Advertisement
ಬಿಜೆಪಿ ನಾಯಕಿ ಪೂನಂ ಮಹಾಜನ್ ದಿ.ಪ್ರಮೋದ್ ಮಹಾಜನ್ ಪುತ್ರಿ. ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪ್ರಿಯಾದತ್, ಮಾಜಿ ಸಚಿವ ಸುನೀಲ್ ದತ್ ಪುತ್ರಿ. 2009ರ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಸದಸ್ಯರಾಗಿದ್ದರು. ಹಾಲಿ ಸಂಸದೆ ಸತತ 2ನೇ ಬಾರಿಗೆ ಆಯ್ಕೆ ಬಯಸುತ್ತಿದ್ದಾರೆ.
Related Articles
Advertisement
ಮುಸ್ಲಿಂ ಮತ ಪ್ರಾಮುಖ್ಯ: ಈ ಕ್ಷೇತ್ರದ ಒಟ್ಟು 16.45 ಲಕ್ಷ ನೋಂದಾಯಿತ ಮತದಾರರ ಪೈಕಿ ಶೇ.25 ಮಂದಿ (4.14 ಲಕ್ಷ) ಮುಸ್ಲಿಂ ಮತದಾರರೇ ಇದ್ದಾರೆ. ಹೀಗಾಗಿ, ಯಾವುದೇ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಿದರೂ, ಅವರು ಹಕ್ಕು ಚಲಾಯಿಸುವುದು ಪ್ರಾಮುಖ್ಯವೇ ಆಗುತ್ತದೆ. ಇನ್ನು ಮರಾಠಿ ಸಮುದಾಯ5.59 ಲಕ್ಷ (ಶೇ.34), 77 ಸಾವಿರ ಕ್ರಿಶ್ಚಿಯನ್ ಸಮುದಾಯ (ಶೇ.5), 2.73 ಲಕ್ಷ ಉತ್ತರ ಭಾರತೀಯರು (ಶೇ.17), ರಾಜಸ್ಥಾನ ಮತ್ತು ಗುಜರಾತ್‌ನ ಮತದಾರರ ಸಂಖ್ಯೆ 1.80 ಲಕ್ಷ (ಶೇ.11), 1.05 ಲಕ್ಷ ಮಂದಿ ದಕ್ಷಿಣ ಭಾರತೀಯರು (ಶೇ.6) ಯಾವುದೇ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ. ಪೂರ್ವ ಮತ್ತು ಪಶ್ಚಿಮ ಬಾಂದ್ರಾ, ಚಂಡಿವಲಿಯಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚು. ಜತೆಗೆ ಕುರ್ಲಾದಲ್ಲಿ ಸಮುದಾಯದ ಜನಸಂಖ್ಯೆ ಗಣನೀಯವಾಗಿಯೇ ಇದೆ. 2014ರಲ್ಲಿ ಮೋದಿ ಅಲೆ ಇದ್ದ ಕಾರಣ ತಾವು ಸೋಲಬೇಕಾಯಿತು. ಈ ಬಾರಿ ಅಂಥ ವಾತಾವರಣ ಇಲ್ಲ ಎನ್ನುತ್ತಾರೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾದತ್. ಆರು ಕ್ಷೇತ್ರಗಳು: ವಿಲೇ ಪಾರ್ಲೆ (ಬಿಜೆಪಿ), ಚಂಡಿವಲಿ (ಕಾಂಗ್ರೆಸ್), ಕುರ್ಲಾ (ಶಿವಸೇನೆ), ಕಾಲಿನಾ (ಶಿವಸೇನೆ), ವಂಡ್ರೆ ಈಸ್ಟ್ (ಶಿವಸೇನೆ), ವಂಡ್ರೆ ವೆಸ್ಟ್ (ಬಿಜೆಪಿ). ಆರು ಕ್ಷೇತ್ರಗಳಲ್ಲಿ ಐದರಲ್ಲಿ ಬಿಜೆಪಿ-ಶಿವಸೇನೆ ಇರುವುದರಿಂದ ಪೂನಂ ಮಹಾಜನ್‌ಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೆ, ಮತದಾರನ ಅಂತರಂಗ ಬಲ್ಲವರಾರು? 2014ರ ಚುನಾವಣೆ – ಪೂನಂ ಮಹಾಜನ್ (ಬಿಜೆಪಿ): 4,78, 535 – ಪ್ರಿಯಾ ದತ್ (ಕಾಂಗ್ರೆಸ್) : 2,91, 764