Advertisement

ಇಲ್ಲೀಗ ಮೀಸೆಯ ಮಾಸ 

06:25 AM Nov 19, 2017 | Harsha Rao |

ಆಶ್ವಿ‌àಜ ಕಾರ್ತಿಕ ಮಾರ್ಗಶಿರ ಎಂದು ನನ್ನ ಮನೆಯ ಗೋಡೆಯ ಮೇಲಿನ ಕನ್ನಡ ಕ್ಯಾಲೆಂಡರ್‌ ಕಾಲ ಎಣಿಸುವ ಹೊತ್ತಲ್ಲಿ ಈ ದೇಶದ ಈಗಿನ ಮಾಸ ವಿಶೇಷ ಹೆಸರಿನೊಂದಿಗೆ ಸುದ್ದಿ ಮಾಡುತ್ತಿದೆ. ಇದೀಗ ಇಲ್ಲಿ ಮೀಸೆಗಳ ಮಾಸ. ಮತ್ತೆ ಈ ಮಾಸದಲ್ಲಿ ಬೇಕೆಂದರೂ ಬೇಡವೆಂದರೂ ಮೀಸೆ ಹೊತ್ತ ಮುಖಗಳೇ ಕಣ್ಣೆದುರು ಹೆಚ್ಚು ಹೆಚ್ಚು ಬರುವುದರಿಂದ ಮೀಸೆಯ ಬಗ್ಗೆ ಯೋಚಿಸುವುದು ಅನಿವಾರ್ಯ ಆಗಿದೆ. ಈ ದೇಶದಲ್ಲಿ ಕುಳಿತು ಮೀಸೆಯ ಬಗ್ಗೆ ಬರೆಯಹೊರಟರೆ ಬಹುಶಃ ಮೀಸೆ ಶಬ್ದದ ಆಂಗ್ಲ ರೂಪದ ಕಾಗುಣಿತದಿಂದಲೇ ಆರಂಭಿಸಬೇಕು. ಇಂಗ್ಲಿಷರ ಕಾಗುಣಿತದಲ್ಲಿ Moustache ಎಂದು ಬರೆಯಲ್ಪಡುವ ಮೀಸೆ ಎನ್ನುವ ಶಬ್ದ ಅಮೆರಿಕದಲ್ಲಿ ಬಳಸಲ್ಪಡುವ ಇಂಗ್ಲಿಷ್‌ನಲ್ಲಿ Moustache ಆಗುತ್ತದೆ.

Advertisement

ನಾವು ಅವರಂತಲ್ಲ, ಎಲ್ಲರಂತಲ್ಲ , ನಾವು ನಾವೇ ಎನ್ನುವುದು  ಬ್ರಿಟಿಷರ ಮಾತುಗಳಲ್ಲಿ, ನಡೆಯಲ್ಲಿ  ಮಾತ್ರ ಅಲ್ಲದೆ ಯಾವ ತರ್ಕಕ್ಕೂ ಸಿಗದ ಸಾಂಪ್ರದಾಯಿಕ ರೀತಿ -ರಿವಾಜುಗಳ ಬ್ರಿಟಿಷ್‌ ಇಂಗ್ಲಿಶ್‌ ಭಾಷೆಯಲ್ಲೂ ಎದ್ದು  ಕಾಣುತ್ತದೆ. ಅಲ್ಲಿನ ಇಲ್ಲಿನ ಕಾಗುಣಿತದ ಗೋಜೇ ಬೇಡವೆಂದು ಹಲವರು ಮೀಸೆಗೆ ಚಿಕ್ಕದಾಗಿ “ಮುಶ್‌’ ಎಂದು ಕರೆಯುವುದೂ, ಬರೆಯುವುದೂ ಇದೆ. ಹೆಸರು ಚಿಕ್ಕದಾದರೂ ಮೀಸೆ ಚಿಕ್ಕದಿರಬೇಕೆಂದಿಲ್ಲವಲ್ಲ. ಮೀಸೆ ಎನ್ನುವುದು ಮೀಸೆಯ ಸರಳ ಸೂಕ್ತ ಹೆಸರಾದರೂ ನವೆಂಬರ್‌ ತಿಂಗಳಲ್ಲಿ ಮಾತ್ರ ಮೀಸೆ ಬೆಳೆಸುವವರ ಮೀಸೆಗಳಲ್ಲಿ ಹಲವು ಬಗೆಯ ಆಕಾರಗಳು, ಗಾತ್ರಗಳು ಕಂಡುಬರುತ್ತವೆ. ಹುರಿಮೀಸೆ, ಏರುಮೀಸೆ, ಇಳಿಮೀಸೆ, ಸುರುಳಿಮೀಸೆ, ತೆಳು ಮೀಸೆ, ದಟ್ಟಮೀಸೆ, ಪೊದೆಮೀಸೆ,  ಕತ್ತಿಮೀಸೆ-  ಹೀಗೆ ಮೀಸೆ ಸಂಕುಲದ ಪಟ್ಟಿ ಉದ್ದ ಬೆಳೆಯುತ್ತದೆ. ಯಾವತ್ತೂ ಮೀಸೆಯನ್ನು ಇಟ್ಟುಕೊಳ್ಳದ ಮುಖಗಳು, ಯಾವಾಗಲೂ ಮೀಸೆಯನ್ನು ಸವರಿ ಕಳೆಯುವ ಮೇಲುªಟಿಯ ಮೇಲ್ಭಾಗಗಳು ಈಗ ಮೀಸೆ ಬೆಳೆಸಲು ಶುರು ಮಾಡಿವೆ. ಹಾಗಾಗಿಯೇ ನವೆಂಬರ್‌ ತಿಂಗಳನ್ನು ಮೀಸೆಗಳ ಮಾಸ ಎಂದೂ ಕರೆಯಬಹುದು ಅಥವಾ ನವೆಂಬರ್‌ ಅನ್ನು ಮೊವೆಂಬರ ಎಂದೂ ಮರುನಾಮಕರಣ ಮಾಡಬಹುದು.

