Advertisement

ಮಹಿಳಾ ಸಹಪಾಠಿಗೆ ಲೈಂಗಿಕ ಕಿರುಕುಳ: ಐಐಟಿ ವಿದ್ಯಾರ್ಥಿ ಬಂಧನ

08:05 PM Apr 04, 2021 | Team Udayavani |

ಗುವಾಹಟಿ: ಮಹಿಳಾ ಸಹಪಾಠಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗುವಾಹಟಿ ಐಐಟಿಯ (ಐಐಟಿ-ಜಿ) ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

“ಬಂಧಿತ ವಿದ್ಯಾರ್ಥಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ನಲ್ಲಿ ಓದುತ್ತಿದ್ದಾನೆ. ಹೋಳಿ ಹಬ್ಬದ ದಿನ ತನಗೆ ಒಂದು ಪೇಯ ನೀಡಿದ್ದ. ಅದನ್ನು ಕುಡಿತ ತಾನು ಮೂರ್ಛೆ ಹೋಗಿದ್ದು, ಆಗ ತನ್ನನ್ನು ದುರ್ಬಳಕೆ ಮಾಡಿದ್ದಾನೆಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ದೂರಿನ ಆಧಾರದ ಮೇರೆಗೆ ವಿದ್ಯಾರ್ಥಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಅಮಿಂಗಾನ್‌ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ವಿದ್ಯಾರ್ಥಿನಿಯನ್ನು ಗುವಾಹಟಿ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ :ಜನಾಶಿರ್ವಾದ ಸಿಕ್ಕರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬಹುದು : ರಮೇಶ್‌ ಕುಮಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next