Advertisement

ಡ್ರಗ್ಸ್‌ ಪೂರೈಕೆಗೂ ಸ್ಲೀಪರ್ ಸೆಲ್‌! ಕೇಂದ್ರ ಗುಪ್ತಚರ ಸಂಸ್ಥೆಗಳ ಟಿಪ್ಪಣಿಯಲ್ಲಿ ಉಲ್ಲೇಖ

07:48 PM Apr 26, 2022 | Team Udayavani |

ನವದೆಹಲಿ: ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ಸಿಗುತ್ತಿರುವುದು ಹಗಲಿನಷ್ಟೇ ಸ್ಪಷ್ಟ ಸಂಗತಿ. ಈಗ, ಮಾದಕ ವಸ್ತುಗಳ ಸ್ಲೀಪರ್ ಸೆಲ್‌ಗ‌ಳ ಮೂಲಕ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್‌ ಸಾಗಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

Advertisement

ಸೋಮವಾರವಷ್ಟೇ ಗುಜರಾತ್‌ನ ಕಾಂಡ್ಲಾ ಬಂದರಿನಲ್ಲಿ 1,300 ಕೋಟಿ ರೂ. ಮೌಲ್ಯದ 260 ಕೆಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿತ್ತು.

ಅಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ವಿಶೇಷ ಭದ್ರತೆ ಇಲ್ಲದ್ದೂ ಪಾಕಿಸ್ತಾನದ ಈ ಕೃತ್ಯಕ್ಕೆ ರಹದಾರಿ ಒದಗಿಸಿದೆ.

ಈ ದಾರಿಯ ಮೂಲಕವೇ ಏಷ್ಯಾ ಖಂಡದ ಹೆಚ್ಚಿನ ರಾಷ್ಟ್ರಗಳಿಗೆ ಮಾದಕ ವಸ್ತುಗಳ ಪೂರೈಕೆ ಎಗ್ಗಿಲ್ಲದೆ ಸಾಗುತ್ತಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿಯೂ ಈ ಅಂಶ ಉಲ್ಲೇಖಗೊಂಡಿದೆ.

“ಅಫ್ಘಾನಿಸ್ತಾನದಿಂದ ಪೂರೈಕೆಯಾಗುವ ಮಾದಕ ವಸ್ತುಗಳು ತೋರ್ಖಾಮ್‌ ಮೂಲಕ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಘುಲಾಂ ಖಾನ್‌ ಎಂಬಲ್ಲಿಗೆ ತಲುಪುತ್ತದೆ. ಅಲ್ಲಿಂದ ಲಾಹೋರ್‌ ಮತ್ತು ಫೈಸಲಾಬಾದ್‌ಗೆ, ಅಲ್ಲಿಂದ ಗ್ವದಾರ್‌ ಮತ್ತು ಕರಾಚಿ ಬಂದರುಗಳಿಗೆ ಕಳುಹಿಸಲಾಗುತ್ತದೆ.

Advertisement

ಸ್ಲೀಪರ್ ಸೆಲ್‌ಗ‌ಳ ಕೆಲಸವೇನು?
ಮಾದಕ ವಸ್ತುಗಳನ್ನು ಸಾಗಿಸುವ ಸ್ಲೀಪರ್ ಸೆಲ್‌ಗ‌ಳಿಗೆ ಆಫ‌^ನ್‌ನಿಂದ ಧನಸಹಾಯ ಸಿಗುತ್ತದೆ. ಅದನ್ನು ಭಾರತದಲ್ಲಿರುವ ಪಾಕಿಸ್ತಾನದ ಸ್ಲೀಪರ್ ಸೆಲ್‌ಗ‌ಳ ಮೂಲಕ ನಿಯಂತ್ರಿಸಲಾಗುತ್ತದೆ. ದುಬೈ, ಕರಾಚಿ ಮತ್ತು ಲಾಹೋರ್‌ನಲ್ಲಿರುವ ಸಿಖ್‌ ಮತ್ತು ಮುಸ್ಲಿಂ ಸಮುದಾಯ, ಕಸ್ಟಮ್ಸ್‌ನಲ್ಲಿ ಸುರಕ್ಷಿತವಾಗಿ ಡ್ರಗ್ಸ್‌ ಸಾಗಣೆ ಮತ್ತು ವಿತರಣೆಯನ್ನು ನಿರ್ವಹಿಸುತ್ತವೆ. ದೇಶಾದ್ಯಂತ ಅದರ ವಿತರಣೆ ಮತ್ತು ಹಣಸಂಗ್ರಹ ಮಾಡುವುದಲ್ಲದೆ, ಬಂದ ಮೊತ್ತದಲ್ಲಿ ನಿಗದಿತ ಭಾಗವನ್ನು ಉಗ್ರ ಚಟುವಟಿಕೆಗಳಿಗೆ ಮೀಸಲಿರಿಸಲಾಗುತ್ತದೆ. ಉಳಿದ ಮೊತ್ತ ಹವಾಲಾ ಮೂಲಕ ನಿರ್ವಹಣೆಗಾರರಿಗೆ ರವಾನೆಯಾಗುತ್ತದೆ.

2021ರ ಸೆ.13ರಂದು 3 ಸಾವಿರ ಕೆಜಿ ಹೆರಾಯಿನ್‌ ಅನ್ನು ಗುಜರಾತ್‌ನ ಮಂದ್ರಾ ಬಂದರು, 2021 ಡಿ.19ರಂದು ಗುಜರಾತ್‌ ಕರಾವಳಿ ಪ್ರದೇಶದಲ್ಲಿ 400 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿತ್ತು. ಪಾಕಿಸ್ತಾನ ಸೇನೆ ಇಂಥ ಸ್ಲೀಪರ್ ಸೆಲ್‌ಗ‌ಳನ್ನು ಬಳಕೆ ಮಾಡುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next