ಬದಲಾವಣೆಗಾಗಿಯೋ, ಮುಖ ವಿನ್ಯಾಸಕ್ಕಾಗಿಯೋ, ಪೌರುಷದ ಸಂಕೇತವಾಗಿಯೋ ಅಥವಾ ಆಲಸ್ಯದ ದಾಸರಾಗಿಯೋ ತಮ್ಮ ತಮ್ಮ ನಂಬಿಕೆ, ಸಿದ್ಧಾಂತ,  ಮನೋಧರ್ಮಕ್ಕನುಗುಣವಾಗಿ ಮೀಸೆ ಬೆಳೆಸುವ  ಗಂಡಸರ ಪ್ರಪಂಚ ನಮಗೆ ಪರಿಚಿತ. ಆದರೆ, ನವೆಂಬರ್‌ ತಿಂಗಳೆಂದರೆ  ಮೊವೆಂಬರ ಎನ್ನುತ್ತ ಮೀಸೆ ಬೆಳೆಸುವ ಗಂಡಸರು ಸದ್ಯಕ್ಕೆ ಇಲ್ಲಿ ಸುದ್ದಿಯಲ್ಲಿ¨ªಾರೆ. ಮೀಸೆ ಎನ್ನುವುದು ಗಂಡಸರ ಅಥವಾ ಗಂಡುತನದ ಸಂಕೇತ ಎಂದು ಪುರಾಣ, ಕಾವ್ಯ, ಕಲ್ಪನೆಗಳಲ್ಲಿ  ನಾವೆಲ್ಲ ಓದುತ್ತ¤ ಕೇಳುತ್ತ ಬಂದವರು. ಮೊಗದ ಮೇಲೆ ತನ್ನ ಉಪಸ್ಥಿತಿಯೊಂದರಿಂದಲೇ ವ್ಯಕ್ತಿತ್ವದ ಒಂದು ಸಣ್ಣ ಪರಿಚಯ ನೀಡುವ ಸಾಮರ್ಥ್ಯ ಇರುವ ಮೀಸೆ, ಸದ್ಯಕ್ಕೆ ತನ್ನ ಮೀಸೆಯನ್ನು ಹೊತ್ತ ಅಥವಾ ಹೊರಬೇಕಾದ ಗಂಡಸರ ಆರೋಗ್ಯ ಉಳಿಸಿ ಎನ್ನುವ ಉದಾತ್ತ ಚಳವಳಿಯ ಭಾಗವಾಗಿದೆ. ಗಂಡಸರಿಗೆ ಬರುವ, ಬರಬಹುದಾದ ಕೆಲವು ಸಮಸ್ಯೆಗಳ ಕಾಯಿಲೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನವೆಂಬರ್‌ನಲ್ಲಿ ಅಲ್ಲಲ್ಲ , ಮೊವೆಂಬರದಲ್ಲಿ ನಡೆಯುತ್ತದೆ. ಮತ್ತೆ ಸಾಮಾನ್ಯವಾಗಿ ಮೀಸೆ ಇಡದವರೂ ಆ ನೆಪದÇÉೇ ಮೀಸೆ ಬೆಳೆಸಿಕೊಂಡು ಓಡಾಡುತ್ತಾರೆ; ಮತ್ತೆ ತಾನು ಹೀಗೆ ಅಪೂರ್ವಕ್ಕೆ ಮೀಸೆ ಬೆಳೆಸಿದ್ದಕ್ಕೆ ಏನಾದರೂ ದಾನ ಕೊಡಿ ಎಂದೂ ಕೇಳುತ್ತಾರೆ;

