Advertisement

ಸಂತೆಯಲ್ಲಿ ನಿಂತ ವಧು!

07:30 AM Apr 25, 2018 | |

ಪಾಶ್ಚಿಮಾತ್ಯ ದೇಶದವರು ನಮಗಿಂತ ಆಧುನಿಕರು, ಮುಂದುವರಿದಿರುವವರು ಎಂದೆಲ್ಲಾ ತಿಳಿಯುತ್ತೇವೆ. ಆದರೆ, ಅಂಥಾ ಐರೋಪ್ಯ ರಾಷ್ಟ್ರಗಳಲ್ಲೊಂದಾದ ಬಲ್ಗೇರಿಯಾದಲ್ಲೇ ಈ ವಧುಗಳ ಮಾರುಕಟ್ಟೆ ಇರೋದು ಎನ್ನುವ ಸಂಗತಿ ಹಲವರಿಗೆ ಅಚ್ಚರಿಯಾಗಿ ತೋರಬಹುದು…

Advertisement

ಡಿಂಗ್‌ ಡಾಂಗ್‌. ಮನೆಯ ಕಾಲಿಂಗ್‌ ಬೆಲ್‌ ಸದ್ದು. ಅಡುಗೆಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮರಿಯಾ ಕೈ ಒರೆಸಿಕೊಂಡು ಬಾಗಿಲು ತೆರೆದರೆ ಕೊರಿಯರ್‌ ಹುಡುಗ. ಆನ್‌ಲೈನಿನಲ್ಲಿ ಆರ್ಡರ್‌ ಮಾಡಿದ್ದ ದಿರಿಸು ಯಾವಾಗ ಬರುತ್ತದೆಂದು ತುದಿಗಾಲಲ್ಲಿ ನಿಂತು ಕಾದಿದ್ದಳವಳು. ಮರಿಯಾ ಹೊಸ ಉಡುಪನ್ನು ತೊಟ್ಟುಕೊಂಡು ಕನ್ನಡಿಯ ಮುಂದೆ ಕುಣಿಯುತ್ತಿದ್ದರೆ, ಅಮ್ಮನಿಗೆ ಸಂಭ್ರಮವೋ ಸಂಭ್ರಮ. ಹೊಸ ಬಟ್ಟೆ ಬಂದದ್ದಕ್ಕೆ ಅವಳಿಗಿಂತ ಹೆಚ್ಚು ಖುಷಿ ಪಟ್ಟವಳು ಮರಿಯಾಳ ಅಮ್ಮ. ಇನ್ನು ಸ್ವಲ್ಪ ಹೊತ್ತಿನಲ್ಲೇ ಅವಳು ತಯಾರಾಗಿ ಅದೇ ಉಡುಪನ್ನು ತೊಟ್ಟು ಹೊರಗೆ ಹೋಗಬೇಕಿದೆ. ವರ್ಷಗಳಿಂದ ಮನೆಯವರು ಕಾಯುತ್ತಿದ್ದ ಘಳಿಗೆ ಇದು. ಮನೆಯವರೆಲ್ಲರೂ, ಮರಿಯಾ ಹುಟ್ಟಿದ್ದೇ ಆ ದಿನಕ್ಕಾಗಿ ಎನ್ನುವಷ್ಟು ಉತ್ಸುಕರಾಗಿದ್ದಾರೆ. ಮನದ ಮೂಲೆಯಲ್ಲಿ ಆತಂಕವೂ ಇದೆ. ಮಕ್ಕಳು ಪಿ.ಯು.ಸಿ ಪರೀಕ್ಷೆ ಬರೆಯಲು ಕುಳಿತಾಗಲೂ ಪಾಲಕರು ಇಷ್ಟು ಆತಂಕ ಪಟ್ಟಿರಲಿಕ್ಕಿಲ್ಲ! ಇಷ್ಟಕ್ಕೂ ಮನೆಯವರು ಮರಿಯಾಳನ್ನು ಕರೆದೊಯ್ಯುತ್ತಿರುವುದು ಎಲ್ಲಿಗೆ ಅಂದುಕೊಂಡಿದ್ದೀರಾ? ವಧುಗಳ ಮಾರುಕಟ್ಟೆಗೆ!

