Advertisement
ಇಂದು ನಮ್ಮ ಬಾಲಿವುಡ್ ಸಿನಿಮಾಗಳಿಗೆ ಜಗತ್ತಿನೆಲ್ಲೆಡ ವೀಕ್ಷಕರಿದ್ದಾರೆ. ಹಿಂದಿ ಭಾಷೆಯ ಸಿನಿಮಾಗಳಿಗೆ ಪಕ್ಕದ ಪಾಕಿಸ್ತಾನ ದೇಶದಲ್ಲೂ ಅನೇಕ ವೀಕ್ಷಕರಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಹಲವು ಖ್ಯಾತ ಕಲಾವಿದರ ಸಿನಿಮಾಗಳಿಗೆ ಪಾಕಿಸ್ತಾನದಲ್ಲೂ ವೀಕ್ಷಕರಿದ್ದಾರೆ.
Related Articles
Advertisement
ನೇಹಾ ಧೂಪಿಯಾ: ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ನೇಹಾ ಧೂಪಿಯಾ ಪಾಕಿಸ್ತಾನದ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. 2008ರಲ್ಲಿ ಬಂದ ʼಕಭಿ ಪ್ಯಾರ್ ನಾ ಕರ್ನಾʼ ಸಿನಿಮಾದ ಐಟಂ ಸಾಂಗ್ ನಲ್ಲಿ ನೇಹಾ ಹೆಜ್ಜೆ ಹಾಕಿದ್ದರು.
ನಸೀರುದ್ದೀನ್ ಷಾ: ಹಿರಿಯ ನಟ ನಸೀರುದ್ದೀನ್ ಷಾ ಇಂದು ಬಾಲಿವುಡ್ ನ ದಿಗ್ಗಜ ನಟರಲ್ಲಿ ಒಬ್ಬರು. ತನ್ನ ಮನರಂಜನಾ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿರುವ ಇವರು ಹಿಂದಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಪಾಕಿಸ್ತಾನದ ಸಿನಿಮಾಗಳಲ್ಲಿ ತನ್ನ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ‘ಖುದಾ ಕೇ ಲಿಯೇ’(2007), ʼಜಿಂದಾ ಭಾಗ್ʼ (2013) ಸಿನಿಮಾದಲ್ಲಿ ನಟಿಸಿದ್ದರು.
ಓಂ ಪುರಿ : ನಟ ಓಂ ಪುರಿ ಅವರು ಹಿಂದಿಯ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಳೆಯ ಚಿತ್ರಗಳಲ್ಲಿನ ಅವರ ಅಭಿನಯ ಇಂದಿಗೂ ಎವರ್ ಗ್ರೀನ್ ಆಗಿದೆ. 2016 ರಲ್ಲಿ ಬಂದ ಆ್ಯಕ್ಟರ್ ಇನ್ ಲಾʼ ಎನ್ನುವ ಪಾಕಿಸ್ತಾನಿ ಚಿತ್ರದಲ್ಲಿ ಅವರು ನಟಿಸಿದ್ದರು.
ಕಿರಣ್ ಖೇರ್: ಹಿರಿಯ ನಟಿ ಕಿರಣ್ ಖೇರ್ 2003ರಲ್ಲಿ ಬಂದ ‘ಖಾಮೋಶ್ ಪಾನಿ’ ಎನ್ನುವ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಕ್ಕೆ ಅಂತಾರಾಷ್ಟ್ತೀಯ ಮನ್ನಣೆ ಸಿಗುವುದರ ಜೊತೆಗೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು.
ಪಾಕಿಸ್ತಾನದ ʼಗಾಡ್ ಫಾದರ್ʼ ನಲ್ಲಿ ಹಲವು ಭಾರತೀಯ ಕಲಾವಿದರು: ಹಾಲಿವುಡ್ ರಿಮೇಕ್ ಸಿನಿಮಾವಾಗಿ ಪಾಕಿಸ್ತಾನದಲ್ಲಿ 2007ರಲ್ಲಿ ಬಂದ ʼಗಾಡ್ ಫಾದರ್ – ದಿ ಲೆಜೆಂಡ್ ಕಂಟಿನ್ಯೂಸ್ʼ ಸಿನಿಮಾದಲ್ಲಿ ಭಾರತದ ನಟ ವಿನೋದ್ ಖನ್ನಾ ನಟಿಸಿದ್ದರು. ಇವರಷ್ಟೇ ಅಲ್ಲದೆ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ , ಹೃಷಿತಾ ಭಟ್, ಮಲೈಕಾ ಆರೋರಾ ಸಹೋದರಿ ಅಮೃತಾ ಅರೋರಾ ಕೂಡ ಸಣ್ಣ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದರು.
ಜಾನಿ ಲಿವರ್: ಭಾರತದ ಖ್ಯಾತ ಹಾಸ್ಯ ನಟ ಜಾನಿ ಲಿವರ್ ಕೂಡ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸಿದ್ದರು. 2011ರಲ್ಲಿ ಬಂದ ಮ್ಯೂಸಿಕಲ್ ಲವ್ ಸ್ಟೋರಿ ʼಲವ್ ಮೇ ಘುಮ್ʼ ಚಿತ್ರದಲ್ಲಿ ಜಾನಿ ಶುಕ್ಲಾ ಎನ್ನುವವರ ಪಾತ್ರವನ್ನು ಮಾಡಿದ್ದರು.