ಆಮೇಲೆ ಹಾಗೆ ಒಟ್ಟಾದ ದಾನದ ಹಣವನ್ನು ಒಳ್ಳೆಯ ಉದ್ದೇಶಕ್ಕೆ ವಿನಿಯೋಗಿಸುತ್ತಾರೆ. ಈ ದೇಶದಲ್ಲಿ ದಿನ ದಿನವೂ ಅನುಭವಕ್ಕೆ ಬರುವ ಬೇರೆ ಬೇರೆ ನಿಮಿತ್ತದ ನಿಧಿ ಸಂಗ್ರಹಿಸುವ ಮತ್ತು ದಾನಪಡೆಯುವ (Fund Raising and Charity) ವಿಧಾನಗಳಲ್ಲಿ ಈ ಒಂದು ತಿಂಗಳ ಮಟ್ಟಿಗೆ ಮೀಸೆ ಬೆಳೆಸಿ ಮೀಸೆ ತೆಗೆಯುವುದೂ ಒಂದು ಮಾರ್ಗವಾಗಿ ಸೇರಿಕೊಂಡಿದೆ. ಮೀಸೆ ಅಳಿಸುವುದಾದರೆ ಬೆಳೆಸುವುದ್ಯಾಕೆ, ಬೆಳೆಸುವುದಾದರೆ ಹಾಗೆಯೇ ಉಳಿಸಬಾರದೇಕೆ ಎನ್ನುವುದು ತಿಂಗಳ ಮಟ್ಟಿಗೆ ಬಂದು ಹೋಗುವ ಮೀಸೆಗಳಿಗೂ ಎದುರಾಗುವ ಪ್ರಶ್ನೆ. ಆದರೆ, ಗಂಡಸರ ಪ್ರಕೃತಿದತ್ತ ಸಂಗಾತಿಯಾದ ಮೀಸೆ ಅಂತಹ ಎಲ್ಲ  ಪ್ರಶ್ನೆಗಳನ್ನು ಬದಿಗಿಟ್ಟು ನವೆಂಬರ ತಿಂಗಳಿನ ಗಂಡಸರ ಆರೋಗ್ಯ ಮಾಹಿತಿ ಪ್ರಚಾರ ಮತ್ತು ನಿಧಿಸಂಗ್ರಹ ಅಭಿಯಾನದಲ್ಲಿ  ನಿರತವಾಗಿದೆ. ಮತ್ತೆ ಯಾರು ಯಾರ ಉದ್ದೇಶ  ಖಯಾಲಿ ಹೇಗೆ ಹೇಗೆ ಇದೆಯೋ ಅದಕ್ಕೆ ತಕ್ಕಂತೆ ಆಕಾರ, ಗಾತ್ರ ವಿನ್ಯಾಸಗಳನ್ನು ಪಡೆದು ಕೆಲವರಲ್ಲಿ ಹೆಮ್ಮೆಯನ್ನೂ ಇನ್ನು ಕೆಲವರಲ್ಲಿ ಮುಜಗರವನ್ನೂ ಮೂಡಿಸುತ್ತಿದೆ. 