ವಧುದಕ್ಷಿಣೆ ಎಂಬ ಆಮಿಷ
ಪಾಶ್ಚಿಮಾತ್ಯ ದೇಶದವರು ನಮಗಿಂತ ಆಧುನಿಕರು, ಮುಂದುವರಿದಿರುವವರು ಎಂದೆಲ್ಲಾ ತಿಳಿಯುತ್ತೇವೆ. ಆದರೆ, ಅಂಥಾ ಐರೋಪ್ಯ ರಾಷ್ಟ್ರಗಳಲ್ಲೊಂದಾದ ಬಲ್ಗೇರಿಯಾದಲ್ಲೇ ಈ ವಧುಗಳ ಮಾರುಕಟ್ಟೆ ಇರೋದು ಎನ್ನುವ ಸಂಗತಿ ಹಲವರಿಗೆ ಅಚ್ಚರಿಯಾಗಿ ತೋರಬಹುದು. ಸುಮಾರು 18,000 ಮಂದಿಯಿರುವ ಆರ್ತಡಾಕ್ಸ್‌ ಕ್ರೈಸ್ತ ಧರ್ಮಕ್ಕೆ ಸೇರಿದ ಉಪ ಪಂಗಡ “ಕಲೈಡಿl’. ವಧುಗಳನ್ನು ತರಕಾರಿಯಂತೆ ಮಾರುಕಟ್ಟೆಯಲ್ಲಿ ಮಾರುವ ಪದ್ಧತಿ ಚಾಲ್ತಿಯಲ್ಲಿರುವುದು ಇದೇ ಸಮುದಾಯದಲ್ಲಿ. ಆಧುನಿಕತೆ, ಜಾಗತೀಕರಣ ಇವೆಲ್ಲದರ ಪ್ರಭಾವದ ನಡುವೆಯೂ ಕಲೈಡಿl ಸಮುದಾಯದವರು ತಮ್ಮ ಪರಂಪರೆಯನ್ನು, ರೀತಿ ರಿವಾಜುಗಳನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಈಗೀಗ ಸಮುದಾಯದ ಕೆಲವು ಹುಡುಗಿಯರು ಈ ಪದ್ಧತಿಯ ವಿರುದ್ಧ ದನಿಯೆತ್ತುತ್ತಿದ್ದಾರಾದರೂ ಮನೆಯವರ ಮತ್ತು ಸಮಾಜದ ವಿರೋಧಕ್ಕೆ ಹೆದರಿ ಕಮಕ್‌ ಕಿಮಕ್‌ ಎನ್ನದೆ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಮಾರುಕಟ್ಟೆ ಎಂದೇಕೆ ಕರೆಯುತ್ತಾರೆ ಎಂದರೆ ಇಲ್ಲಿ ಗಂಡು ಹೆಣ್ಣಿನ ಮನೆಯವರಿಗೆ ಡೌರಿ ತೆರಬೇಕು. ಹೀಗಾಗಿ ತಮ್ಮ ಮಗಳು ಅತಿ ಹೆಚ್ಚು ಡೌರಿ ತೆರಲು ಸಿದ್ಧರಿರುವ ಶ್ರೀಮಂತ ಮನೆತನದ ಸೊಸೆಯಾಗಲಿ ಎನ್ನುವುದು ಇಲ್ಲಿನ ಎಲ್ಲಾ ತಾಯಂದಿರ ಬಯಕೆ.

ರೇಟ್‌ ಹೇಗೆ ಫಿಕ್ಸ್‌ ಮಾಡ್ತಾರೆ?
ಮಾರುಕಟ್ಟೆಯಲ್ಲಿ ಹೇಗೆ ಗುಣಮಟ್ಟದ ಆಧಾರದ ಮೇಲೆ ವಸ್ತುಗಳಿಗೆ ದರಗಳನ್ನು ನಿಗದಿ ಪಡಿಸಲಾಗಿರುತ್ತದೋ ಅದೇ ರೀತಿ ಇಲ್ಲಿ ಹೆಣ್ಮಕ್ಕಳನ್ನು ಅಳೆಯಲು ಅನೇಕ ಮಾನದಂಡಗಳಿವೆ. “ತೆಳ್ಳಗೆ ಬೆಳ್ಳಗೆ’ ಎನ್ನುವುದು ಗಂಡುಗಳ ಹಲವು ಕಂಡೀಷನ್ನುಗಳಲ್ಲಿ ಒಂದು. ಈ ಸಮುದಾಯದ ಬಹುತೇಕ ಹೆಣ್ಮಕ್ಕಳು ಶಾಲೆ ಮೆಟ್ಟಿಲು ಹತ್ತಿರುವುದೇ ಅಪರೂಪವಾಗಿರುವುದರಿಂದ ಅವರ ವಿದ್ಯಾಭ್ಯಾಸದ ಕುರಿತು ಹೆಚ್ಚಿನ ನಿರೀಕ್ಷೆಗಳೇನೂ ಇರುವುದಿಲ್ಲ. ಮನೆಕೆಲಸ ಮಾಡಲು ಬಂದರಷ್ಟೆ ಸಾಕು ಎನ್ನುವ ಭಾವನೆ ಇರುತ್ತದೆ.. ಇನ್ನೊಂದು ಮಾನದಂಡವಿದೆ ಅದು “ಕನ್ಯತ್ವ’. ಹುಡುಗಿ ತನ್ನ ಕನ್ಯೆಯಾಗಿದ್ದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನಿಗದಿಯಾಗುತ್ತೆ. ಕನ್ಯೆಯಾಗಿರದೇ ಇದ್ದರೂ ಪ್ರೀತಿಸುತ್ತಿರುವ ಕಾರಣಕ್ಕೆ ಗಂಡುಗಳು ಮದುವೆಯಾದ ಉದಾಹರಣೆಗಳೂ ಇವೆ. ಅಂದ ಹಾಗೆ 24 ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಡೌರಿಯ ರೂಪದಲ್ಲಿ ನೀಡಲ್ಪಡುತ್ತದೆ. 

