Advertisement
ದೀರ್ಘಕಾಲ ಕ್ರಿಕೆಟ್ ಆಡಿರುವ ಜಯಸೂರ್ಯ ಅವರಿಗೆ ಈಗ ಮಂಡಿ ನೋವು ವಿಪರೀತವಾಗಿದೆ. ಈ ಹಿಂದೆಯೇ ಇದ್ದ ಈ ನೋವು ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಹೆಜ್ಜೆ ಊರಲಾಗದ ಸ್ಥಿತಿಯಲ್ಲಿದ್ದಾರೆ. ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ.
1996ರ ವಿಶ್ವಕಪ್ ಹೀರೋ ಸನತ್ ಜಯಸೂರ್ಯ ಅನಂತರ ಶ್ರೀಲಂಕಾ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ದುಡಿದಿದ್ದರು. ಸದ್ಯ ಯಾವುದೇ ಕ್ರಿಕೆಟ್ ಚಟುವಟಿಕೆಗಳಿಂದ ದೂರೆವೇ ಉಳಿದಿದ್ದಾರೆ. ಹೀಗಿರುವಾಗಲೇ ಅವರ ಮಂಡಿ ನೋವು ಉಲ್ಬಣಿಸಿದೆ. ಶೀಘ್ರದಲ್ಲಿಯೇ ಮೆಲ್ಬರ್ನ್ಗೆ ತೆರಳಲಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ-ಚಿತ್ರ ವೈರಲ್ ಆಗಿದ್ದು, ಬೇಗ ಗುಣಮುಖರಾಗುವಂತೆ ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ. ಜಯಸೂರ್ಯ ಸಾಧನೆ
ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ ಅವರಂತೆಯೇ ಜಯಸೂರ್ಯ ಕೂಡ ಕ್ರಿಕೆಟ್‌ನ ದಂತಕತೆ. 1996ರ ವಿಶ್ವಕಪ್ ವೀಕ್ಷಿಸಿದವರಿಗೆಲ್ಲ ಜಯಸೂರ್ಯ ಬ್ಯಾಟಿಂಗ್ ತಾಕತ್ತು ಏನೆಂಬುದು ಚೆನ್ನಾಗಿ ಗೊತ್ತು. ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿದ್ದರು. 1996ರ ವಿಶ್ವಕಪ್ ಶ್ರೀಲಂಕಾ ಗೆಲ್ಲುವಲ್ಲಿ ಜಯಸೂರ್ಯ ಕೊಡುಗೆ ದೊಡ್ಡದಿದೆ.
Related Articles
Advertisement