 ತನ್ನ ತಾರುಣ್ಯದ ದಿನಗಳಿಂದಲೂ ದಿನವೂ ಮೀಸೆ ತೆಗೆಯುತ್ತ  ಬದುಕಿದ ನನ್ನ ಸಹೋದ್ಯೋಗಿ ಈ ವರ್ಷವೂ ನವೆಂಬರ ಒಂದು ತಿಂಗಳ ಮಟ್ಟಿಗೆ ಮೀಸೆ ಬೆಳೆಸುತ್ತಿ¨ªಾನೆ. ಕಳೆದ ವರ್ಷದ ನವೆಂಬರ್‌ಗೆ ತಾನು ಮೀಸೆ ಬಿಟ್ಟಾಗ ಎಷ್ಟು ಅಸಹ್ಯವಾಗಿ ಅಪರಿಚಿತನಂತೆ ಕಾಣುತ್ತಿ¨ªೆ ಎಂದೂ ಅವಲೋಕಿಸುತ್ತಾನೆ. ಕಳೆದ ವರ್ಷದ ನವೆಂಬರ ಅಲ್ಲಿ ಮೀಸೆಯ ತುದಿಗಳನ್ನು ಮೇಲ್ಮುಖವಾಗಿ ಬೆಳೆಸಿ ಅದರ ತುದಿ ಸುರುಳಿ ಸುತ್ತುವಂತೆ ವಿನ್ಯಾಸಗೊಳಿಸಿದ ಆತ ಈ ನವೆಂಬರ ಅಲ್ಲಿ ಮೀಸೆಯನ್ನು ಕೆಳಮುಖವಾಗಿ ಬೆಳೆಸುವ ಪ್ರಯತ್ನದಲ್ಲಿ ನಿರತನಾಗಿ¨ªಾನೆ. ಮೀಸೆ ಇಲ್ಲದವನ ಮುಖದಲ್ಲಿ ಆಕಸ್ಮತ್ತಾಗಿ ಬೆಳೆದ ಮೀಸೆ ಆತನ ಕಣ್ಣಿಗೆ ಅಸಹ್ಯವಾಗಿ ಕಂಡರೂ ತಾನು ಮೀಸೆ ಬೆಳೆಸುವುದು ಒಂದು ಉದಾತ್ತ ಉದ್ದೇಶಕ್ಕೆ ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡಿ¨ªಾನೆ.  ಮೀಸೆಯ ಡೊಂಕನ್ನು ತಿದ್ದಿತೀಡುವ ತನ್ನ ಯಜಮಾನನ ಯೋಚನೆಗೆ ಯೋಜನೆಗೆ ಸ್ವತಃ ಮೀಸೆ ಹೇಗೆ ಪ್ರತಿಕ್ರಿಯಿಸೀತೋ ಗೊತ್ತಿಲ್ಲ ಅಥವಾ ಪ್ರತಿಕ್ರಿಯಿಸುವುದರೊಳಗೆ ತನ್ನನ್ನು ಸವರಿ ಕಳೆಯುವ ಒಡೆಯನ ಬಗ್ಗೆ ಯೋಚಿಸಿದರೂ ಬಿಟ್ಟರೂ ಒಂದೇ ಎಂದು ನಿರ್ಲಕ್ಷಿಸುವ ಸಾಧ್ಯತೆಯೂ ಇರಬಹುದು. ಕಳೆದ ಏಳು ವರ್ಷಗಳಿಂದ ಪ್ರತಿ ನವೆಂಬರ್‌ಗೂ ಮೀಸೆ ಬೆಳೆಸಿ ತಾನು ಮೀಸೆ ಬೆಳೆಸಿದೆನೆಂದು ಸ್ನೇಹಿತರಿಗೂ ಸಹೋದ್ಯೋಗಿಗಳಿಗೂ ಸುದ್ದಿ ಮಾಡಿ, ಮೀಸೆಯ ನೆಪದಲ್ಲಿ ತಾನು ಒಟ್ಟು ಮಾಡುತ್ತಿರುವ ನಿಧಿಗೆ  ಧನಸಹಾಯ  ನೀಡಿ ಎಂದೂ ಕೇಳುತ್ತಿ¨ªಾನೆ. ತಿಂಗಳ ಮಟ್ಟಿಗೆ ಬೆಳೆದು ಅಳಿಯುವ  ಮೀಸೆಯ ನೆಪದಲ್ಲಿ ಸಂಗ್ರಹಿಸಿದ ಹಣವನ್ನು ಗಂಡಸರ ಆರೋಗ್ಯದ ಸಂಬಂಧಿ ಸಂಶೋಧನೆಗಳಿಗೆ, ಗಂಡಸರಲ್ಲಿ ಮಾತ್ರ  ಕಂಡು ಬರುವ ಕೆಲವು