Advertisement
ಉಪ್ಪುಸ್ನಾನದ ನೀರಿನಲ್ಲಿ ಕಲ್ಲುಪ್ಪು ಸೇರಿಸುವುದರಿಂದ ತ್ವಚೆಯ ತುರಿಕೆ, ಉರಿಯೂತ, ಸನ್‌ಬರ್ನ್ ಹಾಗೂ ಮಾನಸಿಕ ಒತ್ತಡದಂತೆ ಚರ್ಮದ ಸೂಕ್ಷ್ಮ ಸಮಸ್ಯೆಗಳನ್ನು ದೂರಗೊಳಿಸಬಹುದು. ರಕ್ತಪರಿಚಲನೆಯನ್ನು ಸುಗಮವಾಗುತ್ತದೆ.
ಜೇನುತುಪ್ಪವನ್ನು ಸ್ನಾನದ ನೀರಿಗೆ ಬೆರೆಸಿದರೆ ಚರ್ಮ ಮೃದುವಾಗುತ್ತದೆ. ಅರ್ಧ ಬಟ್ಟಲು ಜೇನನನ್ನು ನೀರಿಗೆ ಬೆರಿಸಿ ಅರ್ಧಗಂಟೆಯ ಬಳಿಕ ಸ್ನಾನ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ. ವಿನೆಗರ್
ತ್ವಚೆಯ ಪಿಎಚ್ ಪ್ರಮಾಣವನ್ನು ಸಮತೋಲನ ದಲ್ಲಿರಿಸಿಕೊಳ್ಳಲು ವಿನೆಗರ್ ಅನ್ನು ಸ್ನಾನದ ನೀರಿಗೆ ಬೆರೆಸುವುದು ಉತ್ತಮ. ಬೆನ್ನುನೋವು, ಮಂಡಿನೋವು, ಮಣಿಕಟ್ಟು ನೋವನ್ನು ವಿನೆಗರ್ ನೀರು ನಿವಾರಿಸುತ್ತದೆ.
Related Articles
ಅಡುಗೆ ಸೋಡವನ್ನು ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ರಂಧ್ರಗಳು ಆಳದವರೆಗೆ ಶುಚಿಯಾಗುತ್ತದೆ. ಆ್ಯಂಟಿ ಇನಾ#$Éಮೆಟರಿ ಅಂಶಗಳನ್ನು ಹೊಂದಿರುವ ಸೋಡ ಮೊಡವೆ ಕಲೆ, ದದ್ದುಗಳನ್ನು ದೂರ ಮಾಡುತ್ತದೆ.
Advertisement
ತೆಂಗಿನೆಣ್ಣೆಸ್ನಾನದ ನೀರಿಗೆ ತೆಂಗಿನೆಣ್ಣೆ ಅಥವಾ ಬಾದಮಿ ಎಣ್ಣೆಯನ್ನು ಬೆರೆಸುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು. ನೈಸರ್ಗಿಕ ಮೊಶ್ಚರೈಸರ್ ಇದಾಗಿದ್ದು, ಶುಷ್ಕತೆಯನ್ನು ಹೋಗಲಾಡಿಸುತ್ತದೆ. - ಆರ್.ಕೆ