ಸಿಗಲಿದೆ.

Advertisement

‘ಬಿ ಎಸ್ 6 ಎಕ್ಸ್‌ ಪಲ್ಸ್ 200 ಟಿ’  ನ ವಿಶೇಷತೆಗಳೇನು..?

8500 ಆರ್ ಪಿ ಎಮ್ ಮೇಲೆ  13.3kw/18.1ps ಗರಿಷ್ಟ ಪವರ್ ಆಗಿದೆ. 16.15 Nm @ 6500 rpm ಗರಿಷ್ಟ ಟಾರ್ಕ್ ನನ್ನು ಹೊಂದಿದೆ. ಸೆಲ್ಫ್ ಹಾಗೂ ಕಿಕ್ ಸ್ಟಾರ್ಟಿಂಗ್ ನ್ನು ಹೊಂದಿದ್ದು, 5 ಸ್ಪೀಡ್ ಕಾಂಸ್ಟಂಟ್ ಮೆಶ್ ಗಿಯರ್ ಬಾಕ್ಸ್ ನಿಂದ ನವೀಕೃತಗೊಂಡಿದೆ. ಫ್ರಂಟ್  ಆಂಟಿ ಫಿಕ್ಷನ್ ಬುಶ್ ಜೊತೆಗೆ ಟೆಲಿಸ್ಕಾಪಿಕ್, ರಿಯರ್-7 ಸ್ಟೆಪ್ ರೈಡರ್ ಅಡ್ಜಸ್ಟ್ಬಲ್ ಮೊನೊಶಾಕ್ ಸಸ್ಪೆಂಶೇನ್ಸಿಯನ್ನು ಒಳಗೊಂಡಿದೆ. ಫ್ರಂಟ್ ಸಿಂಗಲ್ ಚಾನೆಲ್ ABS 276mm ಡಿಸ್ಕ್, ರಿಯರ್-220 mm ಡಿಸ್ಕ್ ಬ್ರೆಕ್ಸ್ ಹೊಂದಿರುವುದರೊಂದಿಗೆ ನೋಡಲು ಆಕರ್ಷಕವಾಗಿದೆ.

ಓದಿ :  ಮಲೆಯಾಳದ ಕಥೆಗಾರ್ತಿ ಗ್ರೇಸಿಯವರ ಕಥೆಗಳಲ್ಲಿ ಹೆಣ್ಣಿನ ಆಂತರಿಕ ಲೋಕ

Advertisement

Udayavani is now on Telegram. Click here to join our channel and stay updated with the latest news.

Next