ಬಗೆಯ ಕ್ಯಾನ್ಸರ್‌ ಬಗ್ಗೆ ಎಚ್ಚರ ಮೂಡಿಸಲು, ಕೆಲಸ ಮಾಡುವ ಸಂಘಟನೆಗಳಿಗೆ ದಾನ  ನೀಡುತ್ತಿ¨ªಾನೆ. ಇಷ್ಟು ವರ್ಷಗಳ ಪ್ರತಿ ನವೆಂಬರ್‌ನಲ್ಲಿ ತಾನು ಮೀಸೆ ಬೆಳೆಸಿ ಸಂಗ್ರಹಿಸಿಕೊಟ್ಟ ನಿಧಿ ಸುಮಾರು ಮೂರು  ಸಾವಿರ ಪೌಂಡ್‌ (ಅಂದಾಜು ಎರಡೂವರೆ ಲಕ್ಷ ರೂಪಾಯಿಗಳಿಗೆ ಸಮ) ಎಂದೂ ಹೇಳುತ್ತಾನೆ. ಯಾವತ್ತೂ ಇರದ ಮೀಸೆ ಒಮ್ಮೊಮ್ಮೆ ಮೂಡಿದರೆ ಬರುವ ಬೆಲೆ ನೋಡಿ ಅಂತ ವರ್ಷದ ಎಲ್ಲ ದಿನ, ಕಾಲಗಳಲ್ಲೂ ತುಟಿಯ ಮೇಲೆ ಜಡ್ಡು ಹೊಡೆದು ಮಲಗಿದ ನನ್ನ ನನ್ನಂಥ‌ವರ ಮೀಸೆ ಆಡಿಕೊಳ್ಳುತ್ತಿರಬಹುದು. ವರ್ಷದ ನವೆಂಬರ ತಿಂಗಳು ಮಾತ್ರ ಯಾಕೆ, ಹನ್ನೆರಡು ತಿಂಗಳೂ ಮುಖದ ಮೇಲಿರುವ ಎಲ್ಲರಿಗೂ ನಿತ್ಯವೂ ಕಾಣುವ ಕೆಲವರ ಮೀಸೆಗಳು ಇಷ್ಟುದ್ದ  ಅನುಭವ, ಅಷ್ಟುದ್ದ ಆಯುಷ್ಯ  ಇದ್ದೂ ತಿಂಗಳ ಮಟ್ಟಿಗೆ ಬಂದು ಹೋಗುವ ಕೆಲವರ ಮೀಸೆ ಮಾಡುವ ಸುದ್ದಿಗೆ ಮತ್ತೆ ಅಂತಹ ಮೀಸೆಗಳಿಗೆ ಸಿಗುವ ಮನ್ನಣೆಗಳ ಬಗ್ಗೆ ಬೆರಗು ಪಡುತ್ತಿರಬಹುದು. ಆ ಹೊತ್ತಿಗೆ ನವೆಂಬರ ಮಾಸದಲ್ಲಿ ಮಾತ್ರ ಕೆಲವರು ಬೆಳೆಸಿ ತೆಗೆಯುವ,  ಇದ್ದಷ್ಟು ದಿನ  ಸುದ್ದಿ ಮಾಡುವ  ತಾತ್ಕಾಲಿಕ ಮೀಸೆ, ತಾನು ಬದುಕಿನಲ್ಲೂ ಸಾವಿನಲ್ಲೂ ಹಿರಿದು ಉದ್ದೇಶಕ್ಕೆ ನೆರವಾದ ಎರವಾದ ಹಿರಿಮೆಯಲ್ಲಿರಬಹುದು. ಯಾವಾಗಲೂ ಇರುವ ಮೀಸೆ ಮತ್ತು ಒಂದು ತಿಂಗಳ ಮಟ್ಟಿಗೆ ಇದ್ದು ಹೋಗುವ ಮೀಸೆಗಳ ನಡುವಿನ ಅಚ್ಚರಿ-ಮತ್ಸರಗಳು ಏನೇ ಇದ್ದರೂ ನವೆಂಬರ ತಿಂಗಳಲ್ಲಿ  ಮೀಸೆಗಳು ಸುದ್ದಿ ಮಾಡುತ್ತಿರುವುದು ಮತ್ತೆ ಮೀಸೆಗಳ ನೆಪದಲ್ಲಿ ನವೆಂಬರ, “ಮೊವೆಂಬೆರ’ ಎಂದು ಕರೆಸಿಕೊಳ್ಳುತ್ತಿರುವುದು ಇಲ್ಲಿನ ಈ  ಮಾಸದ ವಿಶೇಷಗಳು. 

Advertisement

– ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next