ನೀನು ಒಂಟಿಯಲ್ಲ ಮಗಳೇ…
ಮಾರುಕಟ್ಟೆಯಲ್ಲಿ ನಿಲ್ಲುವುದೆಂದರೆ ಸುಮ್ಮನೆಯೇ ಅಲ್ಲ. ಜೀವನದಲ್ಲಿ ಆ ಹುಡುಗಿಯರು ಏನೇನು ಕನಸು ಕಂಡಿರುತ್ತಾರೋ? ತಮ್ಮನ್ನು ಮದುವೆಯಾಗುವವನ ಕುರಿತು ಅದ್ಯಾವ್ಯಾವ ಆಸೆಗಳನ್ನು ಇಟ್ಟುಕೊಂಡಿರುತ್ತಾರೋ? ತಮ್ಮ ಇಷ್ಟಾನಿಷ್ಟಗಳನ್ನು ಒತ್ತಟ್ಟಿಗಿಟ್ಟು ಮುಖದ ಮೇಲೆ ನಗು ತಂದುಕೊಂಡು ಪುರುಷರ ಮುಂದೆ ನಿಲ್ಲುವುದೆಂದರೆ ಸುಮ್ಮನೆ ಅಲ್ಲ. ಮಾರುಕಟ್ಟೆಗೆ ಕಾಲಿಡುವ ಬಹುತೇಕ ಹೆಣ್ಣುಮಕ್ಕಳು ತಮ್ಮನ್ನು ಎಂಥವನು ಕೊಂಡುಕೊಳ್ಳುವನೋ ಎಂಬ ಭಯದಿಂದಲೇ ತತ್ತರಿಸಿ ಹೋಗಿರುತ್ತಾರೆ. ಭಾವಿ ಗಂಡ ಮತ್ತವನ ಮನೆಯವರ ಮುಂದೆ ಹುಡುಗಿ ಎಲ್ಲಿ ತಿರಸ್ಕೃತಳಾಗುತ್ತಾಳ್ಳೋ ಎಂಬ ಆತಂಕದಿಂದ ಹುಡುಗಿಯ ತಾಯಿಯೂ ಮಗಳ ಹಿಂದೆ ನಿಂತಿರುತ್ತಾಳೆ. ಹುಡುಗಿಗೆ ದುಃಖ ಒತ್ತರಿಸಿ ಬಂದಾಗ, ಕಣ್ಣೀರು ತುಳುಕಿದಾಗ “ನೀನೊಬ್ಬಳೇ ಅಲ್ಲ ಕಂದಾ. ಹಿಂದೊಮ್ಮೆ ನಾನೂ ಇಲ್ಲಿ ನಿಂತವಳೇ. ಎಲ್ಲಾ ಒಳ್ಳೆಯದಾಗುತ್ತೆ ಸಹಿಸಿಕೋ’ ಎಂದು ತಾಯಿ ಮಗಳಿಗೆ ಧೈರ್ಯ ಹೇಳುತ್ತಾಳೆ.

Advertisement

ಪ್ರೇಮ ಗೀಮ ಜಾನೆ ದೋ…
ಪ್ರೀತಿ ಎಂಬುದಂತೂ ಕಲೈಡಿl ಸಮುದಾಯದಲ್ಲಿ ನಿಷಿದ್ಧ. ಹುಡುಗಿಯರು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರೊಂದಿಗೆ ಬಾಳಲಾಗುವುದಿಲ್ಲ ಎನ್ನುವುದು ಇಲ್ಲಿ ವಿದಿತ. ಕೆಲವರು ವಯಸ್ಸಿಗೆ ಬರುತ್ತಿದ್ದಂತೆ ತಾವು ಪ್ರೀತಿಸುತ್ತಿರುವವರಿಂದ ದೂರವಾದರೆ, ಇನ್ನು ಕೆಲವರು ಪ್ರೀತಿಯ ಗೊಡವೆಗೇ ಹೋಗುವುದಿಲ್ಲ.

ಹವನ

Advertisement

Udayavani is now on Telegram. Click here to join our channel and stay updated with the latest news.

Next