ಲಂಡನ್: ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಬಾರಿಯ “ದಿ ಹಂಡ್ರೆಡ್” ಕ್ರಿಕೆಟ್ ಪಂದ್ಯಾವಳಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡದ ಪಾಲಾಗಿದ್ದಾರೆ. ಆದರೆ ಉಪನಾಯಕಿ ಸ್ಮತಿ ಮಂಧನಾ ಸದರ್ನ್ ಬ್ರೇವ್ ತಂಡದಲ್ಲೇ ಉಳಿದುಕೊಂಡಿದ್ದಾರೆ. ಗುರುವಾರ ಪುರುಷರ ಹಾಗೂ ವನಿತೆಯರ 64 ಸ್ಥಾನಗಳಿಗಾಗಿ ಹರಾಜು ನಡೆಯಿತು. ವನಿತಾ ವಿಭಾಗದಲ್ಲಿ ಹರಾಜು ನಡೆದದ್ದು ಇದೇ ಮೊದಲು.
ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಅವರು ವೆಲ್ಶ್ ಫೈರ್ ತಂಡದ ಪರ ಆಡಲಿದ್ದಾರೆ. ಆದರೆ ಪಾಕ್ ನಾಯಕ ಬಾಬರ್ ಆಜಂ ಮಾರಾಟವಾಗದೆ ಉಳಿದರು. ವೆಸ್ಟ್ ಇಂಡೀಸ್ ತಂಡದ ಬಿಗ್ ಹಿಟ್ಟರ್ ಕೈರನ್ ಪೊಲಾರ್ಡ್, ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಕೂಡ ಮಾರಾಟವಾಗದವರ ಪಟ್ಟಿಗೆ ಸೇರಿದರು.
2023ನೇ ಸಾಲಿನ ದಿ ಹಂಡ್ರೆಡ್ ಪಂದ್ಯಾವಳಿ ಆ.1ರಂದು ಆರಂಭವಾಗಲಿದ್ದು, ಪುರುಷರ ಹಾಗೂ ವನಿತೆಯರ ವಿಭಾಗಗಳೆರಡರಲ್ಲೂ ಟ್ರೆಂಟ್ ರಾಕೆಟ್ಸ್-ಸದರ್ನ್ ಬ್ರೇವ್ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ.