Advertisement

10 ಕೋಟಿ ರೂ. ಜಾಹೀರಾತು ಆಫರ್‌ ತಿರಸ್ಕರಿಸಿದ ಅಲ್ಲು ಅರ್ಜುನ್‌: ಫ್ಯಾನ್ಸ್‌ ಫುಲ್‌ ಖುಷ್

05:31 PM Aug 11, 2022 | Team Udayavani |

ಹೈದಾರಾಬಾದ್‌: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ʼಪುಷ್ಪʼ ಚಿತ್ರದ ಸ್ವೀಕ್ವೆಲ್‌ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಬಗ್ಗೆ ಹೊಸ ಅಪ್ಡೇಟ್ಸ್‌ ಗಾಗಿ ಕಾಯುತಿದ್ದ ಅಭಿಮಾನಿಗಳಿಗೆ ನಟನ ಬಗ್ಗೆ ಒಂದು ಸುದ್ದಿ ಹೊರ ಬಂದಿದ್ದು, ಅದು ಸದ್ಯ ಟಿಟೌನ್‌ ನಲ್ಲಿ ಸದ್ದು ಮಾಡುತ್ತಿದೆ.

Advertisement

ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ಅವರ ಸ್ಟೈಲ್‌, ಮಾತು, ನಟನೆ, ಖದರ್‌ ಇಷ್ಟಪಡುವವರು ಎಲ್ಲಾ ಕಡೆ ಇದ್ದಾರೆ. ಟಾಲಿವುಡ್‌ ಮಾತ್ರವಲ್ಲದೆ ಎಲ್ಲಾ ಸಿನಿರಂಗದಲ್ಲೂ ಅವರಿಗೆ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ʼಪುಷ್ಟ-2ʼ ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಚಿತ್ರಕ್ಕಾಗಿ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಹಬ್ಬಿತ್ತು. ಅದರಂತೆ ರಶ್ಮಿಕಾ ಮಂದಣ್ಣ ಕೂಡ ಪುಷ್ಪ ಸೀಕ್ವೆಲ್‌ ಗಾಗಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್‌ ಅವರಿಗೆ ಸಿನಿಮಾ ರಂಗದಲ್ಲಿ ಎಷ್ಟು ಬೇಡಿಕೆ ಇದೆಯೋ, ಅಷ್ಟೇ ಬೇಡಿಕೆ ಜಾಹೀರಾತು ವಲಯದಲ್ಲಿಯೂ ಇದೆ.  ಅವರು ಜಾಹೀರಾತಿಗೂ ದೊಡ್ಡ ಮಟ್ಟದ  ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿಯೂ ಇದೆ.

ಇದನ್ನೂ ಓದಿ: ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ಇತ್ತೀಚೆಗೆ ಅವರು ಜೋಮ್ಯಾಟೋ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಹಿಂದೆ ಜಾಹೀರಾತಿನಲ್ಲಿ ತೆಗೆಸಿಕೊಂಡ ಫೋಟೋವೊಂದನ್ನು ಸ್ಟೈಲಿಸ್ಟ್‌ ಸ್ಟಾರ್‌ ಹಂಚಿಕೊಂಡಿದ್ದರು.

Advertisement

ಇದೀಗ ಅಲ್ಲು ಅರ್ಜುನ್‌ ದೊಡ್ಡ ಸಂಭಾವನೆ ನೀಡುವ ಜಾಹೀರಾತನ್ನು ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಂಬಾಕು ಹಾಗೂ ಮದ್ಯದ ಕಂಪೆನಿಯೊಂದು ಜಾಹೀರಾತಿಗಾಗಿ ಅವರನ್ನು ಸಂಪರ್ಕಿಸಿತ್ತು. 10 ಕೋಟಿ ಕೊಡುತ್ತೇವೆ ನಮ್ಮ ಕಂಪೆನಿಯ ಜಾಹೀರಾತು ಮಾಡಿಕೊಡಿ ಎಂದು ಹೇಳಿತ್ತು. ಆದರೆ ಸ್ಟೈಲಿಸ್ಟ್‌ ಸ್ಟಾರ್‌ ಕಂಪೆನಿಯ ಆಫರ್‌ ನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಈ ವಿಷಯ ಸದ್ಯ ಅಲ್ಲು ಅಭಿಮಾನಿಗಳಲ್ಲಿ ಖುಷಿ ತರಿಸಿದೆ. ಇತ್ತೀಚಿಗೆ ಬಾಲಿವುಡ್‌  ನ ಅಕ್ಷಯ್‌ ಕುಮಾರ್‌ ಸೇರಿದಂತೆ ಇತರ ಸೆಲೆಬ್ರಿಟಿಗಳು ತಂಬಾಕು, ಪಾನ್‌ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಅಲ್ಲು ಅರ್ಜುನ್‌ ಜಾಹೀರಾತನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next